Wednesday, April 25, 2012

ಕನಸಿನಾಳದಿಂದ


ಕವನ : ಕನಸಿನಾಳದಿಂದ 

ಕನಸುಗಳೆ ಬನ್ನಿ ಆಗೊಮ್ಮೆ ಈಗೊಮ್ಮೆ
ದಣಿದ ಮನಕ್ಕೊಂದು ಬಿಸಿ ಅಪ್ಪುಗೆಯಂತೆ
ಎದೆಯ ಕೊಲಾಹಲಕ್ಕೆ ಅಮೃತ ವರ್ಷಿಣಿಯಂತೆ
ಬನ್ನಿ ಕನಸುಗಳೆ ಆಗೊಮ್ಮೆ ಈಗೊಮ್ಮೆ
 
ನಿದ್ದೆಯ ಮುಸಕಿನೊಳು ಬಂದು
ತುಂಟಾಟ ಮಾಡದಿರಿ
ಮನದ ತುಂಬೆಲ್ಲಾ ಹೂರಾಶಿಯ ಚೆಲ್ಲಿ
ಮುಂಜಾನೆಯ ಮಂಜಿನಂತೆ ಕರಗದಿರಿ
ಕರೆದೊಯ್ಯಿರಿ ಬಾನಂಗಳದ ಊರಿಗೆ, ನಕ್ಷತ್ರಗಳ ತೇರಿನಲ್ಲಿ
ಹೊಸ ಹೆಜ್ಜೆಗೆ ಗೆಜ್ಜೆ ಕಟ್ಟಿ ಕುಣಿದಾವು ಚಂದದ ನವಿಲುಗರಿ
ದಿನಕೊಂದು ಹೊಸ ಕಥೆಗೆ ಮುನ್ನುಡಿಯ ಬರೆಯುತ್ತ
ಶೂನ್ಯದಾ ಕೂಗಿಗೂ ಪ್ರತಿಧ್ವನಿಯ ನೀಡುತ್ತ
ಚಂದದೂರು , ಹಣೆತೆಗಳ ದೀಪೊತ್ಸವ ,
ಇರಲಿ ತುಟಿ ಮಲ್ಲಿಗೆಯ ನಗು ಅನಂತ
ಎದೆಯಲ್ಲೆಲೂ ಹೊಸ ಭಾವಗಳ ಪುಳಕ
ಹೆಪ್ಪುಗಟ್ಟಿದ ಕಲ್ಪನೆಗಳು ಈಗ ಜೀವಂತ


ಇರಲಿ ಎಲ್ಲರ ಬಾಳು ಸುಪ್ತ ಕನಸುಗಳ
ಅಂತರ್ಜಾಲದ ಒಳಗೆ
ಎಷ್ಟು ಮುಸುಕ್ಹೊದ್ದು   ಮಲಗಿದರೂ
ಕಾಡುವ ಕರಾಳ ಬದುಕಿನ ಮೈ ಚಳಿಗೆ
ಮುದ ನೀಡುವ ಸಂತೃಪ್ತಿಯ ಬಿಸಿ
ಕಾವು ಕೊಟ್ಟು ಹೋಗಿ  ಒಂದು ಘಳಿಗೆ
ಕನಸುಗಳೆ ಹೋಗಿ  ಬನ್ನಿ ಅರುಣೋದಯದ
ಹಾಡು ಹಾಡುತ ನಮ್ಮ ಬಾಳಿಗೆ.



                                                                           ( ಗಲ್ಫ್ ಕನ್ನಡಿಗ ಪತ್ರಿಕೆ ಯಲ್ಲಿ ಬಂದ ಕವನ )

4 comments :

  1. ಉತ್ಕಟ ಭಾವಾಭಿವ್ಯಕ್ತಿಯ ಸುಂದರ ಚಿತ್ರಣ. ಕನಸುಗಳನ್ನು ಬಂದುಹೋಗುವ ಗೆಳೆಯನಂತೆ ಪರಿಗಣಿಸುವ ಪರಿ ಇಷ್ಟವಾಯಿತು.

    ReplyDelete
  2. ಧನ್ಯವಾದಗಳು ನಿಮ್ಮ ಮೆಚ್ಚುಗೆಯ ನುಡಿಗಳಿಗೆ ವರ್ಣೇಕರ್ ಸರ್ !

    ReplyDelete
  3. vandanegalu reshma nimma mecchugeya nudi ge !

    ReplyDelete