Friday, January 11, 2013

ವಿಜಯಕರ್ನಾಟಕ ಪತ್ರಿಕೆಯಲ್ಲಿ ಬಂದ ಕೆಲವು ಹನಿಗವನಗಳು

4 comments :

 1. ಯಾವುದನ್ನ ಹೊಗಳಲಿ ನಾನು ಬೆಳಗಲಿ ಯಾವುದಕ್ಕೆ ಮೊದಲ ಆರತಿ?

  ReplyDelete
 2. ಶ್ರೀಮತಿ ಆರತಿಯವರಿಗೆ,

  ನಿಮ್ಮ ಭಾವತೋರಣ ಬ್ಲಾಗ್ ಎಲ್ಲವನ್ನೂ / ಸವಿಸ್ತಾರವಾಗಿ ಓದಿದೆ.
  ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.

  ನಿಮ್ಮ ಕವನಗಳು ಸುಂದರವಾಗಿವೆ. ವಿವಿಧ ವಿಷಯಗಳ ಬಗೆಗೆ ಸ್ಪಂದಿಸಿ ಬರೆದಿದ್ದೀರಿ. ನಿಮ್ಮ ಭಾವನೆಗಳಲ್ಲಿ ಕಳಕಳಿ , ಸಾಮಾಜಿಕ ಪ್ರಜ್ಞೆ , ಸತ್ಯಾನ್ವೇಷಣೆಯ ಆಸಕ್ತಿಗಳಿವೆ. ನಿಮ್ಮ ಅನುಭವಗಳನ್ನು, ಅನಿಸಿಕೆಗಳನ್ನು ಅಭಿವ್ಯಕ್ತಗೊಳಿಸುವಲ್ಲಿ ನಿಮ್ಮ ಪ್ರಯತ್ನಗಳು ಸಾಕಷ್ಟು ಸಫಲವಾಗಿವೆ.

  ಹನಿಗವನಗಳು ನನಗೆ ಮೆಚ್ಚಿಗೆಯಾಗಿವೆ. ಅವುಗಳಲ್ಲಿ "ಮುಖವಾಡ" "ನೆನಪು" "ಭ್ರಮನಿರಸನ" "ಸ್ಪರ್ಶ" "ರಶ್ ಅವರ್ " ಹಿಡಿಸಿದವು. "ಅಚಲ" ಉತ್ತಮ ಹನಿಗವನವಾಗಿದೆ. ಎಲ್ಲರೂ ಬದಲಿಸಿದ್ದರೂ ಕನ್ನಡಿ ಮಾತ್ರ ಆಚಲವಾಗಿರುವದು ನಮಗೆ ನಾವು ಹೇಗೆ ಜೀವಿಸಬೇಕು ಎಂದು ಸೂಚಿಸುತ್ತಿದೆ.
  ಬೇಡಿದ್ದಕ್ಕಿಂತ ಹೆಚ್ಚಿನದನ್ನು ಕೊಡುವ ಮತ್ತು ಪಡೆಯುವ " ಸ್ಪರ್ಶ " ಬುದ್ಧಿಯನ್ನೂ "ಕೊಡುತ್ತಿದೆ ". ಇದರಲ್ಲಿ ಹಾಸ್ಯವಿದೆ. ಆದರೆ ಹಾಸ್ಯದ ಹಿಂದೆ ನಮ್ಮ ಸಮಾಜದಲ್ಲಿ ನಡೆಯುವ ಅಹಿತಕಾರಿ ಸಂಪರ್ಕಗಳ ಬಗ್ಗೆ ಒಂದು ಎಚ್ಚರಿಕೆಯನ್ನೂ ಹೇಳಿದೆ. "ರಶ್ ಅವರ್ " ನಗೆ ತರಿಸಿತು. ಉತ್ತಮ ವರ್ಣನೆಯಾಗಿದೆ.ಇದು ಎಲ್ಲರೂ ಕಾಣುವ ದೃಶ್ಯವಾಗಿದೆ.


  ನ್ಯಾನೋ ಕತೆಗಳು ನಿಮ್ಮ ಅನುಭವದ ಭಾವನೆಗಳನ್ನು [ ಅನುಭವ ಇಲ್ಲದೇ ಭಾವನೆಗಳನ್ನು ಬರೆಯಲು ಸಾಧ್ಯ] ಅಭಿವ್ಯಕ್ತಗೊಳಿಸುವಲ್ಲಿ ಯಶಸ್ವಿಯಾಗಿವೆ. "ಊಟದ ಸಮಯ " ಇಬ್ಬರು ಬಾಲಕರ ವಿಪರೀತ ಸ್ಥಿತಿಗಳನ್ನು ಹೋಲಿಸಿ ತೋರಿಸಿದ್ದು ನನಗೆ ಹಿಡಿಸಿತು. ಕೆಲವೇ ಶಬ್ದಗಳಲ್ಲಿ ಅದು ಪರಿಣಾಮಕಾರಿಯಾಗಿ ಬಂದಿದೆ.

