Saturday, April 4, 2015

ಹಗುರಾಗಬೇಕಿದೆ



ಸರಿಯುತಿವೆ  ದಿನಗಳು
ಚಿಂತೆ ಒತ್ತಡಗಳ
ಹೊತ್ತ
ತೇರಿನಂತೆ  ಕ್ಷಣಗಳು
ಅಮೆಲೇರಿದಂತೆ
ಸಾಗಿವೆ ಭಾರದ  ಹೆಜ್ಜೆಗಳು
ಗುಟುಕು  ಪ್ರೀತಿಯಲೇ
ನೀಗುತಿದೆ  ಹಸಿವು
ಬೀಗುತಿದೆ ಮನವು
ಗೊಂಚಲು ಗೊಂಚಲಾಗಿ
 ಅರಳಿ  ನಿಂತರೂ
ಕೈಗೆಟುಕಲಾರಂತಿದೆ  
ಜೀವನ  ಸೊಬಗು
ಯಾಂತ್ರಿಕತೆಯ  ಸೆರಗಿನಲ್ಲಿ
ಬಚ್ಚಿಟ್ಟ  ಸುಂದರ  ಬೆರಗು
ಕಾಣೆಯಾಗುತಿಹುದೇಕೆ
ಅಪರೂಪವಾಯಿತೇಕೆ
ನಮ್ಮ  ನಿಮ್ಮೆಲ್ಲರಿಗೂ
ತುಟಿ ಮೊಗ್ಗ  ಬಿರಿವ
ಮನವರಳುವ
ಚಿಂತೆ  ಮರೆಸುವ

ಒಂದೇ ಒಂದು  ‘ ನಗು  ‘ !

2 comments :

  1. ನಗು, ಮುಖವಾಡ ಸಹಿತ / ರಹಿತ ಎನ್ನುವಂಯಾಗಿದೆ.
    ವೇಗದ ನಗರ ಜೀವನ, ಒತ್ತಡದ ಕಾರ್ಯಭಾರ, ಮನೆ ಮಂದಿಯ ವೇಳಾಪಟ್ಟಿಯ ವ್ಯತ್ಯಯ, ಗೆಳೆಯರ ಮತ್ತು ಬಂಧುಗಳ ವ್ಯಕ್ತಿಗತ ಸಮಯಾಭವ ಇವೆಲ್ಲವೂ ಸೇರಿ, ಪರಸ್ಪರ ಸಂಧಿಸುವ ಮತ್ತು ನಗೆಯನಾದರೂ ಹಂಚಿಕೊಳ್ಳುವ ಸುಸಮಯ ನಮಗೂ ಬರ ಬಂದಿದೆ!

    ಮನೋ ಅಂತರ್ ಚಿಕಿತ್ಸಕ ಕವನ.

    ReplyDelete
  2. ಧನ್ಯವಾದಗಳು ಬದರಿ ಸರ್

    ReplyDelete