Saturday, December 15, 2012

ನ್ಯಾನೋ ಕಥೆಗಳು



ಊಟದ  ಸಮಯ
ಬಹುಮಹಡಿ ಕಟ್ಟಡದ ಒಂದು ಫ್ಲಾಟ್ ನಲ್ಲಿ ” ದೀಪು ..! ಬಡಿಸಿಟ್ಟ  ಅನ್ನ ಎಲ್ಲಾ  ಆರತಾ  ಇದೆ  , ಊಟದ ಸಮಯ ಮೀರಿಹೋಗ್ತಾ ಇದೆ  ಬಾ ಮರಿ ಊಟಕ್ಕೆ “ ಅಮ್ಮನ ಪ್ರೀತಿಯ ಕರೆ .ಕಂಪ್ಯೂಟರ್  ಗೆಮ್ನಲ್ಲಿ  ನಲ್ಲಿ ದೀಪುಗೆ ಊಟದ ಕಡೆ ಲಕ್ಷವಿಲ್ಲ . ಅಲ್ಲೇ ಕಟ್ಟಡದ ಕೆಳೆಗೆ  ಗುಡಿಸಿಲೊಂದರ ಮಂದು ಬೆಳಕಿನಲ್ಲಿ ಅರೆ ಬೆತ್ತಲ ಎಳೆ ಹುಡುಗನಿಗೆ ಅಂದಾದರೂ ಹಿಡಿ ಅನ್ನ  ಸಿಕ್ಕರೆ ಅದೇ ಅವನಿಗೆ  ಊಟದ  ಸಮಯ .

ಬಂದ್ ಗಲಾಟೆ
ವಿರೋಧ ಪಕ್ಷ ನೀಡಿದ ಬಂದ ಕರೆಗೆ ಊರೊಳಗೆಲ್ಲಾ ಗಲಾಟೆ ಎಬ್ಬಿಸಲೂ ಇವನಿಗೂ  ಬುಲಾವ್ ಬಂದಿತ್ತು ,ಒಂದು ಪೆಗ್ಗ್ ಏರಿಸಿ ತನ್ನ ಸಂಗಡಿಗರೊಂದಿಗೆ ಎರಡು ಬಸ್ಸಿಗೆ ಬೆಂಕಿ ಹಚ್ಚಿದ ,ವಿಜಯೋತ್ಸವದ ನಗೆ ಬೀರುತ್ತ  ಅವೇಶದಿಂದ ಎಲ್ಲರ ಜೊತೆ   ಸಿಕ್ಕ  ಸಿಕ್ಕ ಅಂಗಡಿ ಗಾಜುಗಳಿಗೆ ಕಲ್ಲು ಎಸೆಯುತ್ತ  ಓಡತೊಡಗಿದ  .ಇವನು ಹೊಡೆದ ಕಲ್ಲೊಂದು ಅಲ್ಲೇ ಅಂಗಡಿಯ ಒಳಗಿದ್ದ ಮಗನ ತಲೆಗೆ ಬಡಿದು ರಕ್ತ ಸುರಿಸುತ್ತ ಎಚ್ಚರ ತಪ್ಪಿ ಬಿದ್ದದ್ದು ಇವನಿಗೆ ಗೊತ್ತೇ ಅಗಲಿಲ್ಲಾ .

ನಂಬಿಕೆ
ಆ ಹಳ್ಳಿಯಲ್ಲಿ  ಬರಗಾಲ ತಾಂಡಾವಾಡುತ್ತಿತ್ತು. ಮಳೆ  ಇಲ್ಲದೆ ರೈತರು ಕಂಗಾಲಾಗಿದ್ದರು .   ಮಳೆಗಾಗಿ ನೀರಿಕ್ಷಿಸಿ   ಬತ್ತಿ ಹೋದ ಕಣ್ಣೇರು , ಭೂಮಿ ತಾಯಿಯ ಬೆಂದೊಡಳು ದಾಹ , ಸಾವು ನೋವುಗಳ  ಸಂಕಟದ ನಡುವೆ  ಹಳ್ಳಿ ಜನರು ಕೊನೆಯ ಪ್ರಯತ್ನವೆಂಬಂತೆ  ಹೋಮವೊಂದನ್ನು  ನಡೆಸಲು  ಮುಂದಾದರು . ಇತ್ತ  ಮಳೆಗಾಗಿ  ಹೋಮ ಶುರುವಾಗುತ್ತಿದ್ದಂತೆ ಹಳ್ಳಿ ಜನರೆಲ್ಲ  ನಿರೀಕ್ಷೆಯ  ಭಾವ ಹೊತ್ತು  ದೇವರನ್ನು  ಭಕ್ತಿಯಿಂದ  ಬೇಡುತ್ತಿದ್ದರೆ , ಒಬ್ಬ ಬಾಲಕ ಮಾತ್ರ  ಕೊಡೆ ಹಿಡಿದು ಕೊಂಡು  ಆಕಾಶವನ್ನೇ  ದಿಟ್ಟಿಸಿ  ನೋಡುತ್ತಿದ್ದಾನೆ .

