Friday, September 21, 2012

ಕವಿತೆ ಕರೆಯಲಿ


ನವಿರು  ಭಾವಗಳ ಹೂ ಹಾಸು
ಪದ ಪುಂಜಗಳ ನಕ್ಷತ್ರ  ಮಿನಗು
ಸ್ವಗತ –ಸ್ವಾಗತವ ಕೂಡಿ ಹಾಡಿ
ಪ್ರತಿಮೆಗಳು ಮುತ್ತಿಕ್ಕಿ  ಗಗನವ
ಮಳೆಬಿಲ್ಲಿನೋಕುಳಿಯ  ರಂಗು  ಚೆಲ್ಲುತಾ  
ಕವಿತೆ ಕರೆಯಲಿ .

ಎದೆಯಾಳವ  ಬಗೆದು  ತಡುಕಿ
ಅಪ್ಪಿ  ಮನವಹನಿ ಮಳೆಗರಿಸಿ
ಉಕ್ಕುವ  ಅಲೆಗಳ  ನೋವ ಕಥೆ
ಒದ್ದೆ  ದಡದಂಚಿಗೆ  , ನೆನಪ ಮತ್ತೆ
ತಡವುತಾ,   ತಂಪನೀವುತಾ  ...

ಕವಿತೆ ಕರೆಯಲಿ .
ಒಲವ ಬನಸಿರಿ , ಚಿಟ್ಟೆ  ಹೂಗಳ
ರಂಗೋಲಿ , ಪ್ರೇಮಾಂಕುರವೇ  ಕೈಬೀಸಿ
ಚಿಗುರಿಸಿ ಸುಪ್ತ ಮನಗಳ ಕನಸ
ಹರ್ಷ ದೀಪ್ತಿಗೆ ತುಟಿ ಮೊಗ್ಗ ಬಿರಿದು
ಭೂರಮೆಯ  ದಣಿವಾರಿಸುತ್ತಾ ...
ಕವಿತೆ ಕರೆಯಲಿ .

ಸ್ಫೂರ್ತಿ  ಸೆಲೆಯ  ಸುಂದರ  ತಾಣ
ಹೊನ್ನ ಸಂದೇಶಗಳ  ಭಾವತರ್ಪಣ
ಹಚ್ಚಿಟ್ಟ ಹಣತೆಗಳೆಲ್ಲಾ  ಗುರಿಯ ಮುಟ್ಟಿ   
ಎದೆಯ ಹಕ್ಕಿ  ಆಗಸದ ತುಂಬೆಲ್ಲಾ
ಚಿಲಿಪಿಲಿ  ನಾದವ ಹರಿಸುತಾ ....
ಕವಿತೆ ಕರೆಯಲಿ .

4 comments :

  1. ಚೆನ್ನಾಗಿದೆ ಕವಿತೆ... ನೀವೇಳಿದ ಹಾಗೆ ಎಲ್ಲಾ ರೀತಿಯಲ್ಲೂ ಕವಿತೆ ನಿಮ್ಮನ್ನು ಸದಾ ಕರೆಯುತ್ತಲೇ ಇರಲಿ :)

    ReplyDelete
  2. ಕವಿತೆಯು ಏನೆಲ್ಲ ಒಳಗೊಂಡಿದ್ದರೆ ಚೆನ್ನ ಎಂಬುದನ್ನು ನೀವು ಸಾದೃಶ್ಯವಾಗಿ ವಿವರಿಸಿದ್ದೀರ.

    ಲಯಪೂರ್ಣ ಮತ್ತು ಲಾಲಿತ್ಯಪೂರ್ಣ ಕವನ.

    ReplyDelete
  3. ನನಗೆ ಪಾಠವಿದು. ಪ್ರಯತ್ನಕ್ಕೊಂದು ಕೈಗನ್ನಡಿಯಾಗಬಹುದು.ಉತ್ತಮ ರಚನೆಯೊಂದನ್ನಿತ್ತದ್ದಕ್ಕಾಗಿ ವಂದನೆಗಳು ನಿಮಗೆ.

    ReplyDelete
  4. ಧನ್ಯವಾದಗಳು .ಮನಸು , ಬದ್ರಿ , ಪುಷ್ಪರಾಜು ಅವರೆ . ನಿಮ್ಮ ಅನಿಸಿಕೆಗಳೇ ಮತ್ತೆ ಬ(ಕೊ)ರೆಯಲು ಪ್ರೇರಣೆ :)

    ReplyDelete