Friday, December 27, 2013

ಸಾಗುತಿಹುದು ಎಲ್ಲೋ ಏನೋ



ಸಾಗುತಿಹುದು ಎಲ್ಲೋ ಏನೋ 
ಹಿಂದುರಿಗಿ ನೋಡದ ಬದುಕು 
ಮನ ಹುಡುಕುತಿರೆ ಇಂದಿಗೂ 
ಸಿರಿ ಅರ್ಥಗಳ ಬೆಳಕು 

ಬಯಕೆ ಸಾಗರ ವಿಶಾಲ ಹರಿವು 
ಮೋಹದಾಚೆಗಿದೆ ತೆನೆಯು 
ಹಚ್ಚಿಟ್ಟ ಒಲವ ಕಾಣದುದಕೆ
ಬರಿದಾಗಿದೆ ಬಿರಿದೆದೆಯು 

ಮನಸು ಮನಸುಗಳ ದೂರ ಯಾನಕೆ 
ಕೊನೆಯಾಗಲಿ ಅಹಮಿನ ನೆರವು 
ಹೊಂದಿಕೆಯ ಹೊದಿಕೆ ಜಾರುತಲಿರೆ 
ಸುಪ್ಪತ್ತಿಗೆಯಲೂ ಹೊರಳಾಡುತಿದೆ ಕೊರಗು 

ಕ್ಷಮೆಯ ಭಾವವಿದೆ  ಹೊಸಿಲ ಬಳಿ
ಬರಲಿಲ್ಲವೇಕೋ ಮನೆ ಒಳಗೂ 
ಮೌನದೆದೆಯ ಮೀಟಿ ನಗಲಿ 
ಮುಗ್ಧ ಮಗುವ ಹೂ ನಗೆಯು 

ಹಸಿರು ಪ್ರೀತಿ ಸ್ನೇಹ ಮರುಕ 
ತೇರನ್ನೆಳೆಯಲಿ ಬದುಕು 
ಸಾಲು ಹಣತೆ ದೀಪ ಬೆಳಗಲಿ 
ಭವ ಬಂಧನದಾ ಎದೆಗೂ  .

3 comments :

  1. "ಹೊಂದಿಕೆಯ ಹೊದಿಕೆ ಜಾರುತಲಿರೆ
    ಸುಪ್ಪತ್ತಿಗೆಯಲೂ ಹೊರಳಾಡುತಿದೆ ಕೊರಗು"

    ಈ ಸಾಲುಗಳು ತುಂಬಾ ಕಾಡುತ್ತವೆ. ಹೊಂದಾಣಿಕೆ ಇಲ್ಲದೆ ಬರಿಯ ನಿರೀಕ್ಷೆಗಳಲ್ಲೇ ಬದುಕುತ್ತಾ ಕೊರಗುವ ಬದುಕು ಯಾರದು ಆಗಬಾರದು ಎನ್ನುವ ಆಶಯ ಮುಟ್ಟಿಸುವ ಪ್ರಯತ್ನ ಈ ಸಾಲುಗಳಲ್ಲಿ ಅಡಗಿ ಕುಳಿತಿವೆ ಸೂಪರ್ ಮೇಡಂ.. ಇಷ್ಟವಾಯಿತು

    ReplyDelete
  2. dhanyavadagalu shrikant manjunatha avare nanna kavanakke kotta nimma anisikegaagi .

    ReplyDelete
  3. 'ಸಿರಿ ಅರ್ಥಗಳ ಬೆಳಕು' ಸಾಲು ನೂರು ಅರ್ಥಗಳನ್ನು ಬಿಂಬಿಸುತ್ತಿದೆ ನಮಗೆ.
    'ಸುಪ್ಪತ್ತಿಗೆಯಲೂ ಹೊರಳಾಡುತಿದೆ ಕೊರಗು' ಮಾರ್ಮಿಕವಾಗಿದೆ.

    ReplyDelete