Sunday, September 7, 2014

ಹನಿ ಹನಿ ಚಿತ್ತಾರ -ಪುಸ್ತಕ ಬಿಡುಗಡೆ





ನನ್ನ ಚೊಚ್ಚಲ ಹನಿಗವನ ಸಂಕಲನ ಹನಿ ಹನಿ ಚಿತ್ತಾರ  ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಆಗ್ ೧೦ ೨೦೧೪ ರಂದು ಯಶಸ್ವಿ ಯಾಗಿ ಬಿಡುಗಡೆ ಆಯಿತು . ಹನಿಗವನಗಳನ್ನು ಬರೆಯಲು ಶುರುವಿಟ್ಟು ಕೊಂಡಾಗ  ನನಗೆ ನಿಜಕ್ಕೂ ಒಮ್ಮೆ ಅದನ್ನು ಪುಸ್ತಕ ರೂಪದಲ್ಲಿ ನಾನು ನೋಡುತ್ತೇನೆ ಎನ್ನುವ ಕಲ್ಪನೆ ಇರಲಿಲ್ಲ .

ಹಲವಾರು ಕವಿಗಳ ಕವನಗಳು , ಹನಿಗವನಗಳು  ನನ್ನ  ಬರವಣಿಗೆಗೆ ಪ್ರೇರಣೆಯಾದವು . ಮೊದ  ಮೊದಲು ಅಂತರ್ಜಾಲದಲ್ಲಿ ನಾನು ಕೆಲವು ಕನ್ನಡ ತಾಣಗಳಲ್ಲಿ  ನನ್ನ ಹನಿಗವನಗಳನ್ನು ಹಂಚಿಕೊಂಡಾಗ ನನ್ನ ಫೇಸ್ ಬುಕ್ ಸ್ನೇಹಿತರು ಅವುಗಳನ್ನು ಓದಿ ಮೆಚ್ಚಿ ಉತ್ತಮ ಪ್ರತಿಕ್ರಿಯೆಗಳನ್ನು ನೀಡಿದಾಗ ನನಗೆ ಬರೆಯಲು ಇನ್ನಸ್ಟು ಹುಮ್ಮಸ್ಸು ಹಾಗು ಸ್ಪೂರ್ತಿ .:) ಇನ್ನು ಕೆಲವನ್ನು ಬರೆದು ಪತ್ರಿಕೆ ದಿನ ಪತ್ರಿಕೆಗಳಿಗೆ ಕಳ್ಸಿ ಕೊಟ್ಟಾಗ  ವಗಳು ಆಯ್ಕೆ ಯಾಗಿ ಪ್ರಕಟಗೊಂಡಾಗ ನನ್ನ ಖುಷಿ ಹೇಳತೀರದು . ಏನೇ ಆಗಲಿ ಒಬ್ಬ ಬರಹಗಾರ್ತಿಗೆ  ತನ್ನ ಕವಿತೆಗಳನ್ನು  ಪ್ರಿಂಟ್ ನಲ್ಲಿ ನೋಡುವಾಗ ಒಂದು ಅತೀವ ಆನಂದ , ತನ್ನ ಸೃಜಶೀಲತೆಗೆ ಮನ್ನಣೆ ಸಿಕ್ಕ ಸುಂದರ  ಅನುಭೂತಿ. ಹಾಗು ಇನ್ನಷ್ಟು ಬರೆಯಲು ಪ್ರೋತ್ಸಾಹದ ಚಿಲುಮೆ ಯೊಂದು ಹರೆದ ಅನುಭವ ವಾಗುವುದು .

 ಮುಂದೆ   ನಾನು ಬರೆದ ಹಾಗು ಪ್ರಕಟಗೊಂಡ  ಹನಿಗವನಗಳನ್ನು  ಖ್ಯಾತ ಬರಹಗಾರರು ಶ್ರೀ ಬೇಲೂರು  ರಾಮ ಮೂರ್ತಿ ಅವರು  ಓದಿ ಮೆಚ್ಚಿಕೊಂಡು  ಅವುಗಳನ್ನು  ಪುಸ್ತಕದ ರೂಪದಲ್ಲಿ ಹೊರ ತರಲು ಸಂತೋಷದಿಂದ ಮುಂದೆ ಬಂದರು . ಇದೊಂದು ನನ್ನ ಸಾಹಿತ್ಯ ಅಭಿರುಚಿ ಗೆ ಆದ ಸುಂದರ ಬೆಳವಣಿಗೆ ಅನ್ನಬಹುದು .  ಪುಸ್ತಕ ರೂಪದಲ್ಲಿ ನನ್ನ ಹನಿಗಳು ಹೊರ ಬರುತ್ತಿರುವುದು ,ಈ  ನನ್ನ ಮೊದಲ ಪ್ರಯತ್ನವನ್ನು ,ನನ್ನ ಕನಸನ್ನು ಸಾಕಾರ ಗೊಳಿಸಿದವರು ಶ್ರೀ ಬೇಳೂರು ರಾಮ ಮೂರ್ತಿ ಅವರು . ಹಾಗು ನನ್ನ ಪುಸ್ತಕಕ್ಕೆ ಸುಂದರ ಬೆನ್ನುಡಿ ಯನ್ನು ಬರೆದು  ಕೊಟ್ಟಿದ್ದಾರೆ . ಅವರಿಗೆ ನಾನು ಚಿರ ಋಣಿ ಯಾಗಿದ್ದೇನೆ

