ತೂಗುವ ತಂಗಾಳಿ ,ಮುಸ್ಸಂಜೆಯ ಹೊನಲು
ತಂಪಾಗಿ ಮಲಗಿದೆ ಬೆಚ್ಚನೆಯ ಮರಳು
ತನ್ನದೇ ಗುಂಗಿನಲಿ ಅವಿಶ್ರಾಂತದಲೆಗಳು
ನಾನಲ್ಲಿ ಮೌನ ಸೇತುವೆ , ಕುದಿವ ಒಡಲು .
ಹೆಜ್ಜೆಗಳು ನೂರಾರು ಸುತ್ತ ಮುತ್ತಲೂ
ಇಣುಕಿ ನೋಡಿವೆ ಬೆಳ್ಳಿ ಮೋಡಗಳ ಸಾಲು
ಅಲೆಗಳದೆ ಬೆರಗು , ತಣೆಯುವವರೆಗೂ
ಹಾಸಿ ಹೊದ್ದಂತೆ ವಿಸ್ಮಯದಾ ಸೆರಗು
ತುಟಿ ಬಿಚ್ಚದ ಕಡಲಿಗೆ ನನ್ನವೇ ಕಥೆಗಳು
ಬಿಚ್ಚಿಕೊಂಡಂತೆ ಎಳೆಎಳೆಯಾಗಿ ಕಟ್ಟಿಟ್ಟ ನೂಲು .
ಹರವಿಕೊಂಡ ರಾಶಿ ಶಂಖಗಳಿಗೊಂದಿಷ್ಟು
ದಕ್ಕೀತೆ ಕಡಲ ದಿವ್ಯ ಮೌನ ?
ಅದಕ್ಕೂ ಕಿವಿಯಾಗುವ ಮರಳ ಕಣ
ಮುತ್ತಿನಾಸೆಗಿಲ್ಲಿ ಲೋಕವೇ ಮರುಳು
ಹಪಾಹಪಿ ಬಾಳ ಲೋಹದ ಸರಳು
ತೆರೆಗಳಾಟವಿದು ಯಾರಿಗಿಲ್ಲ ಏಳು - ಬೀಳು ?
ಬೆಳಗುತ್ತಿರುವ ಸಂಜೆ ಸೂರ್ಯನ ಕದಲಾರತಿ
ಹಾಲ್ಗೆನ್ನೆ ಚಂದಿರನ ಮತ್ತೆ ಕಾಣುವಾ ಸರತಿ
ಅವ್ಯಕ್ತ ಭಾವಸ್ಪುರಣದಾರೋಹ ನನ್ನಲೂ
ಮೀರುತಾ , ಏಕತಾನತೆಯ ಬಂಜೆ ಬಯಲು
ಹೆಪ್ಪುಗಟ್ಟಿದೆದೆಯಲಿ ಕರಗುತಿದೆ ಪ್ರಶಾಂತ ಕಡಲು .
ತಂಪಾಗಿ ಮಲಗಿದೆ ಬೆಚ್ಚನೆಯ ಮರಳು
ತನ್ನದೇ ಗುಂಗಿನಲಿ ಅವಿಶ್ರಾಂತದಲೆಗಳು
ನಾನಲ್ಲಿ ಮೌನ ಸೇತುವೆ , ಕುದಿವ ಒಡಲು .
ಹೆಜ್ಜೆಗಳು ನೂರಾರು ಸುತ್ತ ಮುತ್ತಲೂ
ಇಣುಕಿ ನೋಡಿವೆ ಬೆಳ್ಳಿ ಮೋಡಗಳ ಸಾಲು
ಅಲೆಗಳದೆ ಬೆರಗು , ತಣೆಯುವವರೆಗೂ
ಹಾಸಿ ಹೊದ್ದಂತೆ ವಿಸ್ಮಯದಾ ಸೆರಗು
ತುಟಿ ಬಿಚ್ಚದ ಕಡಲಿಗೆ ನನ್ನವೇ ಕಥೆಗಳು
ಬಿಚ್ಚಿಕೊಂಡಂತೆ ಎಳೆಎಳೆಯಾಗಿ ಕಟ್ಟಿಟ್ಟ ನೂಲು .
ಹರವಿಕೊಂಡ ರಾಶಿ ಶಂಖಗಳಿಗೊಂದಿಷ್ಟು
ದಕ್ಕೀತೆ ಕಡಲ ದಿವ್ಯ ಮೌನ ?
ಅದಕ್ಕೂ ಕಿವಿಯಾಗುವ ಮರಳ ಕಣ
ಮುತ್ತಿನಾಸೆಗಿಲ್ಲಿ ಲೋಕವೇ ಮರುಳು
ಹಪಾಹಪಿ ಬಾಳ ಲೋಹದ ಸರಳು
ತೆರೆಗಳಾಟವಿದು ಯಾರಿಗಿಲ್ಲ ಏಳು - ಬೀಳು ?
ಬೆಳಗುತ್ತಿರುವ ಸಂಜೆ ಸೂರ್ಯನ ಕದಲಾರತಿ
ಹಾಲ್ಗೆನ್ನೆ ಚಂದಿರನ ಮತ್ತೆ ಕಾಣುವಾ ಸರತಿ
ಅವ್ಯಕ್ತ ಭಾವಸ್ಪುರಣದಾರೋಹ ನನ್ನಲೂ
ಮೀರುತಾ , ಏಕತಾನತೆಯ ಬಂಜೆ ಬಯಲು
ಹೆಪ್ಪುಗಟ್ಟಿದೆದೆಯಲಿ ಕರಗುತಿದೆ ಪ್ರಶಾಂತ ಕಡಲು .
ಕಡಲ ಗೀತೆಯು ಅಪರೂಪದ ಕೃತಿಯಾಗುವ ಎಲ್ಲ ಲಕ್ಷಣಗಳನು ಹೊಂದಿದೆ.
ReplyDeleteಕದಲಾರತಿಯ ಕಲ್ಪನೆಯೇ ವಿಶಿಷ್ಟವಾಗಿದೆ.
ತಟ್ಟನೆ ನೆನಪಾದದ್ದು ಕಾಶಿಯ ಗಂಗಾರತಿ.
ಚ೦ದದ ಭಾವ!ಕಡಲ ತುಡಿತಕೆ ಹೊಯ್ದಾಟ ಚೆನ್ನಾಗಿ ಮೂಡಿದೆ ಆರತಿ.ಅಭಿನ೦ದನೆಗಳು.
ReplyDeletethank u badari sir shrinidhi ji ,,nanna kavanakke nimma sundara prathispandane galigaagi ;)
ReplyDelete