ಆ ವಾರ ನನ್ನದು ಕೊನೆಗಳಿಗೆಯ ಪ್ಯಾಕಿಂಗ್ ಶುರುವಾಗಿತ್ತು .
ನನ್ನ ಪತಿ ದುಬೈ ನಗರಿಗೆ ಕೆಲಸದ ನಿಮಿತ್ತ ವಲಸೆ ಹೋಗಿ ಆಗಲೇ ಆರು ತಿಂಗಳಾಗಿತ್ತು . ಇನ್ನು
ನಾವುಗಳು ಆ ವಾರಾಂತ್ಯವೇ ಅಲ್ಲಿಗ್ಗೆ
ಹೊರಡುವುದು ಬುಕ್ ಆಗಿತ್ತು .
ಸ್ವಲ್ಪ ಎಕ್ಸಟ್ರಾ
ರೊಕ್ಕ ಕೊಟ್ಟರೂ ಪರವಾಗಿಲ್ಲ ನಿನ್ನ ಎಲ್ಲಾ ಪಾತ್ರೆ
/ಪಗಡ , ಕೆಲವು ಆಗತ್ಯ ವಸ್ತುಗಳ ಇಲ್ಲಿ ಸಿಗಲಾದಂಥವು
, ತಂದು ಬಿಡು ಅಂತ ನನ್ನ ಗೆಳತಿ ಪುಕ್ಕಟೆ ಸಲಹೆ ನೀಡಿದ್ದಳು. ಹೀಗಾಗಿ ನನ್ನ ಲಗ್ಗೇಜ್
ನೋಡಿ ನನಗೇ
ಘಾಬರಿ !, ಏರಪೋರ್ಟ್ನ ಕಸ್ಟಮ್ಸ್ ಇಲಾಖೆಗೆ ನನ್ನಿಂದ
ಬೃಹತ್ ಆದಾಯ ಅಂತ ವಾರದ ಭವಿಷ್ಯ ಕೇಳಿದ ಹಾಗಿತ್ತು ! ನನ್ನ ದೇವರಗಳನ್ನೂ ( ಪುಷ್ಪಕ ) ವಿಮಾನದಲ್ಲಿ ಹತ್ತಿಸಲು ದೊಡ್ಡ ಗಂಟೊಂದನ್ನೆ
ಮಾಡಿದ್ದೆ , (ಸದ್ಯ ದೇವರ ಮನೆ ಇಲ್ಲೇ
ಉಳಿಸಿದ್ದೆ ! ) ,ಹಾಗೇನೆ
ಮತ್ತೇನಾದ್ರು ತರಲೆ ಅಂತ ಇವರಿಗೆ ಫೋನಾಯಿಸಿದಾಗ ಇವರಿಗೆ
ನನ್ನ ಲಗ್ಗೇಜ್ ವಾಸನೆ ಬಡಿದು ಅಲ್ಲೇ ತಲೆ ಸುತ್ತಿ ಬೀಳುವುದೊಂದೇ ಬಾಕಿ ! ! ನಾನು “ : ರೀ ಮನೇಲಿ ಗಸ ಗಸೆ ತುಂಬಾ ಮಿಕ್ಕಿದೆ , ಅಲ್ಲಿಗೇ
ತಂದು ಬಿಡ್ತೀನಿ , ಹೇಗೂ ನಿಮಗೆ ಗಸಗಸೆ ಪಾಯಸ ಅಂದ್ರೆ ಇಷ್ಟ ಅಲ್ವಾ “ ಅಂದೆ . ಇವರು ತಕ್ಷಣ ಘಾಬರಿಯಿಂದ “ ಆಯ್ಯೋ
ಮಾರಾಯ್ತಿ ಮೊದಲು ಅದನ್ನ ಹೊರಗೆ ಎತ್ತಿಡು ! ಈ
ದೇಶದಲ್ಲಿ ಗಸಗಸೆ ಯನ್ನ ಡ್ರಗ್ಸ್
ಅಂತ ಪರಿಗಣಿಸ್ತಾರೆ , (ಗಾಂಜಾ, ಅಫೀಮ್ ಗಳಂತೆ !)
