ಹಾಗೆ ಸುಮ್ಮನೆ ಹನಿಗಳು
=============
=============
ವಿಪರ್ಯಾಸ
===========
ಬಾಳ
ಹಾದಿಯ ತುಂಬಾ
ನಲಿವಿನ
ಗಳಿಗೆಗಳೆಷ್ಟೋ
ಗುಲಾಬಿಗಳಾಗಿ
, ಅರಳಿ ನಿಂತಿದೆ
ಸುಂದರ ಹೂದೊಟ ;
ಆದರೂ
ಮುಳ್ಳುಗಳನ್ನೇ
ಎಣಿಸುತ್ತಾ
ಸಾಗಿದೆ
ಹುಚ್ಚು
ಮನದಾಟ !
ಅರಿವು
========
ಬಾಳಿನುದ್ದಕ್ಕೂ
ನನ್ನನ್ನು
ಆವರಿಸಿದ್ದು
ಬರಿ
ಆಡಂಬರ ,ನಗ –ನಾಣ್ಯ
ಕಾಲಕ್ರಮೇಣ
ನಿನ್ನ
ನಿಸ್ವಾರ್ಥ ,ಬೆಲೆಕಟ್ಟಲಾಗದ
ಪ್ರೀತಿಯ ಎದುರು ಅನಿಸಿತು
ನನ್ನದೆಲ್ಲಾ ನಗಣ್ಯ
!
ವಾರ್ಷಿಕೋತ್ಸವ
===============
ಬೆಳ್ಳಂ
ಬೆಳಿಗ್ಗೆಯೇ
ಕೆಂಪು
ಗುಲಾಬಿಯ ಹಿಡಿದು
ಸಿಹಿ
ಮುತ್ತನಿತ್ತು
ಮದುವೆ ವಾರ್ಷಿಕೋತ್ಸವ
ಹಾರೈಸಿದರೂ
ರೇಗಿದಳು ಮಡದಿ ;
ಮುದುವೆಯ
ದಿನ ನೀವು
ನೆನೆಪಿಡುವುದು
ಇನ್ನು ಸಾಕು
ಅದಾಗಲೇ ಕೆಳೆದು
ಹೋಗಿದೆಯಲ್ಲ ದಿನ
ನಾಕು !
ಪತ್ನಿಯ ತಕರಾರು
=========
ಗಂಡನ ಬೋಳು ತಲೆಯ
ಕುರಿತು ಅವಳದು
ಸದಾ ಫೈಟು ;
"ವಿಗ್" ಆದರೂ ಬಳಸಿ
ಚಂದಗಾಣಿಸಿ ನಿಮ್ಮ ಖಾಲಿ ಸೈಟು :)))
=========
ಗಂಡನ ಬೋಳು ತಲೆಯ
ಕುರಿತು ಅವಳದು
ಸದಾ ಫೈಟು ;
"ವಿಗ್" ಆದರೂ ಬಳಸಿ
ಚಂದಗಾಣಿಸಿ ನಿಮ್ಮ ಖಾಲಿ ಸೈಟು :)))
ಸಂಗೀತದ
ಗೀಳು
==============
ಕೋಪದಿ ಕೂಗಾಡಿದರೂ
ನನ್ನ ಮಗ
ನಗು ನಗುತಾ ತಲೆ ಅಲ್ಲಾಡಿಸುವ
ಜಾತಿಯೋನು ...
ಕಾರಣ
ಕಿವಿಯೊಳು ಸದಾ
ಇಯರ್ ಫೋನು !
==============
ಕೋಪದಿ ಕೂಗಾಡಿದರೂ
ನನ್ನ ಮಗ
ನಗು ನಗುತಾ ತಲೆ ಅಲ್ಲಾಡಿಸುವ
ಜಾತಿಯೋನು ...
ಕಾರಣ
ಕಿವಿಯೊಳು ಸದಾ
ಇಯರ್ ಫೋನು !
ಕಾಲಕ್ರಮೇಣ
==============
ಅಂದು ನಿನ್ನ ಕಂಡಾಗ
ಪಿಸು
ಮಾತು ..ಸೆಳೆತ
ಏನೂ
ಆಕರ್ಷಣೆ
ಇಂದು
ಬಿಸಿ
ಮಾತು ಅವಿರತ
ಬರೀ
ಘರ್ಷಣೆ :) !
ಎಲ್ಲ ಹನಿಗಳೂ ನೆಚ್ಚಿಗೆಯಾದವು ಮೇಡಂ.
ReplyDeleteಅಂದಹಾಗೆ ಫೇಸ್ ಬುಕ್ಕಿನಲ್ಲಿ ತಾವು ಕಾಣಿಸುತ್ತಿಲ್ಲವಲ್ಲ.
ಧನ್ಯವಾದಗಳು ಬದರಿ ಸರ್ . ಹಾಗೆ ಸುಮ್ಮನೆ ಕೆಲವು ದಿನಗಳ ಮಟ್ಟಿಗೆ ಬ್ರೇಕ್ ಅಷ್ಟೇ :) ಮರಳಿ ಬರುತ್ತೇನೆ ಶೀಘ್ರದಲ್ಲೇ .
ReplyDelete