Wednesday, July 3, 2013

ನನ್ನ ಪರ್ಸು

ನನ್ನ ಪರ್ಸು
========
ನನ್ನ ಪರ್ಸಿನಲಿ
ಸುಂದರವಾಗಿ  ಮಡಚಿಟ್ಟ
ನಾಳೆಗಳು
ದಣಿದು  , ಬೆವರೊರಿಸಲು   ;
ಇಂದಿನ
ಕನ್ನಡಿಯಲಿ  ಮುಖ  ಕಂಡಾಗ
ಕಂಡಿದ್ದು ನೆನ್ನೆಯ
ಕನಸುಗಳು .

ನಿನ್ನ  ಕಣ್ಣುಗಳು
=========
ನನ್ನನ್ನು  ಇಂಚಿಂಚಾಗಿ
ಸೆರೆ ಹಿಡಿದು
ಭಾವ ಮಿಂಚುಗಳ
 ಬೆಳಗಿಸಿ
ಮುಗಿಲ ಮಂಚದಿ
 ತೇಲಿಸಿ
ಮೋಹಕವಾಗಿಯ  ಶ್ರಿಂಗರಿಸುವ
ಕಾವ್ಯಮಯ  ಕನ್ನಡಿ .

ಕೆಲವರು ಹೀಗೇ
=========
ನುಡಿದರೂ ಬೆತ್ತಲಾಗದ  ಕಡಲು
ಅಡಗಿಸಿಟ್ಟ ಒಡಲು
ಏನೋ ನಿಘೂಡ
ಎದೆಯ ತುಂಬೆಲ್ಲ ರಾಶಿ ಮುಳ್ಳು
ಆದರೂ
ಹೊತ್ತಿಹರು ಹೂವಿನ ಮುಖವಾಡ .

ನನ್ನ ನಲ್ಲ
======
ಮೋಡಗಳಲ್ಲಿ  ತೇಲಿಸುತಾ
ಮಳೆಬಿಲ್ಲ ಕನಸುಗಳ  ತೊಡೆಸುತಾ
ನನ್ನ ಬಾಳ ಹಾದಿಯೊಳು
ಸಿಕ್ಕಿಹನೊಬ್ಬ
ಅವನ  ಕುಡಿಮೀಸೆಯಡಿಯಲ್ಲಿ
ಮಿಂಚಿನಂತಹ  ನಗೆ ಹಬ್ಬ !

4 comments :

  1. ನನ್ನ ಪರ್ಸು: ಪರ್ಸು ಕಳ್ಳತನವಾದರೆ?
    ನಿನ್ನ ಕಣ್ಣುಗಳು: ನನ್ನ ಹೆಂಡತಿಗೆ ಈ ಹನಿ ಓದಿ ಹೇಳಿದೆ, ನಕ್ಕು (<3) ಕೊಟ್ಟಳು.
    ಕೆಲವರು ಹೀಗೇ: ಅಭಿನವ ರಕ್ಕಸರ ಪ್ರವರ.
    ನನ್ನ ನಲ್ಲ : ಈ ನಗೆ ಹಬ್ಬ ನಿತ್ಯೋತ್ಸವವಾಗಲಿ.

    ReplyDelete
  2. ಧನ್ಯವಾದಗಳು ಬದರಿ ಸರ್ .

    ReplyDelete
  3. ನನ್ನ ಪರ್ಸು ಕವನ ತುಂಬಾ ಚೆನ್ನಾಗಿದೆ. ಕಣ್ಣುಗಳು ಮತ್ತು ನಲ್ಲನ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.

    ReplyDelete
  4. ಧನ್ಯವಾದಗಳು ಚಂದ್ರಶೇಕರ ಇಶ್ವರ ನಾಯಕ ಅವರೇ ,

    ReplyDelete