ಹಾಗಾಗಿ ಅದು ಬ್ಯಾನ್ ಪದಾರ್ಥ , ಇಲ್ಲಿ ತರುವ
ಹಾಗಿಲ್ಲ .ಅದೇನಾದ್ರೂ ನಿನ್ನ ಬ್ಯಾಗಲ್ಲಿ ಕಂಡರೆ ನಿನ್ನನೂ ಒಳಗೆ ಹಿಡಿದು ಹಾಕ್ಬಿಡ್ತಾರೆ ಅಷ್ಟೇ !” ಅಂದ್ರು , ತಂಪಾದ ಗಸಗಸೆ ತೊಗೊಂಡ ಹೋಗೋ ಮುಂಚೇನೇ ಇವರು ನನಗೆ
ಬಿಸಿಬಿಸಿ ಯಾಗಿ ಶಾಕ್ ಕೊಟ್ಟಿದ್ರು !
.
.
ಅಂತೂ ನನ್ನ ಬೃಹತ್ ಲಗ್ಗೇಜ್ ಹಾಗು ನನ್ನ ಎರಡು ಪುಟ್ಟ ಲಗ್ಗೇಜ್ (ಮಕ್ಕಳು ) ನೊಂದಿಗೆ ದುಬೈ ನಗರಿ
ಮುಟ್ಟಿದೆ ..ಹೊಸ ಊರು ,ಹೊಸ ವಾತಾವರಣ ಇಷ್ಟವಾಯಿತು . ಇಲ್ಲಿನ ವಿಶ್ವ ದರ್ಜೆಯ ಮೂಲಭೂತ ಸೌಕರ್ಯಗಳು , , ಆಧುನಿಕ ಶಾಪಿಂಗ್ ಮಾಲ್ ಗಳು , /ಮನಮೋಹಕ ಗಗನ ಚುಂಬಿಗಳು ,ಆಕರ್ಷಕ ಪ್ರೇಕ್ಷಣೀಯ ಸ್ಥಳಗಳು ಹೀಗೆ
...ಎಲ್ಲವನ್ನು ಬೆರಗು ಗಂಣಿನಿಂದ ನೋಡುತ್ತಾ ಕ್ರಮೇಣ ಹೊಸ ಪರಿಸರಕ್ಕೆ ಹೊಂದಿಕೊಂಡೆವು ..
ಕೆಲವು
ತಿಂಗಳು ಹೊಸ ಊರು ಒಗ್ಗಿದ ನಂತರ , ನಾನೂ ಇಲ್ಲಿ ಉದ್ಯೋಗಕ್ಕಾಗಿ ಅರಸುತ್ತಾ , ಒಳ್ಳೆಯ ಸೂಕ್ತವಾದ ಕಂಪನಿ ಒಂದನ್ನ
ಹುಡುಕುವುದರಲ್ಲಿ ಯಶಸ್ವೀ ಆದೆ , ಅಂತೂ ಒಳ್ಳೆಯ ಕಡೆ ಕೆಲಸ ದೊರೆತು , ಕಚೇರಿಯ ವೇಳೆಯೂ ಅನುಕೂಲಕರವಾದ್ದರಿಂದ
, ಅಲ್ಲಿಗೇ
ಸೇರಲು
ನಿರ್ಧರಿಸಿದೆ .