 .ಪ್ರಕಾಶ ಸಾಹಿತ್ಯ ದ ಶ್ರೀ ಸತೀಶ್ ಪ್ರಭಾಕರ ಅವರು ಇದನ್ನು ಪ್ರಕಟಿಸಿದ್ದಾರೆ . ನನ್ನ ಪುಸ್ತಕಕ್ಕೆ ಮೌಲಿಕ ಹಾಗು ಅರ್ಥ ಪೂರ್ಣ ಮುನ್ನುಡಿ ಬರೆದು ಕೊಟ್ಟು ನನಗೆ ಇನ್ನು ಹೆಚ್ಚಿನ ಪ್ರೋತ್ಸಾಹ ನೀಡಿದವರು  ನಾಡಿನ ಹೆಸರಾಂತ ಹನಿಗವಿ , ಹನಿ ಚಕ್ರವರ್ತಿ  ಎಂದೇ ಖ್ಯಾತರಾದ ಶ್ರೀ ಡುಂಡಿರಾಜ ಅವರು , ಅವರ ಹಾಸ್ಯದ ಹನಿಗಳಿಂದ ನಾನು ಅಪಾರವಾಗಿ ಪ್ರೇರಣೆ ಪಡೆದವಳು .  ಈ ಮೂಲಕ ನನ್ನ ಬೆನ್ನ ತಟ್ಟಿ ಶುಭ ಹಾರೈಸಿದ್ದಾರೆ . ಅವರಿಗೆ ನನ್ನ ಹೃತ್ಪೂರ್ವಕ  ವಂದನೆಗಳು . ನನ್ನ ಮೊದಲ ಪುಸ್ತಕಕ್ಕೆ ಅವರಿಂದಲೇ ಮುನ್ನುಡಿ ಬರೆಸಬೇಕೆಂಬ ನನ್ನ ಸುಪ್ತ ಕನಸು ನನಸಾಗಿದ್ದು ನನಗೆ ಅತೀವ ಸಂತಸ ತಂದಿದೆ . :)

ಇನ್ನು ಹನಿ  ಹನಿ ಚಿತ್ತಾರಕ್ಕೆ ಸುಂದರ ಮುಖಪುಟ ಹಾಗು ಒಳಚಿತ್ರಗಳನ್ನು ರಚಿಸಿಕೊಟ್ಟ ಖ್ಯಾತ ವ್ಯಂಗ್ಯ ಚಿತ್ರಕಾರ ಶ್ರೀ ರಘುಪತಿ ಶೃಂಗೇರಿ ಅವರಿಗೆ  ನಾನು ಆಭಾರಿ ಆಗಿದ್ದೇನೆ .

ಒಟ್ಟಿನಲ್ಲಿ ಹೇಳಬೇಕಂದರೆ ನಮ್ಮ ದಿನನಿತ್ಯದ ಆಗು ಹೋಗುಗಳನ್ನು ನಾವು ತೆರೆದ ಮನಸ್ಸು ಹಾಗು ಹಾಸ್ಯಪ್ರಜ್ಞ್ಯೆಯ ಚೌಕಟ್ಟಿನಲ್ಲಿ ನೋಡಿದಾಗ ಬದುಕು ತಿಳಿಯಾಗಬಹುದು. ಈ ರೀತಿ ಕವಿ ಮನಸ್ಸು ಬೆಳೆಸಿಕೊಳ್ಳುವುದು ಒಂದು ನಿರಂತರ ಪ್ರಕ್ರಿಯೆ . ಹೀಗೆಯೆ ಮುಂದೆಯೂ ನನ್ನ ಗಮನ ಪ್ರಕ್ರಿಯೆ ಹಾಗು ಚಿಂತಶೀಲತೆ ಯನ್ನು ಉತ್ತಮ ಗೊಳಿಸಿಕೊಳ್ಳುತ್ತಾ ಇನ್ನಸ್ತು ಪ್ರಬುದ್ಧ ಹನಿಗವನಗಳನ್ನು ಬರೆಯುವ ಹಂಬಲವಿದೆ .