  ಅದೇ ರೀತಿಯಲ್ಲಿ "ನಂಬಿಕೆ" ಉತ್ತಮ ಕತೆಯಾಗಿದೆ. ಹೋಮಹವನಗಳನ್ನು/ಪೂಜೆಗಳನ್ನು ಮಾಡುವವರು ನಂಬಲಿ ಬಿಡಲಿ ಅದನ್ನೆಲ್ಲ ನೋಡುತ್ತಿದ್ದ ಹುಡುಗನಿಗೆ ಅವರ ಹೋಮಾದಿಗಳಲ್ಲಿ ಅತೀವ ನಂಬಿಕೆ ಇದೆ. ಆದ್ದರಿಂದಲೇ ಅವನು ಎಲ್ಲರಿಗಿಂತ ಮೊದಲೇ ತನ್ನ ಕೊಡೆ ಏರಿಸಿ ಸಿದ್ಧನಾಗಿದ್ದಾನೆ. ಹೋಮ ಹವನಗಳ ಪ್ರತಿಫಲ ಶೀಘ್ರದಲ್ಲಿಯೇ ಆಗುವದು (ಆಗಲಿ) ಎಂಬುದು ಹುಡುಗನ ಮುಗ್ಧತೆಯಾಗಿದೆ. ಮಕ್ಕಳಲ್ಲಿ ಮುಗ್ಧತೆ ಇರುತ್ತದೆ. ದೇವರು/ದೆವ್ವ/ ಭೂತ ಇತ್ಯಾದಿಗಳಲ್ಲಿ ಅವರು ಯಾವುದೇ ಕುತ್ಸಿತ ಭಾವನೆ ಹೊಂದಿರುವದಿಲ್ಲ. ಹೀಗಾಗಿ ನಿಮ್ಮ ಈ ಚಿಕ್ಕ ಕತೆಯಲ್ಲಿ ಕೊಡೆ ಏರಿಸಿದವನು ಹುಡುಗ ಎಂದಿದ್ದು ಅತ್ಯಂತ ಸೂಕ್ತವಾಗಿದೆ.
  ಇದೇ ಕತೆಯಲ್ಲಿ ಒಂದು ವೇಳೆ ನೀವು ಕೊಡೆ ಹಿಡಿದ ವ್ಯಕ್ತಿಯನ್ನು ಹುಡುಗನ ಬದಲು ವಯಸ್ಕನೋ, ವೃದ್ಧನೋ, ವಿಜ್ಞಾನಿಯೋ, ವೈದ್ಯನೂ ಎಂದು ಹೇಳಿದ್ದರೆ ಆಗ ಕತೆಯಲ್ಲಿ ಹುಡುಗನ ಮುಗ್ಧತೆಯ ಬದಲು ವಯಸ್ಕರ ಅಣಕ ಕುಟಿಲತೆ ,ಅಪನಂಬಿಕೆ ಇತ್ಯಾದಿಗಳಿಗೆ ಎಡೆಗೊಟ್ಟು ಓದುಗರು ಕತೆಗೆ ತಮ್ಮ ತಮ್ಮದೇ ಅರ್ಥ / ಅಪಾರ್ಥ ಮಾಡುತ್ತಿದ್ದರು.
  ಆದ್ದರಿಂದಲೇ ಹುಡುಗನು ಕೊಡೆ ಹಿಡಿದದ್ದು ಕತೆಗೆ ಮೆರುಗು ಕೊಟ್ಟಿದೆ. ಇದು ನನಗೆ ಬಹಳ ಹಿಡಿಸಿದ ಕತೆಯಾಗಿದೆ
  .
  ನಿಮ್ಮ ಹನಿಗವನಗಳು,ಭಾವಗೀತೆಗಳು ಇನ್ನೂ ಹೆಚ್ಚು ಹೆಚ್ಚು ಬರಲಿ ಎಂದು ಹಾರೈಸುತ್ತೇನೆ.