ಭ್ರಮನಿರಸನ

ಯೌವನದ   ಹೊಸ್ತಿಲಿಗೆ  ಕಾಲಿಟ್ಟ  ಸುಮನಳಿಗೆ  ಹಕ್ಕಿಯಂತೆ ಹಾರುವ ಮನಸು , ಸುಂದರ ಬಣ್ಣದ  ಕನಸುಗಳು . ರೂಪವತಿ ,  ವಿದ್ಯಾವಂತೆ  ಮೃದು ಸ್ವಭಾವದ ಹುಡುಗಿ ಸುಮನ ತನ್ನ ಬಾಳಸಂಗಾತಿಯಾಗುವನ ಬಗ್ಗೆ  ಸಾಕಷ್ಟು ಆಸೆ  ಆಕಾಂಕ್ಷೆ ಗಳ ನಿಟ್ಟು ಕೊಂಡಿದ್ದಳು .  ಇತ್ತೀಚಿಗೆ  ಅವಳ ಕನಸಿನಲ್ಲೂ  ಒಬ್ಬ ಸುಂದರ   ಯುವಕ   ಶ್ವೇತ  ಕುದರೆಯನ್ನೇರಿ  ಬಂದಂತೆ  ,   ಬೊಗಸೆಯ ತುಂಬಾ ಗುಲಾಬಿ ಹೊವುಗಳನ್ನು   ಹಿಡಿದು  ನಿಂತ ಇವಳನ್ನು  ವರಿಸಿ ,  ಗುಣ ಸಂಪನ್ನನಾದ  ಆವನ ಪ್ರೀತಿಯ ಮಹಾಪೂರದಲ್ಲಿ  ಕೊಚ್ಚಿಹೋದ ಹಾಗೆಲ್ಲಾ   ಕನಸುಗಳು  ಅವಳಂತೆಯೇ  ನಸು ನಕ್ಕಿದ್ದವು  .  ಅಂತೂ ಅವುಗಳಿಗೆ ರೆಕ್ಕೆ ಪುಕ್ಕ ಮೂದುವ  ಮೊದಲೇ  ಅಪ್ಪ ಅಮ್ಮ ನೋಡಿದ  ಶ್ರೀಮಂತ ಹುಡುಗನ  ಜೊತೆ ಮದುವೆಯೂ ನಡೆದು ಹೋಯಿತು .
 ಇನ್ನೇನು  ವಿಧಿಯಿಲ್ಲದೇ ಅವಳ ಕನಸಿನ  ಶ್ವೇತ  ಕುದುರೆಯ ರಾಜಕುಮಾರನಿಗೆ  ವಿದಾಯ ಹೇಳಿ ಗಂಡನ ತೋಳ್ತೆಕ್ಕೆಯಲ್ಲಿ  ಕರುಗುತ್ತಿರುವಾಗ ,  ಕೇಳಿಸಿದ್ದು ಕುಡಿತದ ಅಮಲಿನಲ್ಲಿದ್ದ ಗಂಡನ  ನುಡಿಗಳು . " ಛೆ  ಇವತ್ತು ರೇಸಿನಲ್ಲಿ  ಆ ಹಾಳು  ಬಿಳಿ ಕುದುರೆ ಮೇಲೆ  ಹಾಕಿದ್ದ ಹಣ ಎಲ್ಲಾ ಹೋಯ್ತು  ಥೂ ! ಎಲ್ಲ  ನಿನ್ನ  ಕೆಟ್ಟ  ಕಾಲ್ಗುಣ,   ನಿನ್ನನ್ನು ಮದುವೆಯಾಗಿದ್ದ ಘಳಿಗೆಯೇ ಸರಿ ಇಲ್ಲಾ   "  ಇನ್ನು  ಏನೇನೋ ಬಡಬಡಿಸಿದನೋ  ಗೊತ್ತಿಲ್ಲ  ಆದರೆ ಅವಳ  ಸುಂದರ  ಕನಸುಗಳೆಲ್ಲಾ  ಕಣ್ಣೀರಾಗಿ  ಹರಿಯ ತೊಡಗಿದವು .


5 comments :

  1. ಮೊದಲ ಕಥೆಯ ವೈರುಧ್ಯ ಮುಂದಿನ ಪೀಳಿಗೆಯ ಅವಸ್ಥೆಯ ಸತ್ಯ ದರ್ಶನ.

    ಎರಡನೇ ಕಥೆಯ ನಿಜವಾದ ದುರಂತ ನಮ್ಮವರದೇ ಹುಂಬತನದ ಸಂಕೇತ.

    ಒಟ್ಟಾರೆ ಸೂಪರ್ರೂ.

    ReplyDelete
  2. good ones keep it up. request you to visit my blog too usdesai.blogspot.in

    ReplyDelete
  3. ಧನ್ಯವಾದಗಳು ಬದ್ರಿನಾಥ್ , ಉಮೇಶ್ ಅವರೇ .

    ReplyDelete
  4. ಬಂದ್ ಮತ್ತು ನಂಬಿಕೆ ಎರಡೂ ಕತೆಗಳು ಅರ್ಥಭರಿತವಾಗಿವೆ.

    ReplyDelete
  5. ಬಂದ್ ಮತ್ತು ನಂಬಿಕೆ ಎರಡೂ ಕತೆಗಳು ಅರ್ಥಭರಿತವಾಗಿವೆ.

    ReplyDelete