Wednesday, May 9, 2018

ಪಾಕದ ರೀಮಿಕ್ಸ್

ಈಗ ಎಲ್ಲೆಲ್ಲೂ ರೀ-ಮಿಕÕ…, ರೀ-ಮೇಕ್‌ಗಳದೇ ಯುಗ ! ನಮ್ಮ ಹಳೆಯ ಜನಪ್ರಿಯ ಚಿತ್ರಗೀತೆಗಳನ್ನು  ರೀಮಿಕÕ… ಎನ್ನುವ  ಹೆಸರಿನಲ್ಲಿ  ಯಾವದೋ ಮಸಾಲಾ ಬೆರೆಸಿ ಒಂದಿಷ್ಟು  ರಾಕ್‌ ಹಿಮ್ಮೇಳದ  ಗದ್ದಲವೆಬ್ಬಿಸಿ ನಮ್ಮ  ಕಿವಿಗಳಿಗೆ ಅಬ್ಬರಿಸಿದರೂ ನಾವು ಬೊಬ್ಬಿರಿಯದೆ ಬೆರಗಿನಿಂದ ಕಣ್ಣರಳಿಸಿ ಬಾಚಿಕೊಂಡು ಬಿಡುತ್ತೇವೆ.
ಒಟ್ಟಿನಲ್ಲಿ ಹಳೆಯದನ್ನೇ ಹೊಸ ರೀತಿಯಲ್ಲಿ ಆಕರ್ಷಕವಾಗಿ ತೋರುವಂತೆ ಮಾಡುವ ಈ ಕಲೆ ಸಿನೆಮಾ ರಂಗದಿಂದ ನನ್ನ ಪಾಕ ರಂಗಕ್ಕೂ ಪ್ರವೇಶ ಮಾಡಿತ್ತು!
ಆದರೆ ಈ ರೀ-ಮಿಕÕ… ಗಿಮ್ಮಿಕ್ಕನ್ನು ನನ್ನ ಅಡುಗೆಯಲ್ಲಿ  ಬಳಸಿಕೊಳ್ಳಲು ನಾನೂ ಕೂಡ  ಶುರುವಿಟ್ಟುಕೊಂಡಿದ್ದು (ಅಳತೆ ಗೊತ್ತಾಗದೆ) ಹೆಚ್ಚಾಗಿ ಮಾಡಿದ ಅಡುಗೆ ಪೋಲಾಗಿ  ಹೋಗಬಾರದೆಂಬುವ ಉದ್ದೇಶದಿಂದ. "ಮಾಡಿದ್ದು (ನೀನೆ ) ಉಣ್ಣೆ ಮಾರಾಯ್ತಿ' ಎಂದು ಹೆಚ್ಚಿಗೆ ಉಳಿದದ್ದನ್ನೆÇÉಾ ನಾನೇ ಉಂಡು, ಗುಂಡಾಗಿ ಹೋದ ಮೇಲೆ ಈ ಬುದ್ಧಿ ಕಲಿತದ್ದು ಎಂದರೂ ತಪ್ಪಾಗಲಾರದು. ಇನ್ನು ಈ ಊರಿನಲ್ಲಿ  (ಅವರ ಪುಣ್ಯಕ್ಕೆ) ಕೊಂಡೊಯ್ಯಲು  ಕೆಲಸದವರ ಕೊರತೆಯೂ ಒಂದು  ಕಾರಣವಾಗಿ  ನನ್ನ ಪಾಕಶಾಲೆಯಲ್ಲಿ  ಈ  ರೀಮಿಕ್ಸ್‌  ಕಲೆಯನ್ನು  ಪೋಷಿಸಿಕೊಂಡು  ಬಂದಿ¨ªೆ.
ಒಮ್ಮೊಮ್ಮೆ ಅಡುಗೆ ಹೆಚ್ಚಿಗೆ ಉಳಿದಲ್ಲಿ, ಮಾರನೆಯ ದಿನವೂ ಅದನ್ನು ನಾವೇ ಖಾಲಿ ಮಾಡುವ ಪಾಕದ ರೀ-ಮಿಕÕ… ಐಡಿಯಾಗಳು ನನ್ನ ಖಾಲಿ ತಲೆಗೆ ಹಠಾತ್ತಾಗಿ ಸಾಲು  ದೀಪದಂತೆ ಹೊಳೆದು ನನ್ನ ಹಳೆ ಪಾಕಕ್ಕೆ  ಹೊಸ ಮಸಾಲಾಗಳಿಂದ ಚೆಂದದಿ ಮೇಕಪ್‌ (ಚಿಂದಿಯಾಗದಂತೆ) ಮಾಡಿ ಹೊಸ ರೂಪ ಕೊಡುವುದರಲ್ಲಿ ಯಶಸ್ವಿ ಆಗುತ್ತಿ¨ªೆ !
ಉದಾಹರಣೆಗೆ ಒಮ್ಮೆ  ರಾಮನವಮಿ ಹಬ್ಬದಲ್ಲಿ ನಾ ಮಾಡಿದ ಹೆಸರುಬೇಳೆ ಕೋಸಂಬರಿ ಜೊತೆಗೆ ಅವರಿವರು ಕೊಟ್ಟಿದ್ದೂ ಡಬ್ಬಿಯ ತುಂಬಾ ಕುಳಿತು ನನ್ನನ್ನು ಕೆಣಕಿದಾಗ  ಒಂದಿಷ್ಟು ತಲೆ ಕೆರೆದುಕೊಳ್ಳದೆ ಅದನ್ನು ಪಲ್ಯದೊಳಗೆ ಹದವಾಗಿ ಬೆರೆಸಿ ಮನೆಯವರ ಮೂಗಿಗೆ ಕಿಂಚಿತ್ತೂ ಸಂಶಯ ಬಾರದಂತೆ ಬಡಿಸಿ ಮೆಚ್ಚುಗೆೆಗೂ ಪಾತ್ರಳಾಗಿ¨ªೆ.
ಇನ್ನು ಕೆಲವೊಮ್ಮೆ ಇಂಥ ಒಣ ಪಲ್ಯಗಳೆ ಹೆಚ್ಚಾಗಿ ಉಳಿದುಕೊಂಡಾಗ, ಮತ್ತದನ್ನೇ ಬಿಸಿ ಮಾಡಿ ತಿನ್ನಲು ಬೇಸರವೆನಿಸಿ ಅವುಗಳನ್ನು ಪರೋಟಾದ ಹಿಟ್ಟಿನಲ್ಲಿ  ಸೇರಿಸಿ  ಲಟ್ಟಣಿಗೆಯಿಂದ ಹಿತವಾಗಿ ಮಸಾಜ… ಮಾಡಿಸಿ ಹೆಂಚಿನ ಮೇಲೆ ಕೆಂಪಾಗಿಸಿ ಹೊಸ ರುಚಿಯೆಂಬ ಹೆಸರಿನಲ್ಲಿ ಮನೆಯವರ ಹೊಟ್ಟೆ  ತಂಪಾಗಿಸುತ್ತಿದ್ದದ್ದುಂಟು.
ಇನ್ನು ಉಳಿದ ಸಲಾಡ್‌ಗಳು ಅಕ್ಕಿ ರೊಟ್ಟಿ ಹಿಟ್ಟಿನೊಂದಿಗೆ ಸೇರಿ ಮರುಜನ್ಮ  ಪಡೆದರೆ ಕೊನೆಯಲ್ಲಿ ಉಳಿದ ಬ್ರೆಡ್‌ ಪೀಸ್‌ಗ‌ಳೂ ಕೂಡ ಸರಾಗವಾಗಿ ಚಪಾತಿ ಹಿಟ್ಟಿನ ಹೊಟ್ಟೆ  ಸೇರುತ್ತಿದ್ದವು.
ಹೇಳಬೇಕೆಂದರೆ, ಕೆಲವು ಗೃಹಿಣಿಯರಿಗೆ ಈ ರೀ-ಮಿಕÕ… ಕಲೆ ಸುಲಭವಾಗಿ ಒಲಿದಿರುತ್ತದೆ, ಕೆಲವರು ಸಂದರ್ಭಕ್ಕನುಸಾರವಾಗಿ ಈ ಕಲೆಯನ್ನು ಅಡುಗೆಯನ್ನು ಕುಲಗೆಡಿಸದೆ ಕರಗತ ಮಾಡಿಕೊಳ್ಳಬಹುದು.
ಇನ್ನು ನಮ್ಮ  ಮನೆಯಲ್ಲಿ  ಹೆಚ್ಚಿಗೆ ಉಳಿದ ಚಪಾತಿಗಳು ಮಾಲೆದುಂಡಿ ಅಥವಾ ಮಾಲದಿಯಾಗಿ (ಸಿಹಿ ತಿನಿಸು), ಇಡ್ಲಿಗಳು ಇಡ್ಲಿ ಫ್ರೈಗಳಾಗಿ ರೂಪಾಂತರಗೊಳ್ಳುತ್ತಿದ್ದವು. ಹೀಗೆ ಹೆಚ್ಚಿನಡುಗೆಯನ್ನು ಬಿಸಾಡದೆ ಮನೆಯವರ ಹೊಟ್ಟೆಗೂ (ಹೆಚ್ಚಿನ) ಅಪಾಯವಾಗದಂತೆ ನನ್ನ ವಿವಿಧೋಪಾಯಗಳ ದಂಡು ಇದ್ದಂತೆ, ಅಡುಗೆ ಕಡಿಮೆಯಾದದ್ದನ್ನು  ಹೆಚ್ಚಾಗಿಸುವ ತಂತ್ರವನ್ನು ಅತ್ತೆಯವರು ನಮ್ಮ ಮದುವೆಯಾದ ಹೊಸತರಲ್ಲಿ ತಿಳಿಸಿಕೊಟ್ಟಿದ್ದರು.