ಆಗ ನಾನು ಕೆಲಸಕ್ಕೆ ಸೇರಿದ ಹೊಸತು . ಮೂಲತಹ ಇದು ಅರಬ್ ಕಂಪನಿ . (ಬ್ರ್ಯಾಂಚ್ ಆಫೀಸು )
ಇನ್ನು ನನ್ನ ಕಚೇರಿಯ ಬಗ್ಗೆ ಹೇಳುವುದಾದರೆ , ಅಲ್ಲಿ ಎಲ್ಲರೂ ಅರಬ ಮೂಲದವರು , ಕೆಲವರು ಬ್ರಿಟಿಶ್ಶ್ ರಿದ್ದರು . ನಾನು ಹಾಗು
ಮತ್ತೆ ಇನ್ನೊಬ್ಬರು
ಮಲಯಾಳಿ ,
ನಾವಿಬ್ಬರೇ ಭಾರತೀಯರು . ಕಚೇರಿಯಲ್ಲಿ ಬಹುಪಾಲು ಸಹದ್ಯೋಗಿಗಳು
ಇಸ್ಲಾಂ ಧರ್ಮದವರು . ಅದರಲ್ಲಿ ನಾನೊಬ್ಬಳೆ ಹಿಂದೂ . ಸಾಮಾನ್ಯವಾಗಿ ಅರಬರು ಎಲ್ಲಾ ಭಾರತೀಯ ಮೂಲದವರನ್ನ “ ಅಲ್
ಹಿಂದ್ “ ಅಂದು ಕರೆಯುತ್ತಾರೆ
! ಮೊದಮೊದಲು ನಾನು ಅದನ್ನು ಕನ್ನಡೀಕರಿಸಿ ಕೊಂಚ ಗಲಿಬಿಲಿ ಗೊಂಡಿದ್ದೂ ಉಂಟು
. ಅಂತೂ ಹಾಗೂ ಹೀಗೂ
ಹೊಸ ಕಚೇರಿ ಅನಾಯಾಸವಾಗಿ ಒಗ್ಗಿತು , ಅಲ್ಲಿ ಎಲ್ಲರೂ ಬಹಳ ಸ್ನೇಹಪರರಾಗಿದ್ದ ಕಾರಣ ಕಚೇರಿಯ
ವಾತಾವರಣ ಕ್ರಮೇಣ ಇಷ್ಟವಾಗತೊಡಗಿತು.
ನಮ್ಮ
ಪ್ರಾಜೆಕ್ಟ್ ಮ್ಯಾನೇಜರ್
ಮೂಲತಹ ಲೆಬಿನಾನ್ ದೇಶದವರು
, ಬಹಳ ಆತ್ಮೀಯವಾಗಿ ನನ್ನ ಜೊತೆ ಮಾತನಾಡುತ್ತಿದ್ದರು . ಅವರು ಭಾರತಕ್ಕೆ ಬಹಳ ಸಲ ಪ್ರವಾಸಿಗರಂತೆ ಬಂದು ಜೈಪುರ, ಹೈದರಾಬಾದ್ , ಬೆಂಗಳೂರಿಗೂ
ಸಹ ಭೇಟಿ ನೀಡಿದ್ದರಂತೆ
, ಅವರ ಅಣ್ಣನ
ಮಗ ಬೆಂಗಳೂರಿನ
ಒಂದು ಇಂಜಿನೀರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವುದಾಗಿಯೂ ತಿಳಿಸಿದ್ದರು
. ನಮ್ಮ ಭಾರತದ ಸಂಸ್ಕೃತಿ , ಪರಂಪರೆ ಯನ್ನ ಬಹಳ ಮೆಚ್ಚಿಕೊಳ್ತಾ ಇದ್ದರು. . ಹಿಂದಿ ಸಿನಿಮಾಗಳತ್ತ ಅವರ ಒಲವು ಕಂಡೂ
ನನಗೂ ಆಶ್ಚರ್ಯ ! ಶಾರುಖ ಖಾನ್ , ಕರೀನಾ ಕಪೂರ್ , ಸಲ್ಮಾನ್ ಖಾನ್, ಐಶ್ವರ್ಯ ರಾಯ್ ಸಿನಿಮಾಗಳನಂತೂ
ತಪ್ಪಿಸುತ್ತಲೇ ಇರಲಿಲ್ಲಾ
. ! ( ಇಲ್ಲಿನ ಸಿನಿಮಾ ಮಂದಿರಗಳಲ್ಲಿ ಹಿಂದಿ ಸಿನಿಮಾಗಳಿಗೆ
ಅರೇಬಿಕ್ ಭಾಷೆಯ “ ಸಬ್ ಟೈಟಲ್ಸ್ರ “ (sub titles ) , ತೋರಿಸುತ್ತಾರೆ
. ) ಹಾಗಾಗಿ ಕೆಲವು ಅರಬರೂ ಕೂಡ ನಮ್ಮಗಳ ಹಾಗೆ ನಮ್ಮ ಬಾಲಿವುಡ್
ನಟ ನಟಿಯರ ಕಟ್ಟಾ ಫ್ಯಾನುಗಳು ಅಂತಲೆ ಹೇಳಬಹುದು
!