ಪುಸ್ತಕ ಬಿಡುಗಡೆಯ ಅಮೂಲ್ಯ ಕ್ಷಣಗಳು 







ನನ್ನ ಹನಿ ಹನಿ ಚಿತ್ತಾರ ಸಂಕಲನದಲ್ಲಿ ಸಾಮಾಜಿಕ , ರಾಜಕೀಯ  ಹಾಗು ಪ್ರಚಲಿತ ವಿದ್ಯಮಾನಗಳನ್ನು ಕುರಿತಾದ ನವಿರು ಹಾಸ್ಯದ , ವಿಡಂಬನಾತ್ಮಕ ಹನಿಗವನಗಳಿವೆ  , ಇದರ ಜೊತೆ ಕೆಲವು ಭಾವನಾತ್ಮಕ ಹನಿಗಳನ್ನು ಸೇರಿಸಿದ್ದೇನೆ .
ನನ್ನ ಚೊಚ್ಚಲ ಹನಿಗನವನ ಸಂಕಲನ ಹನಿ ಹನಿ ಚಿತ್ತಾರ ವನ್ನು ಹೊರ ತರುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನನ್ನ ಮೊದಲ ಹೆಜ್ಜೆ ಇಟ್ಟಿದ್ದೇನೆ .ಈ  ಹೆಜ್ಜೆ ನಡಿಗೆ ಯಾಗಬೇಕಾದರೆ ನಿಮ್ಮೆಲ್ಲರ  ಪ್ರೋತ್ಸಾಹ ದ ಅವಶ್ಯಕತೆ ಇದೆ . ನೀವೆಲ್ಲರೂ ಈ ಪುಸ್ತಕವನ್ನು  ಪ್ರೀತಿ ವಿಶ್ವಾಸದಿಂದ ಅಪ್ಪಿ ಬರಮಾಡಿ ಕೊಳ್ಳುತ್ತೀರ ಎಂದು ನಂಬಿದ್ದೇನೆ .

ಸಾಹಿತ್ಯ ಲೋಕದಲ್ಲಿ ಎಳೆ ಚಿಗುರು ಹೊವಾಗಿ ಅರಳಬೇಕು .ಹಾಗಾಗಿ ಹಿರಿಯ ಸಾಹಿತಿ ಹಾಗು ನಿಮ್ಮೆಲ್ಲರ ಸಲಹೆ ಸೂಚನೆಗಳಿಗೆ ಬದ್ದಳಾಗಿದ್ದೇನೆ. ಎಂದಿನಂತೆ ನಿಮ್ಮ ಉತ್ತೇಜನಕಾರಿ ಹಾರೈಕೆಗಳಿಗೆ ಕಾಯುತ್ತೇನೆ .

ಹನಿ ಹನಿ ಚಿತ್ತಾರ   ಬೆಂಗಳೂರಿನ  ಅಂಕಿತ ,ಪುಸ್ತಕ ಮಳಿಗೆ , ಬೆಳೆಗೆರೆ ಬುಕ್ಸ್ . (ಗಾಂಧಿ ಬಜಾರ್ )  ಹಾಗು  ಸಪ್ನಾ ಮಳಿಗೆ ಗಳಲ್ಲಿ ಲಭ್ಯವಿದೆ

ಪುಸ್ತಕ ಬಿಡುಗಡೆ ಕಾರ್ಯಕ್ರಮದ ವರದಿ  ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು , ಅದನ್ನು ಇಲ್ಲಿ ಹಂಚಿಕೊಂಡಿದ್ದೇನೆ .

http://www.vknews.in/2014/08/12/hani-hani-chittaara-publisd/

(ವಿಶ್ವ ಕನ್ನಡ ನ್ಯೂಸ್ ನಲ್ಲಿ ಪ್ರಕಟವಾದ ವರದಿ )


ಹೊಸ ದಿಗಂತ ಪತ್ರಿಕೆ ಯಲ್ಲಿ ಪ್ರಕಟವಾದ ವರದಿ .

ಉದಯವಾಣಿ ಪತ್ರಿಕೆ ಬೆಂಗಳೂರು ಹಾಗು ಮಂಗಳೂರು ಎಡಿಷನ್ ನಲ್ಲಿ ಪ್ರಕಟಗೊಂಡ ವರದಿ 

ಕೆಲವು ಆನ್ ಲೈನ್ ಪತ್ರಿಕೆಗಳಲ್ಲಿ ಪುಸ್ತಕ ಬಿಡುಗಡೆ ಸಮಾರಂಭದ ವರದಿ .
http://karnatakainfoline.com/mr/19158

http://gulfkannadiga.com/news/karnataka/198241.html


2 comments :

  1. ಇಂತಹ ಒಳ್ಳೆಯ ಸಮಾರಂಭಕ್ಕೆ ಅನಿವಾರ್ಯ ಕಾರಣಗಳಿಂದ ತಪ್ಪಿಸಿಕೊಂಡ ನನ್ನಗೆ ಇರಲಿ ತಮ್ಮ ಕ್ಷಮೆ.
    ಸಾಗಲಿ ನಿಮ್ಮ ಸಾಹಿತ್ಯ ಸೇವೆ ಅನವರತ.

    ReplyDelete
  2. dhanyavadagalu badari avare nimma haaraikegalige .

    ReplyDelete