ಕೆಲವೊಮ್ಮೆ ಸಂಜೆಗೆ ಸಾರು,  ಹುಳಿ ಮನೆಮಂದಿಗೆ ಸಾಲದೆನಿಸಿದಾಗ, "ಅದಕ್ಕೊಂದಿಷ್ಟು  ಗಂಗಾ ಜಮುನಾ ಸೇರಿಸವ್ವ' ಎನ್ನುವ ಅತ್ತೆಯವರ ಕೋಡ್‌ವರ್ಡ್‌ ಅನ್ನು  ಡೀ-ಕೋಡ್‌ ಮಾಡಿದಾಗ ತಿಳಿದದ್ದು ನೀರು ಸೇರಿಸಿ ಜೊತೆಗೊಂದಿಷ್ಟು ಮಸಾಲೆ ಹಾಕಿ  ಬೆಳೆಸಿ ಬಡಿಸು ಎಂಬುದಾಗಿ.
ಆದರೆ ನನ್ನಡುಗೆಯನ್ನು ಸವಿದು ಮೆಚ್ಚಿಕೊಳ್ಳುವ  ನನ್ನ ಮಗರಾಯನ ಮೂಗು  ಮಾತ್ರ  ಶುನಕದ ಮೂಗಿಗಿಂತಲೂ ತೀಕ್ಷ್ಣವಾಗಿದ್ದು ನನ್ನ ಈ ಎಲ್ಲ ರೀಮಿಕÕ… ರಹಸ್ಯವನ್ನು  ಭೇದಿಸಲು ಟೀವಿ  ಚಾನೆಲ್‌ನವರು ಸ್ಟಿಂಗ್‌ ಆಪರೇಶನ್‌ ಮಾಡುವಂತೆ  ಸದಾ ಮುಂದಿರುತ್ತಿದ್ದ. ಅವನು ಚಾಪೆಯ ಕೆಳಗೆ ತೂರಿದರೆ ನಾ ರಂಗೋಲಿ ಕೆಳಗೆ ತೂರಿ ಒಟ್ಟಿನಲ್ಲಿ ನನ್ನ ಪಾಕ ಪ್ರಯೋಗಗಳನ್ನು ರುಚಿಯಾಗಿ ಮಾಡಿ ಬಡಿಸಿ ಅವನು ತಕರಾರಿಲ್ಲದ ಹಾಗೆ ತಿನ್ನುವಂತೆ ಮಾಡುವ ನನ್ನ ಸಾಹಸಕ್ಕೆ ನನ್ನ ಬೆನ್ನನ್ನು (ನೋವಿದ್ದರೂ) ನಾನೇ ತಟ್ಟಿಕೊಂಡಿದ್ದುಂಟು!
ಇನ್ನು ಮೊದಲಿನಿಂದಲೂ ಕಸದಿಂದ ರಸ ತಯಾರಿಸುವುದು ನನ್ನ ಇಷ್ಟದ  ಹವ್ಯಾಸ ಹಾಗೂ ಅಚ್ಚುಮೆಚ್ಚಿನ ಆಸಕ್ತಿಗಳÇÉೊಂದು. ಹಾಗಾಗಿ, ಹಳೆ ಕುಕ್ಕರ್‌ ಗಾಸ್ಕೆಟ್‌, ಐಸ್‌ಕ್ರೀಮ…  ಕಡ್ಡಿಗಳು, ಮುರಿದ ಬಳೆಗಳು, ಫ್ಯೂಸ್‌ ಹೋದ ಬಲ್ಬಗಳು, ಹಳೆ ಬಾಟಲಿಗಳು ಇತ್ಯಾದಿ ನನ್ನ ಮಿನಿ ಗೋಡೌನಿಗೆ ಸೇರಿ ನನ್ನ ಬಿಡುವಿನ ವೇಳೆ ಹಾಗೂ ಮೂಡಿಗನುಸಾರವಾಗಿ  ಆಲಂಕಾರಿಕ  ವಸ್ತುಗಳಾಗಿ ಹೊಸ ರೂಪ ಪಡೆದು ಕೊಳ್ಳುತ್ತಿದ್ದವು.
ಈಗಲೂ ಅದೇ ಕಸ ಅಥವಾ ಇಂತಹ ಹಳೆ ವಸ್ತುಗಳನ್ನು ಕಂಡರೆ ನನಗೆ  ಎಲ್ಲಿಲ್ಲದ ಪ್ರೀತಿ. ಆದರೀಗ ಅವುಗಳನ್ನು  ಕಲಾತ್ಮಕವಾಗಿ ಮಾರ್ಪಾಡು ಮಾಡಲು ಮೊದಲಿದ್ದ ಆಸಕ್ತಿ  ಹಾಗೂ ತಾಳ್ಮೆ ಆಗಾಗ ಕೈ ಕೊಡುತ್ತಿದ್ದವು. ಹಾಗಾಗಿ, ಕಸದಿಂದ ರಸ ಮಾಡುವ ಬದಲು ಕಸವೇ ಹೆಚ್ಚಾದಾಗ ನಮ್ಮನೆಯವರು ತಾಳ್ಮೆಯೂ ಕೈ ಕೊಟ್ಟು ನನಗೆ ಗೊತ್ತಾಗದಂತೆ  ಸಾಮೂಹಿಕವಾಗಿ ಅವಕ್ಕೆಲ್ಲ  ಕಸದ ತೊಟ್ಟಿಯ ದರ್ಶನ ಮಾಡಿಸಿ ಬಿಡುತ್ತಿದ್ದರು. ನಂತರದ ದಿನಗಳಲ್ಲಿ ಅವರ ಈ ಘೋರ ಅಪರಾಧದ ಅರಿವಾದಾರೂ ಮತ್ತೆ ಯಥಾಪ್ರಕಾರ ನಾರು/ಕಸ ಸಂಗ್ರಹಣೆ ಶುರುವಿಟ್ಟುಕೊಳ್ಳುತ್ತಿದ್ದೆ.
ನನ್ನ ಇದೇ ಬುದ್ಧಿ ನನ್ನ ಅಡುಗೆ ರೀಮಿಕÕ…ಗೂ ತಳಕು ಹಾಕಿಕೊಂಡಿದ್ದು ಎಂದರೆ ತಪ್ಪಾಗಲಾರದು. ಹಾಗಾಗಿ ನಿಮ್ಮನ್ನು ನನ್ನ ಇನ್ನೊಂದಿಷ್ಟು  ಫ್ಲ್ಯಾಶ್‌ಬ್ಯಾಕಿಗೆ ಕರೆದೊಯ್ಯಲೇಬೇಕು.
ಕೇಕ್‌ ತಯಾರಿಸುವುದನ್ನು ನಾನು ಆ ದಿನಗಳಲ್ಲಿ ಆಗಷ್ಟೇ ಹುರುಪಿನಿಂದ ಕಲಿಯುತ್ತಿ¨ªೆ. ಒಂದೆರಡು ಸರಿ ಬಂದು, ಇನ್ನು ಕೆಲವು ಬಾರಿ ಏನೋ ವ್ಯತ್ಯಾಸವಾಗಿ ಕೇಕ್‌ ಆಗುವ ಬದಲು ಹಲ್ವ  ಆಗಿದ್ದೂ  ಇತ್ತು. ಆದರೂ ನನ್ನ ಕೇಕ್‌ ಕಂಡು ಯಾರೇ ಕೇಕೆ ಹಾಕಿ ನಕ್ಕರೂ ನನ್ನ ಕೇಕ್‌ ಪ್ರಯೋಗಗಳಿಗೆ ಯಾವ ಬರವೂ ಬಂದಿರಲ್ಲಿಲ್ಲ.
ಅಂತೆಯೇ ಒಮ್ಮೆ ಖರ್ಜೂರದ ಕೇಕ್‌ ಮಾಡುವ ಸಾಹಸಕ್ಕೆ ಕೈ ಹಾಕಿ¨ªೆ. ಮಾಡುವ  ವಿಧಾನವನ್ನು ಸರಿಯಾಗಿ ಅನುಸರಿಸಿದರೂ ಏನೋ ಏರುಪೇರಾಗಿ, ಕೇಕ್‌ ತಯಾರಾದಾಗ ಬಳಿಕ, ಮೇಲ್ನೋಟಕ್ಕೆ ಸುಂದರವಾಗಿ ಕಂಡರೂ ನನ್ನ ಫೀಮೇಲ… ನೋಟಕ್ಕೆ ಎಲ್ಲವೂ ಒಂದೇ ಏಟಿಗೆ ಅರಿವಾಗಿತ್ತು. ಅರ್ಥಾತ್‌ ನನ್ನ ಕೇಕ್‌ ತೋಪಾಗಿ, ಮಧ್ಯ ಭಾಗ ಕಿಂಚಿತ್ತೂ ಬೇಯದೆ ಹಸಿ ಮು¨ªೆಯಾಗಿ ಮೌನದಿ ಕುಳಿತುಬಿಟ್ಟಿತ್ತು. ಆಗ ತಕ್ಷಣ ಜಾಗೃತವಾಗಿದ್ದೇ ನನ್ನ ರೀ-ಮಿಕÕ… ಬುದ್ಧಿ. ಆ ಮು¨ªೆಗೆ ಒಂದಿಷ್ಟು ಹೊಸ  ಸಾಮಗ್ರಿಗಳನ್ನು ಸೇರಿಸಿ ಸಿಹಿ ಹೂರಣವಾಗಿಸಿ, ಮಗ ಸ್ಕೂಲಿನಿಂದ ಬರುವಷ್ಟರಲ್ಲಿ   ರುಚಿಯಾದ  ಖರ್ಜೂರದ  ಹೋಳಿಗೆ ತಯಾರಿಸಿ¨ªೆ.