ಅವರು ನನ್ನನ್ನು ಸಂಬೋಧಿಸುವಾಗ
ಹಲೋ ಅರ್ರಾ .........ತೀ ಅಂತ “ ರಾ “ ಅಕ್ಷರವನ್ನ
ಎಷ್ಟು ದೀರ್ಘವಾಗಿ ಎಳೀತಾ ಇದ್ದು ಅಂದ್ರೆ ... ಅದೇ ಸಮಯದಲ್ಲಿ ಒಂದು ಲಾಡು ಆರಾಮವಾಗಿ ಅವರ ಬಾಯಲ್ಲಿ ಹಾಕಬಹುದು ಅಷ್ಟು !
ಇನ್ನು
ನಮ್ಮ ಬಿಡುವಿನ ವೇಳೆಯಲ್ಲಿ ನಾವಿಬ್ಬರೂ ಕಾಡ ಹರಟೆ ಅಲ್ಲ ಮರಳುಗಾಡು ಹರಟೆನೂ ಹೊಡೀತಿದ್ವಿ !. ನಮ್ಮ ಹಿಂದೂ ಸಂಸ್ಕೃತಿ /ಪರಂಪರೆ ಗಳು , ನಮ್ಮ ರೂಢಿಗಳ ಬಗ್ಗೆ ತಿಳಿದುಕೊಳ್ಳುವುದರಲ್ಲಿ ಅವರಿಗೆ ಹೆಚ್ಚಿನ
ಆಸಕ್ತಿ . ನಾನು ಕೆಲವು ಮಾಹಿತಿಗಳನ್ನು , ವಿಚಾರಗಳನ್ನು ಯಾವಾಗಲಾದರೊಮ್ಮೆ ಅವರು ಕೇಳಿದಾಗ ವಿವರಿಸುತ್ತಿದ್ದರೆ ಅದರ ಬಗ್ಗೆ ಸ್ವಾರಸ್ಯಕರ ವಾದ ಮುಖ ಭಾವ ಹೊತ್ತು
ಕೂತೂಹಲದಿಂದ ಆಲಿಸುತ್ತಿದ್ದರು .
ಹಾಗೇನೆ ಅವರ ದೇಶದ ಸಂಸ್ಕೃತಿ , ಆಚಾರ ವಿಚಾರಗಳನ್ನು ,ಅವರ ದೇಶದ ಆಂತರೀಕ ಸಮಸ್ಯಗಳನ್ನೆಲ್ಲಾ ನನ್ನೊಂದಿಗೆ ಮುಕ್ತವಾಗಿ ಹಂಚಿಕೊಳ್ಳುತ್ತಲೂ ಇದ್ದರು .
ಹಾಗೇನೆ ಅವರ ದೇಶದ ಸಂಸ್ಕೃತಿ , ಆಚಾರ ವಿಚಾರಗಳನ್ನು ,ಅವರ ದೇಶದ ಆಂತರೀಕ ಸಮಸ್ಯಗಳನ್ನೆಲ್ಲಾ ನನ್ನೊಂದಿಗೆ ಮುಕ್ತವಾಗಿ ಹಂಚಿಕೊಳ್ಳುತ್ತಲೂ ಇದ್ದರು .
