ನನ್ನ ಪರ್ಸು
========
ನನ್ನ ಪರ್ಸಿನಲಿ
ಸುಂದರವಾಗಿ ಮಡಚಿಟ್ಟ
ನಾಳೆಗಳು
ದಣಿದು , ಬೆವರೊರಿಸಲು ;
ಇಂದಿನ
ಕನ್ನಡಿಯಲಿ ಮುಖ ಕಂಡಾಗ
ಕಂಡಿದ್ದು ನೆನ್ನೆಯ
ಕನಸುಗಳು .
ನಿನ್ನ ಕಣ್ಣುಗಳು
=========
ನನ್ನನ್ನು ಇಂಚಿಂಚಾಗಿ
ಸೆರೆ ಹಿಡಿದು
ಭಾವ ಮಿಂಚುಗಳ
ಬೆಳಗಿಸಿ
ಮುಗಿಲ ಮಂಚದಿ
ತೇಲಿಸಿ
ಮೋಹಕವಾಗಿಯ ಶ್ರಿಂಗರಿಸುವ
ಕಾವ್ಯಮಯ ಕನ್ನಡಿ .
ಕೆಲವರು ಹೀಗೇ
=========
ನುಡಿದರೂ ಬೆತ್ತಲಾಗದ ಕಡಲು
ಅಡಗಿಸಿಟ್ಟ ಒಡಲು
ಏನೋ ನಿಘೂಡ
ಎದೆಯ ತುಂಬೆಲ್ಲ ರಾಶಿ ಮುಳ್ಳು
ಆದರೂ
ಹೊತ್ತಿಹರು ಹೂವಿನ ಮುಖವಾಡ .
ನನ್ನ ನಲ್ಲ
======
ಮೋಡಗಳಲ್ಲಿ ತೇಲಿಸುತಾ
ಮಳೆಬಿಲ್ಲ ಕನಸುಗಳ ತೊಡೆಸುತಾ
ನನ್ನ ಬಾಳ ಹಾದಿಯೊಳು
ಸಿಕ್ಕಿಹನೊಬ್ಬ
ಅವನ ಕುಡಿಮೀಸೆಯಡಿಯಲ್ಲಿ
ಮಿಂಚಿನಂತಹ ನಗೆ ಹಬ್ಬ !
========
ನನ್ನ ಪರ್ಸಿನಲಿ
ಸುಂದರವಾಗಿ ಮಡಚಿಟ್ಟ
ನಾಳೆಗಳು
ದಣಿದು , ಬೆವರೊರಿಸಲು ;
ಇಂದಿನ
ಕನ್ನಡಿಯಲಿ ಮುಖ ಕಂಡಾಗ
ಕಂಡಿದ್ದು ನೆನ್ನೆಯ
ಕನಸುಗಳು .
ನಿನ್ನ ಕಣ್ಣುಗಳು
=========
ನನ್ನನ್ನು ಇಂಚಿಂಚಾಗಿ
ಸೆರೆ ಹಿಡಿದು
ಭಾವ ಮಿಂಚುಗಳ
ಬೆಳಗಿಸಿ
ಮುಗಿಲ ಮಂಚದಿ
ತೇಲಿಸಿ
ಮೋಹಕವಾಗಿಯ ಶ್ರಿಂಗರಿಸುವ
ಕಾವ್ಯಮಯ ಕನ್ನಡಿ .
ಕೆಲವರು ಹೀಗೇ
=========
ನುಡಿದರೂ ಬೆತ್ತಲಾಗದ ಕಡಲು
ಅಡಗಿಸಿಟ್ಟ ಒಡಲು
ಏನೋ ನಿಘೂಡ
ಎದೆಯ ತುಂಬೆಲ್ಲ ರಾಶಿ ಮುಳ್ಳು
ಆದರೂ
ಹೊತ್ತಿಹರು ಹೂವಿನ ಮುಖವಾಡ .
ನನ್ನ ನಲ್ಲ
======
ಮೋಡಗಳಲ್ಲಿ ತೇಲಿಸುತಾ
ಮಳೆಬಿಲ್ಲ ಕನಸುಗಳ ತೊಡೆಸುತಾ
ನನ್ನ ಬಾಳ ಹಾದಿಯೊಳು
ಸಿಕ್ಕಿಹನೊಬ್ಬ
ಅವನ ಕುಡಿಮೀಸೆಯಡಿಯಲ್ಲಿ
ಮಿಂಚಿನಂತಹ ನಗೆ ಹಬ್ಬ !
ನನ್ನ ಪರ್ಸು: ಪರ್ಸು ಕಳ್ಳತನವಾದರೆ?
ReplyDeleteನಿನ್ನ ಕಣ್ಣುಗಳು: ನನ್ನ ಹೆಂಡತಿಗೆ ಈ ಹನಿ ಓದಿ ಹೇಳಿದೆ, ನಕ್ಕು (<3) ಕೊಟ್ಟಳು.
ಕೆಲವರು ಹೀಗೇ: ಅಭಿನವ ರಕ್ಕಸರ ಪ್ರವರ.
ನನ್ನ ನಲ್ಲ : ಈ ನಗೆ ಹಬ್ಬ ನಿತ್ಯೋತ್ಸವವಾಗಲಿ.
ಧನ್ಯವಾದಗಳು ಬದರಿ ಸರ್ .
ReplyDeleteನನ್ನ ಪರ್ಸು ಕವನ ತುಂಬಾ ಚೆನ್ನಾಗಿದೆ. ಕಣ್ಣುಗಳು ಮತ್ತು ನಲ್ಲನ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.
ReplyDeleteಧನ್ಯವಾದಗಳು ಚಂದ್ರಶೇಕರ ಇಶ್ವರ ನಾಯಕ ಅವರೇ ,
ReplyDelete