Wednesday, April 25, 2012

ಪಯಣ






ಪಯಣ


ಕಾಲವನ್ನೆಲ್ಲಾ ಹೊತ್ತು
ಹೋಗುವ ಹೊತ್ತು ,
ಹಸಿ ಬಯಕೆಗಳ ಬೆನ್ನೇರಿ
ಅತ್ತು , ಬಿಕ್ಕಳಿಕೆಯಲ್ಲೇ
ದಾರಿ ಸವೆದಿತ್ತು .
ನೋವು –ನಲಿವುಗಳ ತೂಗೊಯ್ಯಲೆಗೆ
ಹೋರಾಟವೇ  ಶ್ರಮಿಸಿ ನಕ್ಕಿತ್ತು ,
ಕೈ ಬೀಸಿ ಕರೆದ ಸತ್ಪಥದ ದಾರಿಗೆ
ಕುಹಕವಾಡಿದ  ಕೊರಗಿತ್ತು ,
ಗುರಿಯೊಂದು ಗೋರಿ ಸೇರುವ ಮುನ್ನ
ಮೆಲ್ಲನೆ ಕನವರಿಸಿತ್ತು ,
ನಿದುರೆಯಲ್ಲೂ ಮನದ
ಕಣ್ತೆರೆಯಲು ಹವಣಿಸಿತ್ತು ,
ಒಂದೇ ಒಂದು ಬಾರಿ ...
ಕಟ್ಟ ಕಡೆಯ ಸಾರಿ ....
ನೀಡೆನಗೆ ಕರುಣೆಯ ಕೈ ತುತ್ತು
ಬೇಡುವಷ್ಶ್ರರಲ್ಲಿ ಪಯಣ ಮುಗಿದಿತ್ತು ! 


1 comment :

  1. maanava jeevanada payana-aritukolluva modale mugidu hoguva payana

    ReplyDelete