ಇಲ್ಲಿಯವರಿಗೆ ವರ್ಷಕ್ಕೆ ಎರಡು ದೊಡ್ಡ ಹಬ್ಬ , ಒಂದು ರಮಾದಾನ್ (ರಂಜಾನ್) ಈದ್ , ಅಂದರೆ “ಈದ್ ಅಲ್ ಅದಾ “
ಮತ್ತು ಇನ್ನೊಂದು “ಈದ್ ಅಲ್ ಫಿತರ್ “
,ನಮಗೋ ನೂರೆಂಟು
ಈದ್ ಗಳು ಆಯಿ ಮೀನ್ ಹಬ್ಬಗಳು
:) ಹಾಗಾಗಿ ನಾನು ದೀಪಾವಳಿ . ಗೌರಿ/ಗಣಪತಿ
, ಹೋಳಿ ( ಬಣ್ಣಗಳ ಹಬ್ಬ ) , ದಸರಾ
ಹಬ್ಬಗಳಿಗೆ , ಯಾವಾಗಲಾದರೂ
ಒಮ್ಮೊಮ್ಮೆ ಅನುಮತಿ
ದೊರೆತರೆ ಅರ್ಧ ದಿನ ಆಫೀಸಿಗೆ ರಜೆ ಹಾಕುತ್ತಲಿದ್ದೆ
:) ( ಈ ಹಬ್ಬಗಳ ವಿಶೇಷತೆಗಳ
ಬಗ್ಗೆನೂ ಅವರಿಗೆ
ಹೇಳಿದಾಗ , ಒಹ್ ನಿಮ್ಮ ಹಬ್ಬಗಳೂ ತುಂಬಾ ಸ್ವಾರಸ್ಯಕರವಾಗಿದೆ
ಅಂತ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳ್ತಾ ಇದ್ದರು !
ಹೀಗೆ ಒಮ್ಮೆ ಗಣಪತಿ ಹಬ್ಬ ದ ಬಗ್ಗೆ ಹೇಳುತ್ತಾ ಹೇಗೆ ಗಣಪನ ಮೂರ್ತಿಯನ್ನು ತಂದು ವಿಜ್ರಂಭಣೆಯಿಂದ
ಸ್ಥಾಪಿಸಿ , ಪೂಜೆ ಸಲ್ಲಿಸಿ ನಂತರ ಒಂದು ದಿನಕ್ಕೆ ಅಥವಾ ಐದು ದಿನಗಳ
ಬಳಿಕೆ ಕೆರೆ / ಸಮುದ್ರದಲ್ಲಿ ವಿಸರ್ಜನೆ ಮಾಡ್ತಿವಿ ಅಂತ ವಿವರಿಸಿದಾಗ , ಅವರು ಆಶ್ಚರ್ಯ ದಿಂದ
“ oh soo sad , ಹಾಗಾದ್ರೆ ಪಾಪ ಮೂರ್ತಿ ನ್ನು
ನೀರಿನಲ್ಲಿ ಹಾಕ್ಬಿಡ್ತೀರಾ ? ( ಸುಮ್ನೆ ತಂದು ವೇಸ್ಟ್ ಮಾಡ್ಬಿಟ್ರಲ್ಲಾ
ಅನ್ನ್ನೂ ಹಾಗೆ ಹೇಳಿದಾಗ
ನನಗೂ ನಗು J ಹಾಗಾಗಿ ಪಾರಂಪಾರಿಕ ಹಬ್ಬ ಹರಿದಿನಗಳ ಬಗ್ಗೆ ನನಗಿರುವ ತಿಳಿವಳಿಕೆ , ಜ್ಞಾನ
ಬಂಡಾರ ಅವರ ಮುಂದೆ ಪ್ರದರ್ಶಿಸಿ ನನ್ನ ಬೆನ್ನನ್ನು
ಸ್ವತಹ ನಾನೇ
ತಟ್ಟಿ ಕೊಳ್ಳುವ ಅವಕಾಶ ನನಗೆ
ಆಗಾಗ ದೊರಯುತ್ತಲಿತ್ತು .
