ಗೋಡೆಯೊಳಗಿನ
ಬಂಧಿ, ಕಪ್ಪನೆಯ ಮಿರುಗು
ಖಾಲಿ ಶಿಲೆಗೆ , ಒತ್ತಿ ಬರದದ್ದೆಲ್ಲವೂ
ಬೆರಗು
ಗೌಜು ಗದ್ದಲದಲ್ಲೇ ಎವೆಯಕ್ಕದ ತುಂಟ
ನೋಟ ,
ಬೆತ್ತದ ಬೆದರಿಕೆಯ ಶಿಸ್ತಿನ ಪಾಠ ,ಹೇಗಾಯಿತೋ
ಬಳಪದೊಂದಿಗೆ ಸ್ನೇಹ , ಈಗ ನಿತ್ಯದ
ಒಡನಾಟ
ಗೀಚಿದರೇನೋ ಗಣಿತ ,ಇತಿಹಾಸ , ಚರಿತ್ರೆ
ನಿತ್ಯವೂ ನನ್ನಂಗಳದಲಿ ಅಕ್ಷರ ಜಾತ್ರೆ
ಮಧ್ಯಂತರ ವಿಲ್ಲದ ತಪಸ್ಸಿನಂತೆ ಶಿಕ್ಷಣ
ಎರಕವಾಗಲಿ ವಿಧ್ಯೆ , ಜೊತೆಗಿರಲಿ ವಿವೇಕ
ಪ್ರತಿಕ್ಷಣ
ಚಾಕಿನ ಧೂಳಿಗೊಮ್ಮೆ ಕೆಮ್ಮಿ , ಅರಿತದ್ದೇನೋ
..
ಕಲಿತ ದ್ದೇನೋ, ಚಿಂತಿಸುವುದೇಕೆ ಮೂಕ ಮನ .?
ಅನುಭವಗಳ ಮಾಡಾದೇ ,ಕಾಲ ಚಕ್ರದಲಿ
ಬರೆದು ಅಳಸಿದರೂ ನೆನಪಿನ ಗೂಡಾದೇ
ಬಿಡದಿ ಮೋಹ , ಮಕ್ಕಳ ನೆನಪಲಿ ಅತ್ತೆ
ಅರಿವಿಲ್ಲ ನನಗೆ , ಹೇಳರಾರೂ ಎಕೆನಗೆ
ಯಾರಾದರೋ ವಿಜ್ಞಾನಿ, ಯಾರು ಸಿಪಾಯಿ
ಮಾಗಿ ಹಣ್ಣಾಯಿತೇ ಎಲೆ ಮರೆ
ಕಾಯಿ ...?
ಸಾಕ್ಷರತೆಯ ಜ್ಯೋತಿಗರ್ಪಿಸೆ
ಬಾಳು
ತುಂಬಲಿ ಜ್ಞಾನ ಸಾಗರವೇ ಹನಿ ಹನಿಯಲೂ
ಕನಸ ಚಿಗುರಿ, ಗಡಿ ದಾಟಿ
ಮುನ್ನುಗ್ಗಲಿ ಸಾಲು
ಸತ್ಪ್ರಜೆಗಳಾಗಿ ,ಸಿಗಲಿ
ಸತ್ಯದ ಕೂಳು ,ಸಂತಸದ ಪಾಲು .
( ನನ್ನ ಶಾಲೆಯ ಕಪ್ಪು ಹಲಗೆಗೊಂದು
ನಮನ :)