"ಅಮ್ಮ, ನೀನು ಮುಂಜಾನೆ ಖರ್ಜೂರ ಕೇಕ್‌ ಎಂದಿದ್ದ$Âಲ್ಲ, ಹೋಳಿಗೆ ಮಾಡಿದ್ದೇಕೆ?' ಎಂದು ಮಗರಾಯ ತನ್ನ ನೆನಪಿನ ಶಕ್ತಿಯನ್ನು ಪ್ರದರ್ಶಿಸಿ ನನ್ನನ್ನು ಕೆಣಕಿ ತಕರಾರು ತೆಗೆದಾಗ, "ಈ ಹೋಳಿಗೆ ಅದಕ್ಕಿಂತಲೂ ರುಚಿ ಇದೆ. ತಿನ್ನು ಮರಿ. ಮುಂದಿನ  ಬಾರಿ ಖಂಡಿತ ಕೇಕ್‌ ಮಾಡಿ ಕೊಡುವೆ' ಎಂದು ಹೋಳಿಗೆಯ ರುಚಿ ತೋರಿಸಿದಾಗ, "ಸೂಪರ್‌ ಅಮ್ಮ' ಎಂದವನ ಉದ್ಘಾರಕ್ಕೆ ನನ್ನ ತಲೆ ಸಂತಸದಿಂದ ಗಿರ್‌ ಎಂದಿದ್ದು  ಹೇಗೆ  ತಾನೇ ಮರೆಯಲಿ?
ನನ್ನ ಈ ರೀ-ಮಿಕÕ… ಕಲೆಯ ಫ‌ಲಾನುಭಾವಿಗಳಾದ ನಮ್ಮ ಮನೆಯವರೂ (ನನ್ನ ) ಸಹವಾಸ ದೋಷದಿಂದ ಒಮ್ಮೊಮ್ಮೆ ಈ ವಿಷಯದಲ್ಲಿ  ಸೂಪರ್‌ ಸುಪ್ರೀಮ್‌ ಐಡಿಯಗಳೊಂದಿಗೆ ನನಗೆ ಸಾಥ್‌ ಕೊಟ್ಟಿದ್ದುಂಟು ಎಂದರೆ ನೀವು ಖಂಡಿತ ನಂಬಲಿಕ್ಕಿಲ್ಲ.
ಒಮ್ಮೆ  ನನ್ನ ಪಾಕ ಪ್ರಯೋಗಾಲಯದಲ್ಲಿ  ನನ್ನ ಅಚ್ಚು ಮೆಚ್ಚಿನ ಮೈಸೂರ್‌ಪಾಕ್‌ ಮಾಡುತ್ತಿದ್ದೆ. ಅದು ಕೈಕೊಟ್ಟು ಕೊನೆಗೆ ಮೈಸೂರ್‌ಪಾಕ್‌ ಬರ್ಫಿ ಆಗುವ ಬದಲು ಪುಡಿ ಪುಡಿಯಾಗಲು, ನನ್ನ ಪೆಚ್ಚು  ಮುಖವನ್ನು ಕಂಡ ಇವರು, ""ಯಾಕೆ ಬೇಜಾರ್‌  ಮಾಡ್ಕೊತೀಯಾ? ಮತ್ತೆ ಇದನ್ನೇ ಮಿಕ್ಸಿ ಗೆ ಹಾಕಿ ನುಣ್ಣಗೆ ಪುಡಿ ಮಾಡಿ ಬೇಸನ್‌ ಲಾಡು ಮಾಡಿ ಬಿಡು'' ಎಂದು ರೀ-ಮಿಕÕ… ಕಂ ರೀ-ಸೈಕಲ… ಉಪಾಯವನ್ನೂ ಕೊಟ್ಟು  ಸಹಕರಿಸಿದ್ದರು.
ಒಟ್ಟಿನಲ್ಲಿ  ನೀವೇನೇ ಅನ್ನಿ , ನನ್ನ  ಈ ಪಾಕ ಪ್ರಯೋಗಗಳು ತಿನ್ನಲು  ರುಚಿಯೆನಿಸಿದಾಗ ನಮ್ಮವರು ಮೆಚ್ಚಿ ನನಗೆ "ರೀ-ಮಿಕÕ… ರಾಣಿ' ಎಂಬ ಬಿರುದು ಕೊಟ್ಟಾಗಲಿಂದ ನನ್ನ ಈ ಕಲೆಗೆ ಉತ್ಸಾಹದ ಗರಿ ಮೂಡಿದೆ. ಒಂದು ಬುಕ್ಕಾದರೂ ಬರೆದುಬಿಡುವ ಜೋಶ್‌ ಬಂದಿದೆ. ಇದಕ್ಕೆ ನಿಮ್ಮ ಪ್ರೋತ್ಸಾಹ ಇದೆ ತಾನೇ?
ಆರತಿ ಘಟಿಕಾರ್‌, ದುಬೈ
ಉದಯವಾಣಿ ಸಾಪ್ತಾಹಿಕ ಸಂಪದ ದಲ್ಲಿ ಪ್ರಕಟಿತ ಲೇಖನ 
https://www.udayavani.com/kannada/news/weekly-supplement/150082/re-make-the-syrup-room

ಸಂಗೀತ ಗೋತಾ ಆದಾಗ


                                                 ಸಂಗೀತ ಗೋತಾ ಆದಾಗ 
ನಾನಾಗ ಐದನೆಯ ತರಗತಿಯಲ್ಲಿರಬೇಕು. ಹಾಡು, ಸಂಗೀತ ಎಂದರೆ ನನಗೆ ಬಹಳ ಅಚ್ಚುಮೆಚ್ಚು. ಗಾಯಕಿಯಾಗ (ಲೇ) ಬೇಕೆನ್ನುವುದು ನನ್ನ ಹುಚ್ಚು ಕನಸು. ಹೀಗಾಗಿ, ಸ್ವರ, ತಾಳ, ಜ್ಞಾನ ಇರಲಿ, ಬಿಡಲಿ ಮುಖ ಪೆಚ್ಚು ಮಾಡಿಕೊಳ್ಳದೆ ಬಾತ್‌ರೂಮ್‌, ಪಡಸಾಲೆ ಹೀಗೆ ಎಲ್ಲೆಂದರಲ್ಲಿ, ಏನೇ ಮಾಡುತ್ತಿರಲಿ ಸದಾ ಏನಾದರೂ ಹಾಡುತ್ತ ತಿರುಗಾಡುವುದನ್ನು ನೋಡಿ ಕೇಳಿ, ಸಾಕಾಗಿ ಅಮ್ಮ  ನನ್ನನ್ನು  ಸಂಗೀತ  ಶಾಲೆಗೆ ಸೇರಿಸಿದ್ದರು.
ಅÇÉಾದರೂ ಗುರುಗಳ ಬಳಿ ಸಂಗೀತ ಕಲಿತು ನನ್ನ ಮಗಳು ಸುಮಧುರ ಕಂಠದ ಗಾಯಕಿ ಆಗುವಳೇನೋ ಎನ್ನುವ  ಅವರ  ಕನಸನ್ನು ನನಸು ಮಾಡುವ ಹುಮ್ಮಸ್ಸಿನಲ್ಲಿ  ನಾನು ಗುರುಗಳ ಬಳಿ  ಸಂಗೀತ ಕಲಿಕೆ ಆರಂಭಿಸಿ¨ªೆ . ಶುರುವಿನಲ್ಲಿ  ಅವರು ನನ್ನ ಕೊಂಚ  ಗಡಸು ದನಿ, ಗಾನವೈಖರಿಗೆ ಸ್ವಲ್ಪ ಬೆದರಿದರೂ ನನ್ನ  ಕಲಿಯುವ  ಆಸಕ್ತಿಗೆ ಮೆಚ್ಚಿ  ಸಂಗೀತ ವಿದ್ಯೆಯನ್ನು  ನನಗೆ ಧಾರೆ ಎರೆಯಲು  ಬಹಳ ಸಾಹಸಪಟ್ಟರು!
ಆದರೇಕೋ ಮನೆಯಲ್ಲಿ ಅಮ್ಮ ಮಾಡಿಕೊಟ್ಟ ಕಷಾಯ ಕುಡಿದು ಸಿಕ್ಕಾಪಟ್ಟೆ  ತಾಲೀಮು ನಡೆಸಿ ಅದನ್ನು  ಗುರುಗಳ  ಮುಂದೆ ಹಾಡಿದಾಗ ಸ್ವರವೇಕೋ ಜಾರೋ ಬಂಡೆಯಾಗಿ ಬಿಡುತ್ತಿತ್ತು. ಇನ್ನು ತಾಳವೆಂಬುದು ನನ್ನ ಕೈ ತಪ್ಪಿಸಿಕೊಂಡು ಕಣ್ಣಾಮುಚ್ಚಾಲೆ ಆಡುತ್ತಿತ್ತು. ಆಗ ಗುರುಗಳು, "ಅಯ್ಯೋ! ನಾನು ಎಷ್ಟು ಸಲ  ಹೇಳಿಕೊಡಲಿ ನಿನಗೆ?'