ಒಮ್ಮೊಮ್ಮೆ ನನಗೆ ಅದೇನು ನಿಮ್ಮ ದೇಶದಲ್ಲಿ ಪವಿತ್ರ ನದಿಯಂತೆ ಗ್ಯಾನ್ಜಸ್ಗ್ಯಾ (ಗಂಗಾ ನದಿ ) ಅದರಲ್ಲಿ ಮನುಷ್ಯರ ಆಸ್ತಿಗಳನ್ನು ಹಾಕಿಬಿಡ್ತೀರಂತೆ !! ಏಕೆ ಹಾಗೆ ? ನಿಮ್ಮ
ಸಾಧುಗಳು ಏಕೆ ಮೈಯಲ್ಲಾ
ಬೂದಿ
ಬಳಿದುಕೊಂಡು , ಇಷ್ಟುದ್ದಾ
ಕೂದಲು ಬಿಟ್ಟ
ಕೊಂಡಿರ್ತಾರಲ್ಲ್ಲಾ
....ಅಂತೆಲ್ಲಾ ನನ್ನ ತಲೇಲಿ ಹುಳ ಬಿಡ್ತಾ ಇದ್ದ್ರು ! ( ಅವರು ಯಾವದೋ ಕುಂಭ ಮೇಳದ ಸಾಕ್ಷ್ಯ ಚಿತ್ರಗಳನ್ನ ನೋಡಿರಬೇಕು ) ಅವರಿಗೆ ಸಮರ್ಪಕವಾದ
ಉತ್ತರ ಕೊಡ್ತಾ ಕೊಡ್ತಾ
ಅವರು ಬಿಟ್ಟ ಹುಳಾನಾ ಅವರ ತಲೆಗೆ ಬಿಡ್ತಾ
(ಕಚ್ಚಿಸ್ತಾ ) ಇದ್ದದ್ದು ಬೇರೆ ವಿಷಯ
ಬಿಡಿ ! ಮೂಲತಃ
ವ್ಯಕ್ತಿ ಒಳ್ಳೆಯವರೇ ! ಅವರಿಗೆ ನಮ್ಮ ಕೆಲವು ಧಾರ್ಮಿಕ ಆಚರಣೆ/ಪದ್ಧತಿ ಗಳನ್ನು ಕೇಳಿ ತಿಳಿಯುವ
ಕೂತುಹಲ ಅಷ್ಟೇ .! :)
ನಮ್ಮ
ಆಫೀಸಿನಲ್ಲಿ ಮಹಿಳಾ ಸಹದ್ಯೋಗಿಗಳ
ಸಂಖ್ಯೆ ಕಡಿಮೆ . . ಅದ್ರಲ್ಲಿ
ಒಬ್ಬಳು ಚೆಂದುಳ್ಳಿ ಚೆಲುವೆ
ಸಿರಿಯಾ ದೇಶದವಳು , ನಿಜಕ್ಕೂ
ದಂತದ ಬೊಂಬೆ ಹಾಗೆ ಇದ್ದಳು .
“ ಸಮಾ “ ಅಂತ
ಅವಳ ಹೆಸರು . interior design
departmentinalli ಅವಳ ಕೆಲಸ . ನಾವಿಬ್ಬರೂ
ಆಗಾಗ ಕುಶಲೋಪರಿ ವಿನಿಮಯ
ಮಾಡ್ಕೊಳ್ತಾ ಇದ್ದ್ವಿ ,
ಅವಳು ನಾ ಕೆಲ್ಸಕ್ಕೆ
ಸೇರಿದ ಶುರುವಿನಲ್ಲಿ ಒಮ್ಮೆ
ತನ್ನ ಟಿಫನ್ ಬಾಕ್ಸಿನಲ್ಲಿದ್ದ
ನಾನ್ -ವೆಜ್
ಆಹಾರವನ್ನ ನನ್ನೊಂದಿಗೆ
ಹಂಚಿಕೊಳ್ಳಲು ಬಂದಾಗ ನಾನು (
ಅಲ್ಲಿ ನಾನೊಬ್ಬಳೇ
!) ಸಸ್ಯಹಾರಿ
ಅಂತ ಗೊತ್ತಾಗಿ ,ಅಯ್ಯೋ
ಮೀನು ಕೂಡ ತಿನ್ನಲ್ವಾ ಪಾಪ !
ಅರ್ರೆ ಮೀನು
ವೆಜ್ ಅಲ್ವಾ ! ಅಂತ
ಬೇಜಾರ್ ಮಾಡಿಕೊಂಡಾಗ ನಾನು ನಕ್ಕು
“ ಸಮಾ” ಮೀನು ನಿಮಗೆ ವೆಜ್ ಇರಬಹುದು ,
ಆದರೆ ನಮಗೆ ಅದು ನಾನ್ ವೇಜ್
ಅಂದಾಗ ಅವಳಿಗೂ ನಗು !
