Sunday, May 6, 2012

ನೆನಪಿನ ಕವನ


ನೆನಪಿನ ಕವನ

ನೆನಪಿದೆಯೇ .....
ನಿನ್ನ ಮೊದಲ ಕವನ ..
ಸುಪ್ತ ಕಲೆಗೆ ಭಾವಗಳ ಸನ್ಮಾನ ;

ಮೊದಲ ಪ್ರೇಮ ಪತ್ರದಂತೆ ..
ಬಚ್ಚಿಟ್ಟ ಸವಿಗನಸಿನಂತೆ ..

ಪದಗಳ ಜಾತ್ರೆಯ ಸಂಭ್ರಮ ,,
ರಸ – ಪ್ರಾಸಗಳ ಸಮಾಗಮ ..

ಕಲ್ಪನೆಯಲ್ಲೇ ಹಿಗ್ಗಿ ಮೆರೆದು ,
ತೋಚಿದೆಲ್ಲ ಗೀಚಿ ಕೊರೆದು ...

ಚೊಚ್ಚಲ ಕೂಸಿಗೆ ಸ್ಪೂರ್ತಿಯ ಅಲಂಕಾರ ..
ಮಿನುಗುವ ಶೀರ್ಷಿಕೆಯ ತಿಲಕದ ಶೃಂಗಾರ ,,

ತಿದ್ದಿ ತೀಡಿದಷ್ಟೂ ಮನಕ್ಕಿಲ್ಲ ಸಮಾಧಾನ ...
ಎಲ್ಲೋ ಪಕ್ವತೆಯ ಸವಾಲಿನ ಅನುಮಾನ ,,,

ಹೃದಯದಲ್ಲೇನೂ ಹೊಸ ಪುಳುಕ ,
ಜಗಕೆ ಪರಿಚಯಸುವ  ಸುಪ್ತ ತವಕ ...

ಹ್ರುನ್ಮನದ  ಹೊದೊಟದಲ್ಲಿ ಅರಳಿದ ಮೊದಲ ಸುಮ
ತೋಟ ಬೆಳದರೂ ಮರೆತಿಲ್ಲ ನನ್ನೆನಪಿನ ಘಮ ...

ಹೃದಯದಿಂದ ಹರಸುವೆ ನಾ ಎಲ್ಲ ಕಾಲಕು .......
ಪ್ರೇರಣೆಯಾಗುತ್ತ , ಹರಿಯಲಿ ಭಾವಗಳ  ಬೆಳಕು ,,
ಸುಂದರ  ಹಾಡಾಗಲಿ ,ಕಾವ್ಯಮಯವಾಗಲಿ ಬದುಕು.


4 comments :

  1. ಈ ಕವಿತೆ ಚೆನ್ನಾಗಿದೆ.ಏಕೆಂದರೆ, ನಿಜವಾಗಿ ಬರೆಯುತ್ತೀರಿ.ಅದು ಅನುಭವಗಳನ್ನು ಬಿಚ್ಚಿಟ್ಟಂತೆ ಮನಸ್ಸು ಅಲ್ಪಸ್ವಲ್ಪವೇ ಮಿಸುಕಾಡಿದಂತೆ.

    ReplyDelete
  2. modala salada ellvuu aliyalaarada savi nenapu-kavana chennaagide-koneya saalalli ondu tappide saripadisi maaya aagide-maya aagabekittallavaa?

    ReplyDelete
  3. ತುಂಬಾ ಸುಂದರ ಭಾವಗಳ ಹರಿವು, ಸುಂದರ ಹಾಡಾಗಲಿ ,ಕಾವ್ಯಮಾಯವಾಗಲಿ ಬದುಕು.

    ReplyDelete
  4. ಧನ್ಯವಾದಗಳು ರವಿ , ರೇಶ್ಮಾ .ಶರತ್ ,, ನಿಮ್ಮ ಅಭಿಪ್ರಾಯಗಳೆ ನನಗೆ ಇನ್ನು ಬರೆಯಲು ಸ್ಪೂರ್ತಿ !
    ನಿಮ್ಮ ಪ್ರೋತ್ಸಾಹಕ್ಕೆ ನಾ ಅಭಾರಿ !

    ReplyDelete