"ಸರಿ ಹೀಗೆ ಹಾಡಮ್ಮ  ಮತ್ತೂಮ್ಮೆ! ಸಂಗೀತದಲ್ಲಿ  ಏಳು ಸ್ವರಗಳು, ಆದ್ರೆ ನೀನು ಹಾಡಿದರೆ ಎಂಟನೆ ಸ್ವರಾನೂ ಕೇಳಸುತ್ತಲ್ಲಮ್ಮಾ!' ಎಂದು ನವಿರಾಗಿ ಗದರಿದಾಗ, ಪೆಚ್ಚುಮೋರೆಯೊಂದಿಗೆ ಮನೆ ಸೇರಿ ನನ್ನ ತಂಬೂರಿಯನ್ನು  ಎದೆಗವಚಿಕೊಂಡು ದುಃಖೀಸುತ್ತಿ¨ªೆ.
ಏನೇ ಆದರೂ ನನ್ನ ಹಾಡಿನ ಮೇಲೆ ಅಮ್ಮನಿಗೆ ಅಪಾರವಾದ ಹೆಮ್ಮೆ!  ನಾನು ಸ್ವರಗಳು, ಭಜನೆ/ಕೀರ್ತನೆ ಹಾಡಲು ಶುರು ಮಾಡಿದರಂತೂ ಭಕ್ತಿಯಿಂದ ಕಣ್ಣ ಮುಚ್ಚಿ ಆಲಿಸುತ್ತಿದ್ದರು, ಸದ್ಯ ಕಿವಿ  ಮುಚ್ಚುತ್ತಿರಲಿಲ್ಲ ! ಅದನ್ನು  ನೋಡಿ  ನನ್ನಲ್ಲೂ ಇನ್ನಷ್ಟು (ಚೆನ್ನಾಗಿ)  ಹಾಡುವ ಹುರುಪು, ಜೋಶ್‌  ಜಾಗೃತವಾಗುತ್ತಿದ್ದವು. ನಾನು ಗಾಯಕಿ ಯಾಗುವ ಕನಸು  ರೆಕ್ಕೆ ಬಿಚ್ಚಿ ನರ್ತಿಸುತ್ತ, ಇಂಪಾಗಿ  ಮೋಹನ ರಾಗ ಹಾಡುತ್ತಿದ್ದವು.
ಒಟ್ಟಿನಲ್ಲಿ  ನನ್ನ ಸಂಗೀತಾಭ್ಯಾಸ   ದಟ್ಟ  ಕಾನನದಲ್ಲಿ ಅಲೆಮಾರಿ   ರಾಗಗಳನ್ನು ಬೆಂಬತ್ತಿ ಹಿಡಿಯುವ  ಸಾಹಸದಂತೆ ಭರದಿಂದ ಸಾಗಿತ್ತು. ಗುರುಗಳು ಕೂಡಾ ಅಮ್ಮನಿಗೆ, ""ನಿಮ್ಮ ಮಗಳು ಬಹಳ ಒಳ್ಳೆಯ   ವಿದ್ಯಾರ್ಥಿನಿ, ಹೇಳಿಕೊಟ್ಟ ಹಾಡುಗಳನ್ನೆಲ್ಲ  ಮಾರನೆಯ ದಿನವೇ ಕ್ಲಾಸಿನಲ್ಲಿ ಇವಳೇ  ಮೊದಲು ಹಾಡಿ ತೋರಿಸ್ತಾಳೆ'' ಎಂದಾಗ ಹೇಗೆ ಹಾಡ್ತಾಳೆ ಎಂದು ಪ್ರಶ್ನೆಮಾಡುವ ಸಾಹಸಕ್ಕೆ  ಎಂದೂ ಅಮ್ಮ ಕೈ ಹಾಕಿದವರಲ್ಲ. ಗುರುಗಳು ಹೀಗೆ ತಮ್ಮ ಮಗಳ ಕುರಿತು ಹೇಳಿದ ಒಂದೆರಡು ಮಾತುಗಳನ್ನೇ ಮೆಚ್ಚುಗೆಯಾಗಿ ಪರಿವರ್ತಿಸಿಕೊಂಡು ಹೃದಯದÇÉೇ  ಬೀಗಿದವರು. ""ಏನೇ ಅನ್ನಿ, ನಾ ಗಾಯಕಿ ಆಗುವ ಕನಸು ಕಪ್ಪು ಬಿಳುಪಿನಿಂದ  ರೂಪಾಂತರಗೊಂಡು  ರಂಗೇರ ತೊಡಗಿದ್ದವು.
ನನ್ನ ಸಂಗೀತ ಕಲಿಯುವ ಹುಚ್ಚು ಮತ್ತಷ್ಟು  ವಿಸ್ತಾರಗೊಂಡು ನಮ್ಮ ಮನೆಯ ಮೇಲೆ ಬಾಡಿಗೆಗಿದ್ದ  ಸಂಗೀತ ವಿಶಾರದ ಲಲ್ಲೂಪ್ರಸಾದ ಅವರಿಂದ ಹಿಂದೂಸ್ತಾನಿ ಸಂಗೀತ ಪ್ರಕಾರವನ್ನೂ ಸಂಜೆ ಸ್ಕೂಲ್‌ ಮುಗಿದ ಬಳಿಕ ಕಲಿಯುವಂತೆ  ಪ್ರೇರೇಪಿಸಿತ್ತು. ಅಲ್ಲಿ ಕೂಡ ಹಾಡುವಾಗ ತಾಳ-ಶ್ರುತಿಗಳನ್ನು ಅವರ ವಶಕ್ಕೆ  ಒಪ್ಪಿಸಿ ಹಾಡುವುದರ ಮೇಲಷ್ಟೇ ಗಮನ ವಿರಿಸುವುದು  ನನ್ನ ವಿಶೇಷ ಗುಣವೆಂದೇ ಹೇಳಬಹುದು. "ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ  ಹಾಡುವುದು ಅನಿವಾರ್ಯ ಕರ್ಮ ನನಗೆ' ಎಂಬ ಕವಿವಾಣಿಯಂತೆ ಭಾವಪೂರ್ಣವಾಗಿ ಹಾಡಲು ಪ್ರಯತ್ನಿಸುತ್ತಿ¨ªೆ. ಆದರೆ, ನನ್ನ ಆಲಾಪ್‌ಗ್ಳು ನಮ್ಮ ಅಕ್ಕಪಕ್ಕದವರಿಗೆ ಪ್ರಲಾಪದಂತೆ ಕೇಳಿಸುತ್ತಿದ್ದದ್ದು  ನನ್ನ ತಪ್ಪು ಖಂಡಿತ ಅಲ್ಲ.
ಇನ್ನು  ವಾರದ ರಜೆಯಲ್ಲಿ  ಶ್ರದ್ಧೆಯಿಂದ ಗಮಕ ಹಾಗೂ  ಭಾವಗೀತೆಗಳನ್ನು ಕಲಿಯಲು ಶುರುವಿಟ್ಟುಕೊಂಡಿ¨ªೆ. ಗುರುಗಳು ಭಾವಗೀತೆಗಳನ್ನು ಅಷ್ಟು ಭಾವಪೂರ್ಣವಾಗಿ ಹೇಳಿಕೊಟ್ಟಾಗ ನಾನು  ಕೂಡ ನನ್ನ (ಮನೋ)ಭಾವಕ್ಕೆ ಸರಿಹೊಂದಿಸಿಕೊಂಡು ಹಾಡಿ  ತೋರಿಸುತ್ತಿದ್ದಾಗ ಏಕೋ ಅವರ ಮುಖದಲ್ಲಿ ಮೂಕಭಾವ  ಮೂಡಿದ್ದು  ಗೋಚರವಾಗುತ್ತಿತ್ತು. ಇನ್ನು ನನ್ನ ಗಮಕದ  ತಾಲೀಮು ಮನೆಯಲ್ಲಿ ನಡೆಸಿದಾಗ ಅಕ್ಕ ಪಕ್ಕದ ಚಿಕ್ಕ ಹುಡುಗರು ಕೂಡ ಕುತೂಹಲದಿಂದ ನನ್ನ ಬಳಿ ಜಮಾಯಿಸುತ್ತಿದರು. ಆಗೆಲ್ಲ ಅಮ್ಮನ  ಮುಖದಲ್ಲಿನ ಖುಷಿಯ ಗೆರೆಗಳು ಸಂಭ್ರಮದ ಗೆಜ್ಜೆಕಟ್ಟಿ ಕುಣಿಯುತ್ತಿದ್ದವು.