  ನಾನು ಕವಿ ಅಲ್ಲ.
  ಆದ್ದರಿಂದ ನನ್ನ ಅಭಿಪ್ರಾಯಗಳು ವೈಯಕ್ತಿಕವಾದವುಗಳು. ಸಾಹಿತ್ಯ ವಿಮರ್ಶೆಯ ತತ್ತ್ವ ಬಳಸಿ ಹೇಳುವದು ನನ್ನ ಇಚ್ಛೆ ಅಲ್ಲ. ಆದಾಗ್ಯೂ ನನ್ನ ಅನಿಸಿಕೆಗಳನ್ನು ಹೇಳುತ್ತೇನೆ. ಕನ್ನಡದಲ್ಲಿ ನಾವು ಭಾವಗೀತೆಗಳು ಎಂದು ಎಂಟು ಹತ್ತು ದಶಕಗಳ ಹಿಂದೆ ಪ್ರಾರಂಭಿಸಿದ್ದು ಇಂಗ್ಲಿಷ್ ಲಿರಿಕ್ ಗೀತೆಗಳ ಪ್ರಭಾವದಿಂದ ಬಂದಿದೆ. ಇಂಗ್ಲಿಷ್ ನಲ್ಲಿ ಈ ಬಗೆಯ ಗೀತೆಗಳು ಬಂದದ್ದು ಗ್ರೀಕ್ ಸಾಹಿತ್ಯದಿಂದ. ಭಾವಗೀತೆಗಳು ಚಿಕ್ಕದಾದಷ್ಟೂ ಹೆಚ್ಚು ಪರಿಣಾಮಕಾರಿಯಾಗುತ್ತವೆ ಎಂದು ಇಂಗ್ಲಿಷ್ ವಿಮರ್ಶಕರು ಹೇಳಿದ್ದಾರೆ. ಕನ್ನಡದಲ್ಲಿ ಅದೇ ರೀತಿ ಇರಬೇಕು ಎಂಬ ನಿಯಮವೇನೂ ಇಲ್ಲ. ಆದರೂ ಭಾವಗೀತೆಯ ಉದ್ದಳತೆ ಅದರ ಪರಿಣಾಮಕ್ಕೆ ಬಾಧಕವಾಗಬಹುದಾಗಿದೆ ಎಂದು ನನ್ನ ಸ್ವಂತದ ಅನಿಸಿಕೆ. ಇಂದಿನ ತಾಂತ್ರಿಕ ಯುಗದಲ್ಲಿ ಓದುಗರು ಮನಗೊಟ್ಟು ಓದುವದಕ್ಕೆ ಹಿಂಜರಿಯುತ್ತಾರೆ. ಆದ್ದರಿಂದ ಭಾವಗೀತೆಗಳನ್ನು ನೀವು ಚಿಕ್ಕದಾಗಿಸಿ ನೋಡಬಹುದಾಗಿದೆ.
  ಕಥಾನಕ ಗೀತೆ ಇದ್ದರೆ ಉದ್ದವಾಗಿ ಬರೆಯಬಹುದಾಗಿದೆ. ನಾನೇ ಒಂದು ಹನ್ನೆರಡು ಪುಟಗಳಷ್ಟು ಉದ್ದವಾದ ಕವನ ಬರೆದಿರುವೆ. ಅದು ಭಾವಗೀತೆ ಅಲ್ಲ. ಅದೊಂದು ಕತೆಯ ಗೀತೆ. ಮುಂದೊಮ್ಮೆ ಅದನ್ನು ಪ್ರಕಟಿಸುವೆ.

  ಪ್ರತಿಯೊಬ್ಬರಿಗೂ ಅವರವರದೇ ಶೈಲಿ ಇರುವದು. ಆದ್ದರಿಂದ ನನ್ನ ಈ ಅಭಿಪ್ರಾಯದ ಬಗ್ಗೆ ನೀವು ತಲೆ ಕೆಡಿಸಿಕೊಳ್ಳುವ ಕಾರಣವಿಲ್ಲ.
  ನಿಮ್ಮ ಸಾಹಿತ್ಯ ಕೃಷಿ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸುತ್ತೇನೆ.


  ಎರಡು ದಿನಗಳ ಹಿಂದೆ ಬೆಂಗಳೂರಿನ ಒಂದು ವಾರಪತ್ರಿಕೆಯಲ್ಲಿ ನನ್ನದೊಂದು ಕವನ ಪ್ರಕಟವಾಗಿದೆ. ಅದರ ಫೋಟೋ ಈ ಪತ್ರದೊಂದಿಗೆ ಇರಿಸಿದ್ದೇನೆ.
  ಇತಿ ನಿಮ್ಮ ,
  ಆನಂದ ದೇಶಪಾಂಡೆ
  ವೆಸ್ಟಹಾಟನ್, ಇಂಗ್ಲಂಡ
  ೨೨ ಜನೆವರಿ ೨೦೧೩  ReplyDelete
 3. ಅನಂತ ಧನ್ಯವಾದಗಳು ಆನಂದ ದೇಶಪಾಂಡೆ ಅವರೇ , ನಿಮ್ಮ ಸುಂದರ ,ಸಕಾರಾತ್ಮಕ ವಿಮರ್ಶೆಗೆ ನಾನು ಅಬಾರಿ .

  ReplyDelete