ಒಮ್ಮೆ ಆಕೆ
ಹೋಗುತ್ತಿದ್ದ ಕ್ಲಬ್ಬ್ ಒಂದರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ
ಅವಳು ಪಾಲ್ಗೊಂಡಾಗ . ಆ
ಕಾರ್ಯಕ್ರಮಕ್ಕೆ ಭಾರತೀಯ ಉಡುಗೆಯನ್ನು
ಧರಿಸುವ ಅವಶ್ಯಕತೆ ಒದಗಿ ಬಂದಿತ್ತು .. ಅವಳ ಭಾರತೀಯ ಗೆಳತಿ
ನಾನೇ ಆಗಿದ್ದರಿಂದ ನನ್ನ ಬಳಿಗೆ ಬಂದು “ ಆರತಿ , ದಯವಿಟ್ಟು ನೀವು
ಏನು ಅಂದುಕೊಳ್ಳ ದ್ದಿದ್ದರೆ ನಿಮ್ಮ ಯಾವುದಾದರೂ
ಗ್ರಂಡಾಗಿರುವ ಸ್ಯಾರಿ
ನನಗೆ ಒಂದು ದಿನ ಮಟ್ಟಿಗೆ ಬಾಡಿಗೆಗೆ ಕೊಡ್ತೀರಾ ? “ ಅಂತ ಕೇಳಿದಾಗ
ನನಗೆ ನಗು . ನಾನು “ಅಯ್ಯೋ
ಧಾರಾಳವಾಗಿ ಕೊಡ್ತೀನಿ , ರೆಂಟು /ಬಾಡಿಗೆ
ಏನೂ ಬೇಡಮ್ಮ “ ಅಂದೆ . “ ಒಹ್ ತುಂಬಾ
ಧನ್ಯವಾದಗಳು ! ಹಾಗಿದ್ರೆ ಸರಿ ನಾಳೇನೆ
ಕಾರ್ಯಕ್ರಮ , ನನಗೆ ನೀವೇ
ಸೀರೆ ಉಡಿಸಿ ಬೇಕು ಪ್ಲೀಜ್
“ ಅಂತ ವಿನಂತಿಸಿ , ನನ್ನಿಂದ
ಅಸ್ತು ಅಂತ ಅನಿಸಿಕೊಂಡ ಮೇಲೆ ನಿರಾಳವಾಗಿ
“ಬಾಯ್ ಆರತಿ ತುಂಬಾ ಧನ್ಯವಾದಗಳು “ ಅಂತ ಮುದ್ದಾಗಿ ವಿದಾಯ ಹೇಳಿ ಹೊರನಡೆದಳು .
ಸರಿ ನನ್ನ ಒಂದು ಗ್ರಾಂಡ್
ಆಗಿರುವ ಸೀರೆ ಹಿಡಿದು ಮಾರನೆಯ ದಿನ ಆಫೀಸಿಗೆ
ಬಂದಾಗ ಆಗಲೇ ಅವಳು ಚಂದದ ಬಳೆ ತೊಟ್ಟು , .ಮೇಕ್ಅಪ್
ಮಾಡಿಕೊಂಡು ತಯಾರಾಗಿ ಕಾಯ್ತಾ ಇರುವುದು ನೋಡಿ ನಾನು ತಡ ಮಾಡದೆ ಅವಳ ಚೇಂಬರ್ ಗೆ ಕಾಲಿಟ್ಟೆ .
