Thursday, June 21, 2012

ಕಪ್ಪು ಹಲಗೆ

                                               
 ಗೋಡೆಯೊಳಗಿನ  ಬಂಧಿ, ಕಪ್ಪನೆಯ  ಮಿರುಗು  
ಖಾಲಿ ಶಿಲೆಗೆ , ಒತ್ತಿ  ಬರದದ್ದೆಲ್ಲವೂ  ಬೆರಗು
ಗೌಜು   ಗದ್ದಲದಲ್ಲೇ ಎವೆಯಕ್ಕದ   ತುಂಟ ನೋಟ ,
ಬೆತ್ತದ ಬೆದರಿಕೆಯ ಶಿಸ್ತಿನ ಪಾಠ ,ಹೇಗಾಯಿತೋ  
ಬಳಪದೊಂದಿಗೆ ಸ್ನೇಹ ,  ಈಗ  ನಿತ್ಯದ ಒಡನಾಟ

ಗೀಚಿದರೇನೋ ಗಣಿತ ,ಇತಿಹಾಸ , ಚರಿತ್ರೆ
 ನಿತ್ಯವೂ ನನ್ನಂಗಳದಲಿ  ಅಕ್ಷರ ಜಾತ್ರೆ
ಮಧ್ಯಂತರ ವಿಲ್ಲದ ತಪಸ್ಸಿನಂತೆ ಶಿಕ್ಷಣ
ಎರಕವಾಗಲಿ ವಿಧ್ಯೆ , ಜೊತೆಗಿರಲಿ ವಿವೇಕ ಪ್ರತಿಕ್ಷಣ
ಚಾಕಿನ ಧೂಳಿಗೊಮ್ಮೆ ಕೆಮ್ಮಿ , ಅರಿತದ್ದೇನೋ ..
ಕಲಿತ ದ್ದೇನೋ, ಚಿಂತಿಸುವುದೇಕೆ ಮೂಕ ಮನ .?

ಅನುಭವಗಳ ಮಾಡಾದೇ ,ಕಾಲ ಚಕ್ರದಲಿ
ಬರೆದು ಅಳಸಿದರೂ ನೆನಪಿನ ಗೂಡಾದೇ
ಬಿಡದಿ ಮೋಹ ,  ಮಕ್ಕಳ ನೆನಪಲಿ ಅತ್ತೆ
ಅರಿವಿಲ್ಲ ನನಗೆ , ಹೇಳರಾರೂ  ಎಕೆನಗೆ  
ಯಾರಾದರೋ ವಿಜ್ಞಾನಿ, ಯಾರು ಸಿಪಾಯಿ
          ಮಾಗಿ ಹಣ್ಣಾಯಿತೇ  ಎಲೆ  ಮರೆ ಕಾಯಿ ...?        

ಸಾಕ್ಷರತೆಯ  ಜ್ಯೋತಿಗರ್ಪಿಸೆ   ಬಾಳು
ತುಂಬಲಿ  ಜ್ಞಾನ ಸಾಗರವೇ   ಹನಿ ಹನಿಯಲೂ
 ಕನಸ  ಚಿಗುರಿ,  ಗಡಿ  ದಾಟಿ ಮುನ್ನುಗ್ಗಲಿ  ಸಾಲು
ಸತ್ಪ್ರಜೆಗಳಾಗಿ ,ಸಿಗಲಿ ಸತ್ಯದ  ಕೂಳು ,ಸಂತಸದ ಪಾಲು .

( ನನ್ನ ಶಾಲೆಯ ಕಪ್ಪು ಹಲಗೆಗೊಂದು ನಮನ :)

8 comments :

 1. This comment has been removed by the author.

  ReplyDelete
 2. ಧನ್ಯವಾದಗಳು ಆರತಿಯವರೇ,

  ಶಾಲೆಯ ದಿನಗಳನ್ನು ಆ ಕಪ್ಪು ಹಲಗೆಯ ಮಾಯಾಜಾಲವನ್ನು ಅದ್ಭುತವಾಗಿ ಹಿಡಿದಿಟ್ಟಿದ್ದೀರಿ. ಕನ್ನಡ, ಗಣಿತ ಇನ್ನಿತರ ಪಾಟಗಳು ಅದರ ಮೇಲೆ ಮೂಡಿ ಮಾಯವಾಗುತ್ತಿದ್ದ ವಿಚಿತ್ರಗಳು. ನಮಗೆ ಪರೀಕ್ಷೆಯಲ್ಲೂ ಅದರ ಮೇಲೆ ಪ್ರಶ್ನೆಗಳನ್ನು ಬರೆಯುತ್ತಿದ್ದರು.

