Thursday, June 7, 2012

ನಾನೂ ಕವಿಯಾಗಲು ಹೊರೆಟೆ



ನನಗೂ ಕವನವೊಂದು ಬರೆದೆ
ಬಿಡಬೇಕೆಂಬ ಬೆಟ್ಟದಷ್ಟು ಆಸೆ
ಒಮ್ಮೊಮ್ಮೆ ಸ್ಪೂರ್ತಿ ಬರ(ದಿರ)ಲು ಕಾರಣವೇ
ಇವರ ಮಾತಿನ ವರಸೆ
“ನೀವು ತುಂಬಾ ಸೋಮಾರಿ “
ಆಗಾಗ ನನ್ನ ಛೀಮಾರಿ      
“ ಏ  ನಾನಿಂದು ಮಂಗಳವಾರಿ “
ಸಾಗುವುದಿವರ  ಜೋಕಿನ ಪರಿ ...

ಇರಲಿ ಆ ಮಾತು ಬಿಡಿ
ಹಾಸ್ಯ  ಕವನವನ್ನಾದರೂ ಸರಿ
ಗೀಚಿಬಿಡುವ  ಒಂದೇ ಗಡಿಬಿಡಿ
ದೇವರಾಣೆ ಗೂ ಒಂದು ವಾಕ್ಯವೂ
ಹೊಳೆಯಲಿಲ್ಲ ಬಿಡಿ ...

ಪೆನ್ನ್  ಬದಲಾಯಿಸಿದೆ ..ಪೇಪೆರೂ ಬದಲಾಯಿಸಿದೆ
ಹಾಸ್ಯ ಕವಿಗಳ ಚಿತ್ರ ಪಟದೆದುರು
 ನಿಂತು ಧ್ಯಾನವೂ  ಮಾಡಿದೆ
ಝಪ್ಪಯ್ಯ ಎಂದರೂ ಕೈಗೆ ಸಿಗುತ್ತಿಲ್ಲ  ಪದಗಳು
 ಅಣಗಿಸುತ್ತಿವೆ  ನಾನೇ ಹರಿದು ಬಿಸಾಕಿದ
ರಾಶಿ ಪೇಪರ್ ಉಂಡೆಗಳು  

ಜೋಕುಗಳನ್ನೆಲ್ಲಾ  ಓದಿದೆ ,ಹಾಸ್ಯದ ಸಿಡಿ ಗಳನ್ನೂ  ನೋಡಿದೆ
ನನಗೂ ಹೊಳೆದೀತೇನೋ ಎರಡು
ಸಾಲಿನ ಮಿಂಚು ಪಂಚು ಎಂದು ,,,,
ಆದರೂ ಸ್ಪೂರ್ತಿಯ ನದಿ
ಹರಿಯಲೇ ಇಲ್ಲ ಒಂದಿಂಚೂ .!.

ಕವಿ ಆದಮೇಲೆಯೇ ತಿಂಡಿ –ಅಡುಗೆ ಮಾಡುವ ಶಪತ ತೊಟ್ಟೆ
ಆಗಂತೂ ಗಂಡ ಮಕ್ಕಳ ಹೊಟ್ಟೆಗೆ ತಣ್ಣೀರು ಬಟ್ಟೆ !
ಕೊನೆಗೆ    ಲಕ್ಷಣ್ ರಾವ್ , ದುಂಡಿರಾಜ್ ಗಳ ಕವನಗಳನ್ನು
ತಲೆ ದಿಂಬಾಗಿಸಿ  ಮಲಗೇ ಬಿಟ್ಟೆ !

ಎಲ್ಲಿ ಬಂತು ಸ್ಪೂರ್ತಿ ?
ಕೆಟ್ಟೇ ಹೋಯಿತು ತಲೆ ಪೂರ್ತಿ ..
ನನ್ನದಲ್ಲಾ .....ಇವರದು !
ಪಾಪ  ಇವರು ಸುಮ್ಮನಿದ್ದಿದ್ದೆ ಹೆಚ್ಚು ..
ಆದರೂ ಬಿಡಲಿಲ್ಲ  ನನ್ನ ಕವನ  ಬರೆಯುವ ಹುಚ್ಚು

ಕನಸು ಹೊತ್ತ  ಮನಸಿನೋಳಗೆಲ್ಲಾ   ಹುಡುಕಿದೆ
ಸಪ್ಪೆ ಭಾವನೆಗಳಿಗೆ ಬಲವಂತದ ಕಚಗುಳಿಯನಿಟ್ಟೆ
ಕುಸಿಯುತ್ತಾ ಹೋಯಿತು ನಾ ಕಟ್ಟಿಕೊಂಡ ಭ್ರಮೆಯ ಕೋಟೆ
ಬೆಳಗಾಗುವಷ್ಟರಲ್ಲಿ ನನ್ನ ಕಣ್ಣಾ ಯಿತು ಕನ್ನಂಬಾಡಿ ಕಟ್ಟೆ ...

ಎಷ್ಟು ದಿನ ನಡೆದೀತು ನನ್ನ ಆಟ ?
ಮನೆಯವರದು ಜೋರಾಯಿತು ವಟ ವಟ
ಕೊನೆಗೆ ನಾನು ಕಲಿತೆ ಒಂದು ಪಾಠ
ಯಾವುದೇ ಕಲೆ ದೇವರು ಕೊಟ್ಟ ವರ
ಇದಂತೂ ದಿಟ ....

3 comments :

  1. ಕವಿತೆ ಬರೆಯುವ ಕಷ್ಟ ಬಹಳ ಸೊಗಸಾಗಿ ವಿವರಿಸಿದ್ದೀರ. ಕವಿತೆ ಥೇಟ್ ನನ್ನ ಹುಡುಗಿ ಇದ್ದಹಾಗೆ, ಅವಳು ನನ್ನನ್ನು ನೋಡಿ ನಗುವುದೇ ಅಪರೂಪ. ನಕ್ಕರೆ ಸಿಕ್ಸರ್ರೇ....

    ಒಳ್ಳೆಯ ಕವನ ಬರೆದುಕೊಟ್ಟು, ಕವನ ಬರೆಯೋಕ್ಕೇ ಆಗ್ತಿಲ್ಲ ಅಂತ ತಮಾಷೆ ಮಾಡ್ತೀರಪ್ಪಾ...

    ReplyDelete
  2. ಕವನ ಬರೆಯುವ ಕಷ್ಟ ವಿವರಿಸಿದ ನಿಮ್ಮೀ ಕವನ ಚೆನ್ನಾಗಿದೆ:-)
    ಶಪತ=ಶಪಥ
    ನೋಳ=ನೊಳ

    ಅಲ್ಲವೇ ಅನಿಸಿತು :-)

    ReplyDelete
  3. dhanyavaadagalu ಬದ್ರಿ ,ಪ್ರಶಸ್ತಿ ಅವರೆ ,ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗಳಿಗೆ . ಬದ್ರಿ ಅವರೆ ಇದನ್ನು ನಾನು ೬ ವರ್ಷಗಳ ಹಿಂದೆ ಬರೆದ ಒಂದು ಹಾಸ್ಯ ಕವನ , ಸಿಕ್ಕಿತು ಹಾಗಾಗಿ ಬ್ಲಾಗಿನಲ್ಲಿ ಹಾಕಿದೆ .ನಿಮ್ಮಲ್ಲಿ ಒಂದು ಪುಟ್ಟ ಕಿರು ನಗೆ ಮಾಡಿಸಿದ್ದರೂ ನನಗೆ ತೃಪ್ತಿ :)

    ReplyDelete