ಇನ್ನು ನಮ್ಮ ಶಾಲೆಯಲ್ಲೂ  ನನಗೆ  ಚಿಕ್ಕಪುಟ್ಟ ಕಾರ್ಯಕ್ರಮಗಳಲ್ಲಿ ಹಾಡುವ ಅವಕಾಶ ಕೊಡುವಂತೆ  ನಮ್ಮ ಸಂಗೀತದ ಮಿಸ್‌ ಪಾರ್ವತಿ ಮೇಡಂನನ್ನು ಪರಿಪರಿಯಾಗಿ ಕೇಳಿಕೊಂಡಿ¨ªೆ. 
ಒಮ್ಮೆ ಒಂದು ಸಮೂಹ ಗಾಯನದಲ್ಲಿ ಹಾಡುವ ಸುವರ್ಣ ಅವಕಾಶ ನನಗೆ ಒದಗಿ ಬಂದಿತ್ತು, ನಾನೇ ಉತ್ಸಾಹದಿಂದ ಸೀದಾ  ಮೈಕ್‌ ಮುಂದೆಯೇ ಪ್ರತಿಷ್ಠಾಪನೆಯಾಗಿ ನನ್ನ ಗಾನಸುಧೆಯಿಂದ ಪ್ರೇಕ್ಷಕರನ್ನು ರಂಜಿಸುವ ಹುರುಪು ತೋರಿದಾಗ  ಅಲ್ಲಿದ್ದ ಸಂಗೀತ ಮಿಸ್‌ ತತ್‌ಕ್ಷಣ ಮೈಕನ್ನು ನನ್ನ ಪಕ್ಕದಲ್ಲಿದ್ದ ವನಜಾಳ ಮುಂದಿಟ್ಟು ನನ್ನನ್ನು ಹಿಂದಿನ ಸಾಲಿಗೆ  ಕಳಿಸಿದಾಗ ಬೇಜಾರಾದರೂ ಮೈಕಿನಲ್ಲಿ  ನನ್ನ ದನಿ ಸರಿಯಾಗಿ ಕೇಳಿಸುವಂತೆ ನಾನೇ ಜೋರಾಗಿ ಹಾಡಿದ್ದು  ಇನ್ನೂ ನೆನಪಿದೆ.
ಕಾರ್ಯಕ್ರಮ ಮುಗಿದ ಬಳಿಕ ಅಮ್ಮನ ಮುಂದೆ ನನ್ನ ಮೈಕಿನ ವಿಷಯ ಪೆಚ್ಚುಮೋರೆಯಿಂದ ಹೇಳಿದಾಗ   ಅಮ್ಮನ ಕಣ್ಣಂಚಿನಲ್ಲಿ ಒಂದಿಂಚೂ ನೀರು ಜಿನುಗಲಿಲ್ಲ ಬದಲು ತುಟಿಯಲ್ಲಿ ನಗು, ಸಂಭ್ರಮ. ""ಅಯ್ಯೋ  ಮರಿ ಇಷ್ಟಾದರೂ ನಿನಗೆ ಹಾಡಲು ಛಾನ್ಸ್‌  ಸಿಕ್ತಲ್ಲ'' ಎಂದು ಬಹಳ ಖುಷಿಪಟ್ಟಿದ್ದಳು. ತನ್ನ ಮುದ್ದು ಮಗಳ ಕಂಠಸಿರಿಗೆ ಯಾವ ಕಂಟಕವೂ ಬಾರದಂತೆ ನನ್ನನ್ನು  ಐಸ್‌ಕ್ರೀಮ್‌, ಕೋಲ್ಡ…ಜ್ಯೂಸ್‌ಗಳಿಂದ ದೂರವಿರಿಸಿ  ಮುನ್ನೆಚ್ಚರಿಕೆಯ ಕ್ರಮಗಳನ್ನು ನನ್ನ ಮೇಲೆ ಹೇರಿದ್ದಳು.
ನನ್ನ ದನಿಯನ್ನು ನಾನು ಅಪಾರವಾಗಿ ಪ್ರೀತಿಸುತ್ತಿದ್ದುದರಿಂದ ಗಾಯಕಿಯಾಗುವ ಆಸೆಯಲ್ಲಿ  ಐಸ್‌ಕ್ರೀಮನ್ನು ಅಮ್ಮನ ಮುಂದೆ ತಿನ್ನದೇ ಯಾವಾಗಲಾದರೂ ಕದ್ದುಮುಚ್ಚಿ  ಫ್ರೆಂಡ್‌ ಮನೆ, ಇಲ್ಲ  ಸ್ಕೂಲ್‌  ಮುಂದೆ ಜಮಾಯಿಸಿಕೊಂಡಿರುತ್ತಿದ್ದ ಐಸ್‌ಕ್ಯಾಂಡಿ ಗಾಡಿಯಲ್ಲಿ  ಕೊಂಡು ತಿಂದಿದ್ದುಂಟು. ಹೀಗೆ ಒಮ್ಮೆ ನನ್ನ ಪಾಕೆಟ್‌ ಮನಿಯಿಂದ ಒಂದೆರಡು ಬಾರಿ ಸತತವಾಗಿ ಐಸ್‌ಕ್ರೀಮ್‌ ತಿಂದಾಗ ನನ್ನ ಧ್ವನಿ ಹಿಡಿದು, ನನಗೇ  ಗುರುತಿಸಲಾಗಷ್ಟು ಮಾರ್ಪಾಡುಗೊಂಡು, ಹಾಡಲು ಹೋದಾಗ ಒಂದು ವಿಶೇಷ ಅಪರೂಪದ ದನಿಯಾಗಿ  ಕೇಳಿಬಂದಿತ್ತು. ಆದರೆ, ಈ ಬದಲಾವಣೆ ನನಗೊಂದು ಅದೃಷ್ಟವೇ ತಂದುಕೊಟ್ಟಿತು ಎಂದರೆ  ನೀವು  ನಂಬಲಿಕ್ಕಿಲ್ಲ  ಬಿಡಿ.
ಪರೀಕ್ಷೆಗಳು ಮುಗಿದ ನಂತರ ಶಾಲೆಯಲ್ಲಿ  ಒಂದು ಚಿಕ್ಕದಾದ ಮನರಂಜನಾ ಕಾರ್ಯಕ್ರಮಕ್ಕಾಗಿ  ಮಕ್ಕಳಿಂದ ನಾಟಕ, ಹಾಡು, ನೃತ್ಯಗಳ ರಿಹರ್ಸಲ್‌ ನಡೆಯುತ್ತಿತ್ತು. ಒಂದು ಭಾವಗೀತೆಗೆ ಕೋರಸ್‌ ಹಾಡಲು ಬರಬೇಕಿದ್ದ ಒಬ್ಬ ಹುಡುಗ ಟೈಫಾಯ್ಡ  ಜ್ವರದ ಕಾರಣದಿಂದ ಗೈರು ಹಾಜರಾಗಿದ್ದ. ಕಾರ್ಯಕ್ರಮ ಮಾರನೆಯ ದಿನವೇ ಇದ್ದುದ್ದರಿಂದ, ಬೇರೆ ದಾರಿಯಿಲ್ಲದೆ ನಮ್ಮ ಸಂಗೀತದ ರಿಹರ್ಸಲ್‌ಗಾಗಿ ನನ್ನಿಂದ ಒಮ್ಮೆ  ಹಾಡಿಸಿ ನೋಡಿದಾಗ ಐಸ್‌ಕ್ರೀಮ್‌ ಪ್ರಭಾವದಿಂದಲೋ ಏನೋ ಮೊದಲೇ ಕೊಂಚ ಗಡುಸಾದ ನನ್ನ ದನಿ ಅಂದು ಇನ್ನೂ ಖಡಕ್ಕಾಗಿ ಗಂಡುದನಿಯಂತೆ ತೋರಿ, ಅಂದು ಹುಡುಗರ ಸಾಲಿನಲ್ಲಿ  ನಿಂತು ನನಗೊಂದು  ಕೋರಸ್‌ ಹಾಡುವ ಸುವರ್ಣ ಅವಕಾಶವನ್ನು ಒದಗಿಸಿಕೊಟ್ಟಿತ್ತು! ಆಗಂತೂ ನನ್ನ‌ ಸಂತಸ ಮುಗಿಲು  ಮುಟ್ಟಿತ್ತು .
ಆದರೆ ಹಾಡಿನ ಕಾರ್ಯಕ್ರಮ ಮುಗಿದ ಮೇಲೆ ಅಪಾರವಾದ ಸಂಗೀತ ಜ್ಞಾನವಿದ್ದ ನಮ್ಮ ಹೆಡ್‌ ಮಾಸ್ತರರು, ""ನಿಮ್ಮ ಭಾವಗೀತೆ ಹಾಡು ಚೆನ್ನಾಗಿ ಮೂಡಿಬಂತು. ಆದರೆ ಕೋರಸ್‌ ಆಲಿಸಿದಾಗ ಒಂದು  ಅಪಸ್ವರದ ಧ್ವನಿ ಕೇಳಿಬಂದ ಹಾಗಿತ್ತಲ್ಲ !'' ಎಂದು ನಮ್ಮ ಸಂಗೀತದ ಮಿಸ್‌ನನ್ನು ಕಿಚಾಯಿಸಿದಾಗ ಅವರ ಮೇಲೆ ನನಗೂ ಮರುಕವುಂಟಾಗಿದ್ದು ಮಾತ್ರ ಸತ್ಯ! ಆದರೆ ಅದರ ಕುರಿತು ಹೆಚ್ಚು ತಲೆಕೆಡೆಸಿಕೊಳ್ಳದೆ   ಹೀಗೆ ಅಚಾನಕ್‌ ಆಗಿ ವೇದಿಕೆ ಮೇಲೆ ಹಾಡಿದ ಖುಷಿಯ ಸುದ್ದಿಯನ್ನು ಅಮ್ಮನ ಮಡಿಲಿಗೆರಿಸುವ ಉತ್ಸಾಹದಲ್ಲಿ   ಮನೆಯತ್ತ ದಾಪುಗಾಲಿಕ್ಕಿ¨ªೆ !