  ನಾನು ಹಳ್ಳಿಯ ಶಾಲೆಯಲ್ಲಿ ಐದನೇ ತರಗತಿ ವರೆಗೆ ಓದಿದವನು. ಮರಳು ಹಾಸಿದ ನೆಲ ಮತ್ತು ಅಲ್ಲಲ್ಲಿ ಬಿಳುಪೆದ್ದ ಕಪ್ಪು ಹಲಗೆ ಇದು ನನ್ನ ನೆನಪು. ನೆಲದ ಮೇಲೆ ಕುಳಿತು ಕದ್ದು ಕಳ್ಳೇ ಕಾಯಿ ತಿಂದು ಮರಳಿನ ಒಳಗೆ ಅವಿತಿಡುತ್ತಿದ್ದೆವು. ಹತ್ತು ದಿನಕ್ಕೊಂದು ಸಾರಿ ಅದು ಯಾವುದೋ ಹಳ್ಳಿ ಸೊಪ್ಪು ತಂದು ರಸ ಹಿಂಡಿ ಕಪ್ಪು ಹಲಗೆಗೆ ಉಜ್ಜುತ್ತಿದ್ದೆವು.

  ಮೇಸ್ಟ್ರಿಗೆ ಹುರುಪು ಬಂದರೆ ವಿಶಾಲ ಆಲದ ಮರದ ಕೆಳಗೇ ಅಂದಿನ ತರಗತಿ.

  ಒಂದನೇ ಕ್ಲಾಸ್ ಕಲಿಸುತ್ತಿದ್ದ ಮಲ್ಲಪ್ಪ ಮೇಷ್ಟು ನನಗೆ ಅಚ್ಚರಿಯ ಸಂಗತಿ ನಾನು ಪಿ.ಯು.ಸಿ ತಲುಪಿದ ಮೇಲೂ ಅವರು ಒಂದನೇ ಕ್ಲಾಸಿಗೇ ಕಲಿಸುತ್ತಿದ್ದರು.

  ಆಗ ನಾನು ಗೀಚಿದ ಪದ್ಯ:
  "ಗೌಡರ ಮಗ ಪುಟ್ಟಣ್ಣ
  ಡಾಕ್ಟರ್ ಆದನು ಕಣಪ್ಪ,
  ಒಂದನೇ ತರಗತಿ ಮಲ್ಲಪ್ಪ
  ಯಾಕೋ ಪಾಸೇ ಆಗಲಿಲ್ಲ ಕಾಣಪ್ಪ!"

  ನನ್ನನ್ನು ಹಿಂದಕ್ಕೆ ಕರೆದೊಯ್ದು ಬಾಲ್ಯ ನೆನಪಿಸಿದ್ದಕ್ಕಾಗಿ ನಿಮಗೆ ಅನಂತ ನಮನಗಳು.

  ReplyDelete
 3. ಕವಿತೆ ಕಪ್ಪು ಹಲಗೆಯದ್ದಾದರೂ ಈಗ ನಗು ಮಾತ್ರ ಸುಣ್ಣದಕಡ್ಡಿಯ ಬರಹದಂತೆ ಬಿಳಿ, ಶುಭ್ರ! ಕವಿತೆಯೂ ನಳನಳಿಸುತ್ತಿದೆ ಎಲೆ ಮರೆಯಿಂದ ಹೊರಬಂದು.

  ReplyDelete
 4. dhanyavaadagalu badarinath, haagu pushparaj nimma mechhugege .

  ReplyDelete
 5. ಇಂದು Ceramic steel white board / Digital Classroom Equipment ಬಂದರೂ , ಕಾಲ ಚಕ್ರದಲಿ ಬರೆದು ಅಳಸಿದ, ನೆನಪಿನ ಗೂಡಾದ ನಮ್ಮೆಲ್ಲರ ಶಾಲೆಯ ಕಪ್ಪು ಹಲಗೆಗೊಂದು ನಮನ.

  -ಪ. ರಾಮಚಂದ್ರ,
  ದುಬೈ , ಸಂಯುಕ್ತ ಅರಬ್ ಸಂಸ್ಥಾನ.

  ReplyDelete
 6. dhanyavaadagalu ramachandra avare ..nanna blog ge bheti needi nimma anisikegalannu tilisidikkaagi .

  ReplyDelete
 7. I am a Publisher. All your poems are good. I want publish this in books Format. If you are interested please call me on this Number- 98444 06266
  Anand Korati,
  Parichaya Prakashana, Bangalore - 560004

  ReplyDelete
 8. namskaara anand karoti avare . pls give ur email id ?

  ReplyDelete