Saturday, October 20, 2012

ಅಂತರಾಳದ ದನಿಗಳು



ಉಸಿರನೊತ್ತಿ  ಗೋಡೆಗೆ  ಮೆಲ್ಲನೆ
ಪಿಸುನುಡಿಗಳ  ಕಾಡುವ  ದಂಡು
ಅಲ್ಲೇ ಕಾರ್ಗತ್ತಲ  ಕಿರು ಓಣಿ
ಬೆಳಕ ಚೆಲ್ಲುತ್ತಾ   , ಆವರಿಸುತ್ತಾ  
ದೂರದೂರಕೂ ಚದುರಿದ ದ್ವನಿಗಳು

ಮನದ ನಿಲ್ಲದ  ಹಾವು –ಏಣಿ ಆಟಕೆ   
ಅಳಕ್ಕೂ ಬಗೆದು ಕೊರೆವ   ಕೀಟಗಳು  
ಬೇಗುದಿಗಳ ಮಂಥನದ ಸೀಳು ನೋಟಕೆ
ಎದೆಯಾಗಸದ  ಅಹಮಿನ ಹಾರಾಟಕೆ
ತಿದ್ದಿ  ತೀಡಿ ಮೆರವ   ಒಲ್ಲದ ಪಾಠಗಳು .

ಪ್ರತಿದ್ವನಿಗಳ ಅಲೆ , ಎಡವುತ್ತಲೇ  ಅಪ್ಪಳಸಿ
 ಅರಿವಿಲ್ಲದ ಹೊಸ  ರಾಗ , ಹೃದಯ ತೀರಕೆ.
ನಿಂತಲ್ಲೇ  ಚಿಗುರಿ , ಹಬ್ಬಿದ  ಎತ್ತರ  ಬಳ್ಳಿಗಳು
ಬಣ್ಣವಿಲ್ಲದ ಮುಖಗಳ ನೂರಾರು  ಕೂಗು , ಕೇಕೆ
ಮುಚ್ಚುಮರೆಯಿಲ್ಲದ  ಆಪ್ತ ದನಿಗಳು  ,ಅಂತರಾಳಕೆ .

6 comments :

  1. ಹೀಗೆ ಚಿಗುರಿ ನಳನಳಿಸುತ್ತಾ, ತೂಗಿ, ಮನದೂಗಿ ಆಪ್ತವಾಗಿ ಕೇಕೆ ಹಾಕುತ್ತಲೇ ಇರುತ್ತವೆ ಮನದಾಳದ ದನಿಗಳು. ಚೆನ್ನಾಗಿದೆ ಆರತಿಯವರೆ.

    ReplyDelete
  2. ಒಳ ದನಿಗಳೇ ಹಾಗೆ ಅವು ನಮ್ಮ ಬಾಹ್ಯದ ಕನ್ನಡಿಗಳು.

    ReplyDelete
  3. ಪ್ರತಿಯೊಂದು ಅಂತರಂಗದ ದನಿಗಳನ್ನು ಎಳೆ ಎಳೆಯಾಗಿ ಬಿಡಿಸಿ ಓದುಗರ ಮುಂದಿಟ್ಟ ಪರಿ ತುಂಬಾ ಆಪ್ತವೆನಿಸುತ್ತದೆ. ಭಾವ ತೀವ್ರತೆಗೆ ಮನವೇ ಪರದೆಯಾದದ್ದು ಸರಳ ಪದಗಳಲ್ಲಿ ವ್ಯಕ್ತವಾಗಿದೆ. ಹಿಡಿಸಿತು ಆರತಿ ಅಕ್ಕ.

    ReplyDelete
  4. ವಂದನೆಗಳು ಪುಷ್ಪರಾಜು , ಬದ್ರಿ , ಪ್ರಸಾದ್ ನಿಮ್ಮ ಪ್ರತಿಕ್ರಿಯೆಗಳಿಗೆ. ಇವುಗಳೇ ಇನ್ನು ಬರೆಯಲು ಪ್ರೇರಣೆ.

    ReplyDelete
  5. ಹೃದಯದ ದನಿಗಳ ಶುದ್ಧ ಬಿತ್ತರಿಕೆ. ಪ್ರಾಯಶಃ ಎಲ್ಲರ ಮನದ ಅಂತರಾಳದಲ್ಲೂ ಇಂತಹ ಕೂಗುಗಳು, ಕೊರತಗಳು ಮೊರೆತಗಳು ಚಿತ್ರ ವಿಚಿತ್ರ ಭಾವಗಳು, ಅಸಂಭವ ಆಲೋಚನೆಗಳು....ಇನ್ನೂ ಏನೇನೋ ಬರುತ್ತದೆ. ಅದನ್ನು ಸೂಕ್ತವಾಗಿ ಮತ್ತು ಸಮರ್ಪಕವಾಗಿ ಬಿತ್ತರಿಸಿದ್ದೀರಿ. ಬಹಳ ಘಾಟೀಕಣ್ರೀ ನೀವು.

    ReplyDelete
  6. ಅನಂತ ವಂದನೆಗಳು ರವಿ ಸರ್ ನಿಮ್ಮ ಪ್ರೋತ್ಸಾಹ ಹಾಗು ಮೆಚ್ಚುಗೆಯ ನುಡಿಗೆ , ಇನ್ನಸ್ಟು ಬರೆಯಲು ಹುಮ್ಮಸ್ಸು ನೀಡಿದ್ರಿ :)

    ReplyDelete