ಅಂತೂ ನಾ ಬೆಳೆದಂತೆಲ್ಲ ಉತ್ತಮ ಗಾಯಕಿಯಾಗುವ ಕನಸು ನನ್ನ ನೆರಳಿನಂತೆಯೇ ನನ್ನನ್ನು  ಹಿಂಬಾಲಿಸುತ್ತಲೇ ಇತ್ತು . ಅದರೆ ಯಾಕೋ ಸಂಗೀತ ನನ್ನ ಪಾಲಿಗೆ ಕಬ್ಬಿಣದ ಕಡಲೆಯಾಗಿ ಒಲಿಯಲೇ  ಇಲ್ಲ , ಬದಲಿಗೆ ಮುಂದೆ ಕಾಲೇಜಿನಲ್ಲಿ ಒಬ್ಬ ಸುಂದರ ತರುಣನಿಗೊಲಿದು ನನ್ನ ಹೃದಯದ ತಾಳ ತಪ್ಪಿಸಿದ್ದ. ನನ್ನ ಮನಗೆದ್ದಿದ್ದ. ನಮ್ಮ ಪ್ರೇಮಕಥೆಯೂ ರಾಗ ತಾಳ ಸೇರಿದ ಹಾಗೆ ಮದುವೆಯಲ್ಲಿ  ಸಮ್ಮಿಲನವಾಯಿತು.
"ಈಗ ನನ್ನ ಮಗಳೂ ಚೆನ್ನಾಗಿ  ಹಾಡ್ತಾಳೆರೀ. ಆದರೆ ನಿಮ್ಮ ಹಾಗೇನಾ' ಅಂತ ಮಾತ್ರ ದಯವಿಟ್ಟು ಕೇಳಬೇಡಿ!
https://www.udayavani.com/kannada/news/%E0%B2%B8%E0%B2%BE%E0%B2%AA%E0%B3%8D%E0%B2%A4%E0%B2%BE%E0%B2%B9%E0%B2%BF%E0%B2%95-%E0%B2%B8%E0%B2%82%E0%B2%AA%E0%B2%A6/164931/%E0%B2%95%E0%B3%86%E0%B2%B0%E0%B3%86%E0%B2%AF-%E0%B2%A8%E0%B3%80%E0%B2%B0%E0%B2%A8%E0%B3%81-%E0%B2%95%E0%B3%86%E0%B2%B0%E0%B3%86%E0%B2%97%E0%B3%86-%E0%B2%9A%E0%B3%86%E0%B2%B2%E0%B3%8D%E0%B2%B2%E0%B2%BF
ಆರತಿ ಘಟಿಕಾರ್‌, ದುಬೈ
ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ  ಪ್ರಕಟಿತ ಲೇಖನ 

Tuesday, April 12, 2016

ಪಾಕದ ರೀಮಿಕ್ಸ್

ಪಾಕದ  ರೀಮಿಕ್ಸ್
                                                    ===================================
ಈಗ ಎಲ್ಲ್ಲೆಲ್ಲೂ  ರೀಮಿಕ್ಸ್,  ರೀ -ಮೇಕ್ಗಳದೆ  ಯುಗ   ! ನಮ್ಮ  ಹಳೆಯ   ಜನಪ್ರಿಯ ಚಿತ್ರ   ಗೀತೆಗಳನ್ನು  ರೀಮಿಕ್ಸ್   ಎನ್ನುವ   ಹೆಸರಿನಲ್ಲಿ    ಯಾವದೋ ಮಸಾಲ ಬೆರೆಸಿ ಒಂದಿಷ್ಟು   ರಾಕ್ ಹಿಮ್ಮೇಳದ  ಗದ್ದಲವೆಬ್ಬಿಸಿ    ನಮ್ಮ  ಕಿವಿಗಳಿಗೆ   ಅಬ್ಬರಿಸಿದರೊ ನಾವು  ಬೊಬ್ಬಿರಿಯದೆ ಬೆರಗಿನಿಂದ ಕಣ್ಣರಳಿಸಿ ಬಾಚಿಕೊಂಡು  ಬಿಡುತ್ತೇವೆ .
ಒಟ್ಟಿನಲ್ಲಿ ಹಳೆಯದನ್ನೇ ಹೊಸ ರೀತಿಯಲ್ಲಿ ಆಕರ್ಷಕವಾಗಿ ತೋರುವಂತೆ ಮಾಡುವ  ಕಲೆ ಸಿನಿಮಾ ರಂಗದಿಂದ ನನ್ನ ಪಾಕ ರಂಗಕ್ಕೂ ಪ್ರವೇಶ ಮಾಡಿತ್ತು ~!
ಆದರೆ ಈ ರೀಮಿಕ್ಸ್ ಗಿಮ್ಮಿಕ್ಕನ್ನು  ನನ್ನ ಅಡುಗೆಯಲ್ಲಿ   ಬಳಸಿಕೊಳ್ಳಲು  ನಾನೂ   ಕೂಡ  ಶುರುವಿಟ್ಟುಕೊಂಡಿದ್ದು,( ಅಳತೆ ಗೊತ್ತಗದೆ) ಹೆಚ್ಚಾಗಿ  ಮಾಡಿದ  ಅಡುಗೆ ಪೋಲಾಗಿ  ಹೋಗಬಾರದೆಂಬುವ  ಉದ್ದೇಶದಿಂದ ! ಮಾಡಿದ್ದು (ನೀನೆ )ಉಣ್ಣೆ  ಮಾರಾಯ್ತಿ ಎಂದು ಹೆಚ್ಚಿಗೆ ಉಳಿದ್ದನ್ನೆಲ್ಲಾ ನಾನೇ ಉಂಡು ಗುಂಡಾಗಿ ಹೋದ ಮೇಲೆ ಈ ಬುದ್ದಿ ಕಲಿತದ್ದು ಎಂದರೂ ತಪ್ಪಾಗಲಾರದು ! ಇನ್ನು ಈ ಊರಿನಲ್ಲಿ ಉಳಿದಡುಗೆಯನ್ನು(ಅವರ ಪುಣ್ಯಕ್ಕೆ)  ಕೊಂಡೊಯ್ಯಲು  ಕೆಲಸದವರ ಕೊರತೆಯೂ ಒಂದು  ಕಾರಣವಾಗಿ     ನನ್ನ ಪಾಕ  ಶಾಲೆಯಲ್ಲಿ  ಈ  ರೀಮಿಕ್ಸ್  ಕಲೆಯನ್ನು  ಪೋಷಿಸಿಕೊಂಡು  ಬಂದ್ದಿದ್ದೆ  .
ಒಟ್ಟಿನಲ್ಲಿ ಅಡುಗೆ  ಹೆಚ್ಚಿಗೆ  ಉಳಿದಲ್ಲಿ , ನನ್ನ ಖಾಲಿ  ತಲೆಗೆ ಹಟಾತ್ತಾಗಿ  ಪಾಕದ ರೀಮಿಕ್ಸ್ ಐಡಿಯಾಗಳು ಸಾಲು  ದೀಪದಂತೆ ಹೊಳೆದು  ನನ್ನ ಹಳೆ ಪಾಕಕ್ಕೆ  ಹೊಸ ಮಸಾಲಾಗಳಿಂದ  ಚೆಂದದಿ ಮೇಕಪ್ (ಚಿಂದಿಯಾಗದಂತೆ) ಮಾಡಿ ಹೊಸ ರೂಪ ಕೊಡುವುದರಲ್ಲಿ  ಯಶಸ್ವಿ ಆಗುತ್ತಿದ್ದೆ  !
 ಉದಾ ..ಒಮ್ಮೆ  ರಾಮನವಮಿ   ಹಬ್ಬದಲ್ಲಿ ನಾ ಮಾಡಿದ   ಹೆಸರು ಬೇಳೆ ಕೋಸಂಬರಿ ಜೊತೆಗೆ ಅವರಿವರು  ಕೊಟ್ಟಿದ್ದೂ  ಕೂಡ ಹೆಚ್ಚಾಗಿ  ಉಳಿದುಕೊಂಡಾಗ ಒಂದಿಷ್ಟು ತಲೆ ಕೆರೆದು  ಕೊಳ್ಳದೆ ಅದನ್ನು  ಪಲ್ಯದೊಳಗೆ  ಹದವಾಗಿ  ಬೆರೆಸಿ   ಮನೆಯವರ ಮೂಗಿಗೆ ಕಿಂಚಿತ್ತು ಸಂಶಯ ಬಾರದಂತೆ ಬಡಸಿ ಮೆಚ್ಚುಗೆಗೆಗೂ  ಪಾತ್ರಳಾಗಿದ್ದೆ .!..
