Thursday, April 19, 2012

ಹುಡುಕಾಟ


ಹುಡುಕಾಟ
ಕಳೆದು ಹೋದ ಭಾವಗಳಿಗಾಗಿ
ನಿರಂತರ ಈ ಹುಡುಕಾಟ ;
ಯಾರೋ ಬರೆದ ಕಥೆಗೆ
ಶೀರ್ಷಿಕೆ ಯನ್ನಿಡುವ
ಬಾಳಿನಾಟ ..
ಕಲೆ ಸಾಧನೆಯನ್ನು
ಕವಿತೆ ಸ್ಪೂರ್ತಿಯನ್ನು ;
ಪ್ರೇಮಿಗಳು ನೆನಪುಗಳನ್ನು
ಹುಡುಕುವ ಹಾಗೆ ....
ದೈವ ಭಕ್ತಿಯನ್ನು ,
ತಪ್ಪು ಅನುಭವಗಳನ್ನು ,
ಜೀವನ ಸಾರ್ಥಕತೆಯನ್ನು
ಹುಡುಕುವ ಹಾಗೆ ...
ಅರಿವು ಅಗೊಚರವನ್ನು ,
ಭೀತಿ ಅಂತರ್ಶಕ್ತಿಯನ್ನು .
ಕಲಿಕೆ ದಾರಿಯನ್ನು ,
ಹುಡುಕುವ ಹಾಗೆ ...
ಪ್ರೀತಿ ಸಾಕ್ಷತ್ಕಾರವನ್ನು
ಮುಪ್ಪು ಪಾಪಪ್ರಜ್ಞೆಯನ್ನು ,
ಮನುಷ್ಯ ಮಾನವೀಯತೆಯನ್ನು ,
ಕೊನೆಗೆ ತನ್ನನ್ನೇ ತನ್ನೊಳಗೆ .
ಹುಡುಕುವ ಹಾಗೆ ...
ನಿರಂತರ ಈ ಹುಡುಕಾಟ !

No comments :

Post a Comment