Thursday, April 19, 2012

ಹತಾಶೆ

+
ಹತಾಶೆ
ಕಣ್ಣು ಹಿಗ್ಗಿದಷ್ಟೂ ಪತನದ ಹಾದಿಯ
ಹಿನ್ನೋಟ ;
ಖುಷಿಯೆನಿಸಿತೇನೋ ಮಂಕು ಬಡಿದ ಅರಿವಿಗೆ
ಚಲ್ಲಾಟ ;
ಆಸೆಯ ಗೂಡಿನಲ್ಲಿ ಕಾವು ಕೊಡದೆ ನಿಂತ
ನಿರ್ಲಿಪ್ತ ಸರಳುಗಳ
ತಣ್ಣನೆಯ ನೋಟ,
ಹೊತ್ತು ಉರಿಯಲಿಲ್ಲ
ದೀವಿಗೆಯ ಆಟ .
ತೇಲುವ ಮುಗಿಲಿಗೂ ಜೋತು
ಬಿತ್ತೆ ಮನ ?
ಬಿದ್ದ ಕರಾಳ ಏಟಿಗೆ ಸತ್ತಂತೆ
ನಟಿಸುತ್ತ ಹೊರಳು ನೋಡದ
ಚೇತನ ,
ಬಿಟ್ಟು ಹೋದ ಕಣ್ಣೀರ ಕಲೆಯಲ್ಲೂ
ಕಹಿಕ್ಷಣಗಳದೇ
ಚಿತ್ರಣ ;
ಕೊನರದ ಹೂಗಳ
ನಗುವಿಲ್ಲದ ಕ್ಷಣ ;
ಸುತ್ತುವ ಭುವಿಯನ್ನೂ
ತಡೆಯಲೆತ್ನಿಸುವ ಕರಗಳು ;
ಎಲ್ಲಿ ಹೋದವು ಕನಸುಗಳು ?
ಬೆಂಬಿಡದೆ ಹಿಂಬಾಲಿಸುವ ಸುಟ್ಟು
ಭಾವನೆಗಳ ಕರಿ ನೆರಳು;
ನಿಟ್ಟುಸಿರಿನಲ್ಲೂ ಸಣ್ಣಗೆ
ತೇಲಿ ಬರುವ
ಶೂನ್ಯ ರಾಗದ ಹಾಡುಗಳು .......

No comments :

Post a Comment