ಇನ್ನು ಕೆಲವೊಮ್ಮೆ ಇಂಥಾ   ಒಣ ಪಲ್ಯಗಳೆ ಹೆಚ್ಚಾಗಿ  ಉಳಿದುಕೊಂಡಾಗ ,  ಮತ್ತದನ್ನೇ   ಬಿಸಿ  ಮಾಡಿ  ತಿನ್ನಲು  ಬೇಸರವೆನಿಸಿ  ಅವುಗಳನು  ಪರೋಟದ ಹಿಟ್ಟಿನಲ್ಲಿ  ಸೇರಿಸಿ  ಲಟ್ಟಣಿಗೆಯಿಂದ ಹಿತವಾಗಿ  ಮಸ್ಸಾಜ್  ಮಾಡಿಸಿ ಹೆಂಚಿನ   ಮೇಲೆ ಕೆಂಪಾಗಿಸಿ  ಹೊಸ ರುಚಿಯೆಂಬ ಹೆಸರಿನಲ್ಲಿ ಮನೆಯವರ ಹೊಟ್ಟೆ  ತಂಪಾಗಿಸು ತ್ತಿದ್ದದ್ದುಂಟು  !
ಇನ್ನು ಉಳಿದ  ಸಾಲಡ್ಗಳು ಅಕ್ಕಿ ರೊಟ್ಟಿ ಹಿಟ್ಟಿನೊಂದಿಗೆ  ಸೇರಿ ಮರು ಜನ್ಮ   ಪಡೆದರೆ . ಕೊನೆಯಲ್ಲಿ  ಉಳಿದ  ಬ್ರೆಡ್ ಪೀಸ್ಗಗಳೂ ಕೂಡ  ಸರಾಗವಾಗಿ   ಚಪಾತಿ  ಹಿಟ್ಟಿನ  ಹೊಟ್ಟೆ  ಸೇರುತ್ತಿದ್ದವು .
ಹೇಳಬೇಕೆಂದರೆ ಕೆಲವು ಗೃಹಿಣಿಯರಿಗೆ ಈ ರೀಮಿಕ್ಸ್ ಕಲೆ ಸುಲಭವಾಗಿ ಒಲಿದಿರುತ್ತದೆ ,  ಕೆಲವರು  ಸಂದರ್ಭಕ್ಕನುಸಾರವಾಗಿ  ಈ ಕಲೆಯನ್ನು ಅಡುಗೆಯನ್ನು ಕುಲಗೆಡಿಸದೆ ಕರಗತ  ಮಾಡಿಕೊಳ್ಳಬಹುದು  .
ಇನ್ನು ನಮ್ಮ  ಮನೆಯಲ್ಲಿ   ಹೆಚ್ಚಿಗೆ ಉಳಿದ ಚಪಾತಿಗಳು  ಮಾಲೆದುಂಡಿ ಅಥವಾ  ಮಾಲದಿಯಾಗಿ (ಸಿಹಿ  ತಿನಸು),   ಇಡ್ಲಿಗಳು  ಇಡ್ಲಿ  ಫ್ರೈ ಗಳಾಗಿ ರೂಪಾಂತರಗೊಳ್ಳುತ್ತಿದ್ದವು  . ಹೀಗೆ  ಹೆಚ್ಚಿನಡುಗೆಯನು ಬಿಸಾಡದೆ ಮನೆಯವರ  ಹೊಟ್ಟೆಗೂ ( ಹೆಚ್ಚಿನ ) ಅಪಾಯವಾಗದಂತ ನನ್ನ ವಿವಿಧೋಪಾಯಗಳ ದಂಡು ಇದ್ದಂತೆ , ಅಡುಗೆ  ಕಡಿಮೆ  ಯಾದದ್ದನ್ನು  ಹೆಚ್ಚಾಗಿಸುವ ತಂತ್ರವನ್ನು ಅತ್ತೆಯವರು ನಮ್ಮ ಮದುವೆಯಾದ ಹೊಸತರಲ್ಲಿ ತಿಳಿಸಿಕೊಟ್ಟಿದ್ದರು .
ಕೆಲವೊಮ್ಮೆ ಸಂಜೆ ಗೆ ಸಾರು ,  ಹುಳಿ ,ಮನೆ  ಮಂದಿಗೆ ಸಾಲದೆನೆಸಿದಾಗ  .  ಅದಕ್ಕೊಂದಿಷ್ಟು  ಗಂಗಾ  ಜಮುನಾ ಸೇರ್ಸವ್ವ ಎನ್ನುವ  ಅತ್ತೆಯವರ     ಕೋಡ್ವರ್ಡ್  ಅನ್ನು   ಡೀ ಕೋಡ್ ಮಾಡಿದಾಗ   ತಿಳಿದದ್ದು ಗಂಗಾ ಜಾಮುನಾ  ಅರ್ಥಾತ್   ನೀರು   ಸೇರಿಸಿ ಜೊತೆಗೊಂದಿಷ್ಟು ಮಸಾಲೆ ಹಾಕಿ   ಬೆಳೆಸಿ   ಬಡಿಸು   ಎಂಬುದಾಗಿತ್ತು .
ಆದರೆ ನನ್ನಡುಗೆಯನ್ನು ಸವಿದು  ಮೆಚ್ಚಿಕೊಳ್ಳುವ  ನನ್ನ ಮಗರಾಯನ ಮೂಗು  ಮಾತ್ರ   ನಾಯಿ   ಮೂಗಿಗಿಂತಲೂ   ತೀಕ್ಷ್ಣವಾಗಿದ್ದು  ನನ್ನ ಈ  ಎಲ್ಲ ರೀಮಿಕ್ಸ್  ರಹಸ್ಯವನ್ನು  ಭೇದಿಸಲು  ಸದಾ ಮುಂದುರುತ್ತಿದ್ದ , ಅವನು ಚಾಪೆಯ  ಕೆಳಗೆ  ತೂರಿದರೆ   ನಾ  ರಂಗೋಲಿ  ಕೆಳಗೆ   ತೂರಿ ಒಟ್ಟಿನಲ್ಲಿ   ಏನೇ ಪ್ರಯೋಗ  ಮಾಡಿದರೂ   ರುಚಿಯಾಗಿ  ಮಾಡಿ  ಬಡಸಿ ಅವ  ತಕರಾರಿಲ್ಲದ  ಹಾಗೆ  ತಿನ್ನುವಂತೆ ಮಾಡುವ  ನನ್ನ  ಸಾಹಸಕ್ಕೆ ನನ್ನ  ಬೆನ್ನನ್ನು  (ಬೆನ್ನು  ನೋವಿದ್ದರೂ )ನಾನೇ ತಟ್ಟಿಕೊಂಡಿದ್ದುಂಟು. !
ಇನ್ನು ಮೊದಲಿನಿಂದಲೂ  ಕಸದಿಂದ  ರಸ ತಯಾರಿಸುವುದು  ನನ್ನ ಇಷ್ಟದ  ಹವ್ಯಾಸ ಹಾಗೂ  ಅಚ್ಚುಮೆಚ್ಚಿನ ಆಸಕ್ತಿಗಳಲ್ಲೊಂದು . ಹಾಗಾಗಿ  ಹಳೆ  ಕುಕ್ಕರ್ ಗಾಸ್ಕೆಟ್ ,  ಐಸ್ಕ್ರೀಮ್  ಕಡ್ಡಿಗಳು ,  ಮುರಿದ ಬಳೆಗಳು , ಫ್ಯುಸಾದ ಬಲ್ಬಗಳು ,ಹಳೆ ಬಾಟಲಿಗಳು , ಇತ್ಯಾದಿ ನನ್ನ   ಮಿನಿ ಗೋಡೌನಿಗೆ  ಸೇರಿ  ನನ್ನ ಬಿಡುವಿನ  ವೇಳೆ ಹಾಗು  ಮೂಡಿಗನುಸಾರವಾಗಿ   ಅಲಂಕಾರಿಕ  ವಸ್ತುಗಳಾಗಿ ಹೊಸ  ರೂಪ  ಪಡೆದು ಕೊಳ್ಳುತ್ತಿದ್ದವು .
ಈಗಲೂ ಅದೇ  ಕಸ ಐ  ಮೀನ್ ಇಂತಹ ಹಳೆ ವಸ್ತುಗಳನ್ನು ಕಂಡರೆ ನನಗೆ  ಎಲ್ಲಿಲ್ಲದ ಪ್ರೀತಿ !,   ಆದರೀಗ ಅವುಗಳನು  ಕಲಾತ್ಮಕವಾಗಿ ಮಾರ್ಪಾಡು  ಮಾಡಲು ಮೊದಲಿದ್ದ  ಆಸಕ್ತಿ  ಹಾಗೂ ತಾಳ್ಮೆ ಆಗಾಗ ಕೈ ಕೊಡುತ್ತಿದ್ದವು . ಹಾಗಾಗಿ ಕಸದಿಂದ ರಸ ಮಾಡುವ ಬದಲು ಕಸವೇ ಹೆಚ್ಚಾದಾಗ  ನಮ್ಮನೆಯವರು ತಾಳ್ಮೆಯೂ ಕೈ  ಕೊಟ್ಟು ನನಗೆ ಗೊತ್ತಾಗದಂತೆ  ಸಾಮೂಹಿಕವಾಗಿ ಅವಕ್ಕೆಲ್ಲ   ಕಸದ ತೊಟ್ಟಿಯ  ದರ್ಶನ ಮಾಡಿಸಿ ಬಿಡುತ್ತಿದ್ದರು  .!
 ನಂತರದ ದಿನಗಳಲ್ಲಿ ಅವರ ಈ  ಘೋರ ಅಪರಾಧದ ಅರಿವಾದಾಗ  ಈ  ನಾರಿ ಕೊಂಚ  ಹೊತ್ತು  ಮುನಿದರೂ  ಮಾರಿಯಾಗದೆ  ಮತ್ತೆ   ಯಥಾ  ಪ್ರಕಾರ ನಾರು /ಕಸ ಸಂಗ್ರಹಣೆ ಶುರುವಿಟ್ಟುಕೊಳ್ಳುತ್ತಿದೆ  !
ನನ್ನ ಇದೆ ಬುದ್ಧಿ ನನ್ನ ಅಡುಗೆ  ರೀ ಮಿಕ್ಸ್ ಗೂ ತಳಕು  ಹಾಕಿಕೊಂಡಿದ್ದು   ಎಂದರೆ ತಪ್ಪಾಗಲಾರದು . ಹಾಗಾಗಿ ನಿಮ್ಮನ್ನು  ನನ್ನ ಇನ್ನೊಂದಿಷ್ಟು  ಫ್ಲಾಶ್ ಬ್ಯಾಕಿಗೆ ಕರೆದೊಯ್ಯಲೇಬೇಕು !
ಕೇಕ್  ತಯಾರಿಸುವುದನ್ನು ನಾನು  ಆ ದಿನಗಳಲ್ಲಿ  ಆಗಷ್ಟೇ ಹುರುಪಿನಿಂದ ಕಲಿಯುತ್ತಿದ್ದೆ .! ಒಂದೆರಡು ಸರಿ  ಬಂದು ,ಇನ್ನು ಕೆಲವು ಬಾರಿ   ಏನೋ   ವ್ಯತ್ಯಾಸವಾಗಿ ಕೇಕ್  ಆಗುವ ಬದಲು ಹಲ್ವಾ   ಆಗಿದ್ದೂ   ಇತ್ತು ! . ನನ್ನ ಕೇಕ್ ಕಂಡು ಯಾರೇ ಕೇಕೆ ಹಾಕಿ  ನಕ್ಕರೂ ನನ್ನ ಕೇಕ್  ಪ್ರಯೋಗಗಳಿಗೆ ಯಾವ ಬರವೂ  ಬಂದಿರಲ್ಲಿಲ್ಲ !.
  ಅಂತೆಯೇ  ಒಮ್ಮೆ  ಖರ್ಜೂರದ  ಕೇಕ್  ಮಾಡುವ   ಸಾಹಸಕ್ಕೆ ಕೈ  ಹಾಕಿದ್ದೆ ,ಮಾಡುವ  ವಿಧಾನವನ್ನು ಸರಿಯಾಗಿ ಅನುಸರಿಸಿದರೂ  ನನ್ನ
 ದುರಾದೃಷ್ಟಕ್ಕೆ  ಏನೋ  ಏರುಪೇರಾಗಿ
, ಕೇಕ್ ತಯಾರಾದಾಗ ಬಳಿಕ, ಮೇಲ್ನೋಟಕೆ   ಸುಂದರವಾಗಿ  ಕಂಡರೂ ನನ್ನ ಫೀಮೇಲ್ ನೋಟಕೆ ಎಲ್ಲವೂ ಒಂದೇ  ಏಟಿಗೆ ಅರಿವಾಗಿತ್ತು ! .ಅರ್ಥಾತ್   ನನ್ನ ಕೇಕ್ ತೋಪಾಗಿ  , ಮಧ್ಯ ಭಾಗ ಕಿಂಚಿತ್ತೂ  ಬೇಯದೆ ಹಸಿ  ಮುದ್ದೆಯಾಗಿ  ಮೌನದಿ  ಕುಳಿತು ಬಿಟ್ಟಿತ್ತು ..ಆಗ ತಕ್ಷಣ  ಜಾಗೃತವಾಗಿದ್ದೇ  ನನ್ನ ರೀಮಿಕ್ಸ್ ಬುದ್ಧಿ ! ಆ ಮುದ್ದೆಗೆ  ಒಂದಿಷ್ಟು ಹೊಸ  ಸಾಮಗ್ರಿಗಳನ್ನು  ಸೇರಿಸಿ ಸಿಹಿ ಹೂರಣವಾಗಿಸಿ , ಮಗ ಸ್ಕೂಲಿನಿಂದ ಬರುವಷ್ಟರಲ್ಲಿ   ರುಚಿಯಾದ  ಖರ್ಜೂರದ  ಹೋಳಿಗೆ ತಯಾರಿಸಿದ್ದೆ !. ,
“ ಅಮ್ಮ  ನೀನು  ಮುಂಜಾನೆ  ಖರ್ಜೂರ   ಕೇಕ್ ಎಂದಿದ್ದ್ಯಲ್ಲ  , ಹೋಳಿಗೆ  ಮಾಡಿದ್ದೇಕೆ “ ಎಂದವ  ತನ್ನ ನೆನಪಿನ ಶಕ್ತಿಯನ್ನು ಪ್ರದರ್ಶಿಸಿ ನನ್ನನ್ನು ಕೆಣಕಿ  ತಕರಾರು  ತೆಗೆದಾಗ   “ ಇಗೋ ಈ ಹೋಳಿಗೆ ಅದಕಿಂತಲೂ ರುಚಿ  ಇದೆ .. ತಿನ್ನು  ಮರಿ  ! ಮುಂದಿನ   ಬಾರಿ  ಖಂಡಿತ  ಕೇಕ್ ಮಾಡಿ  ಕೊಡುವೆ  “  ಎಂದು     ಹೋಳಿಗೆ ರುಚಿ  ತೋರಿಸಿದಾಗ  “ ಸೂಪರ್  ಅಮ್ಮ “ ಎಂದವನ  ಉದ್ಘಾರಕ್ಕೆ  ನನ್ನ ತಲೆ  ಸಂತಸದಿಂದ ಗಿರ್ರ್  ಎಂದ್ದಿದ್ದು   ಹೇಗೆ  ತಾನೇ   ಮರೆಯಲಿ ? !!
ನನ್ನ ಈ ರೀಮಿಕ್ಸ್ ಕಲೆಯ  ಫಲಾನುಭಾವಿಗಳಾದ  ನಮ್ಮ  ಮನೆಯವರೂ (ನನ್ನ )ಸಹವಾಸ ದೋಷದಿಂದ ಒಮ್ಮೊಮ್ಮೆ  ಸೂಪರ್  ಸುಪ್ರೀಂ ಐಡಿಯಗಳೊಂದಿಗೆ ನನಗೆ  ಸಾಥ್ ಕೊಟ್ಟಿದ್ದುಂಟು  ಎಂದರೆ ನೀವು  ಖಂಡಿತಾ   ನಂಬಲಿಕ್ಕಿಲ್ಲ !
ಒಮ್ಮೆ  ನನ್ನ ಪಾಕ ಪ್ರಯೋಗಾಲಯದಲ್ಲಿ  ನನ್ನ ಅಚ್ಚು  ಮೆಚ್ಚಿನ   ಮೈಸೂರ್  ಪಾಕ್ ಮಾಡುವಾಗ  ಅದು ಕೈ  ಕೊಟ್ಟು  ಕೊನೆಗೆ  ಮೈಸೂರ್ ಪಾಕ್  ಬರ್ಫಿ  ಆಗುವ  ಬದಲು  ಪುಡಿ ಪುಡಿಯಾಗಲು,  ನನ್ನ ಪೆಚ್ಚು  ಮುಖವನ್ನು ಕಂಡ ಇವರು “ ವಾಣಿ  ! ಯಾಕೆ  ಬೇಜಾರ್   ಮಾಡ್ಕೊತೀಯಾ   ? ಮತ್ತೆ   ಇದನ್ನೇ  ಮಿಕ್ಸಿ ಗೆ  ಹಾಕಿ   ನುಣ್ಣಗೆ  ಪುಡಿ ಮಾಡಿ ಬೇಸನ್  ಲಾಡು   ಮಾಡಿ  ಬಿಡು “   ಎಂದು  ರೀಮಿಕ್ಸ್  ಕಂ  ರೀ ಸೈಕಲ್ ಉಪಾಯವನ್ನೂ  ಕೊಟ್ಟು  ಧನ್ಯರಾಗಿದ್ದರು !
ಒಟ್ಟಿನಲ್ಲಿ   ನೀವೇನೇ ಅನ್ನಿ   ನನ್ನ   ಈ  ಪಾಕ ಪ್ರಯೋಗಗಳು ತಿನ್ನಲು  ರುಚಿಯೆನಿಸಿದಾಗ ನಮ್ಮವರು  ಮೆಚ್ಚಿ   ನನಗೆ  “ ರೀಮಿಕ್ಸ್  ರಾಣಿ “ ಎಂಬ ಬಿರುದು ಕೊಟ್ಟಾಗಲಿಂದಾ  ನನ್ನ  ಈ ಕಲೆಗೆ    ಉತ್ಸಾಹದ ಗರಿ  ಮೂಡಿ   ಒಂದು  ಬುಕ್ಕಾದರೂ   ಬರೆದುಬಿಡುವ   ಜೋಶ್  ಬಂದಿದೆ .  ಇದಕ್ಕೆ   ನಿಮ್ಮ  ಪ್ರೋತ್ಸಾಹವೂ    ಇದೆ  ತಾನೇ ?

ಆರತಿ  ಘಟಿಕಾರ್