ಅಂದು ಅವಳ ಕೋಣೆ ನಮ್ಮ ನಾಟಕದ ಗ್ರೀನ್ ರೂಂ ಆಗಿ ಮಾರ್ಪಾಡಾಯಿತು ,ಅವಳಿಗೆ ನನ್ನದೇ ಒಂದು ರೆವಿಕೆ ಅಡ್ಜಸ್ಟ್ ಮಾಡಿ , ನೀಟಾಗಿ ಸೇರಿ ಉಡಿಸಿ , ಬಿಂದಿ ಇಟ್ಟು ( ವಧುವಿನಂತೆ ) ಅವಳನ್ನು ಹೊರಗೆ ಕರೆ ತಂದಾಗ , ಇನ್ನಿತರ ಅರಬ್ ಸಹದ್ಯೋಗಿಗಳು
, ಅವಳನ್ನೇ ನೋಡುತ್ತಾ ಕಣ್ಣಲ್ಲೇ
ನಕ್ಕು “ ವಾಹ್ , ಇದೇನು ಅರ್ರಾ....ಥಿ , ಸಮಾಳನ್ನು ಅಪ್ಪಟ ಭಾರತೀಯಳನ್ನಾಗಿ ಮಾಡಿಬಿಟ್ಟಿದ್ದೀರಲ್ಲಾ
ಸೂಪರ್ “ ಅಂದಾಗ ನನಗೆ ಏನೋ ಹುಮ್ಮಸ್ಸು . ಅವಳು ಪದೆ ಪದೆ “ ಬಹುತ್ ಶುಕ್ರಿಯ
ಆರತಿ , ಅಂತ
ತಾ ಕಲಿತ ಒಂದೆರಡು ಹಿಂದಿ ಶಬ್ದಗಳನ್ನು ನನ್ನ ಮೇಲೆ
ಪ್ರಯೋಗಿಸಿ , ಸೇರೆಯನ್ನು ಮೇಲೆ ಹಿಡುದು
ಕಷ್ಟಪಟ್ಟು ಸಂಭಾಳಿಸಿಕೊಂಡು
ನಡೆದು ಹೋಗುವುದು ನೋಡಿ ನನಗೂ ನಗು :)
(ಸದ್ಯ ಕಾರ್ಯಕ್ರಮ ಮುಗಿಯುವವರೆಗೂ ಅವಳ ಸೇರೆ ಯಥಾ ಸ್ತಿತಿ ಯಲ್ಲಿದ್ದರೆ ಸಾಕಪ್ಪ ಅಂತ ಬೇಡಿಕೊಂಡೆ )
(ಸದ್ಯ ಕಾರ್ಯಕ್ರಮ ಮುಗಿಯುವವರೆಗೂ ಅವಳ ಸೇರೆ ಯಥಾ ಸ್ತಿತಿ ಯಲ್ಲಿದ್ದರೆ ಸಾಕಪ್ಪ ಅಂತ ಬೇಡಿಕೊಂಡೆ )
ಈ ಮದ್ಯೆ ಒಂದು ದಿನ ನಮ್ಮ ಕಚೇರಿಯಲ್ಲಿ ಅಕ್ಕೋಟೆಂಟ್
ಆಗಿದ್ದ ಹುಸ್ಸೈನ್ ( ಕೇರಳದವರು ,
) . ನನಗೆ ಒಂದು ಸುದ್ದ್ದಿ ತಂದರು,ನಾನು ಮೊದಲೇ
ಹೇಳಿದಂತೆ ನಾವಿಬ್ಬರೇ ಭಾರತೀಯ ಮೂಲದವರು ನಮ್ಮ ಕಚೇರಿಯಲ್ಲಿ . ಅಂದು ಅವರು
ಉತ್ಸಾಹದಿಂದ “ ಆರದಿ ನಿಮಗೆ ಗೊತ್ತಾ ? ನಮ್ಮ ಆಫೀಸಿಗೆ ಒಬ್ಬ ಹೊಸ
ಅಪರೇಷನ್ ಮ್ಯಾನೇಜರ್ ( operation manager ) ಸೇರ್ಪಡೆ
ಆಗ್ತಾ ಇದ್ದಾರಂತೆ ! ಹೆಸರು “ಸಮೀರ್ ಆಚಕರ್ ಅಂತೆ !
ನಾನಾಗ ತಕ್ಷಣ “ ಸಮೀರ್ ಆಚಾರ್ “ ಇರಬಹುದು ಅನ್ಸತ್ತೆ
ಹುಸ್ಸೈನ್ , ಬಾರತೀಯ
ಹೆಸರು ಇದ್ದ ಹಾಗಿದೆ “ ಅಂದೇ ! ಅವರು ಹೇಳಿದ ಹೆಸರಿನ ಸುತ್ತ ನನ್ನ ಊಹಿಸುವಿಕೆ ಆ ಕ್ಷಣದಿಂದಲೇ ಪ್ರಾರಂಭ ವಾಯಿತು . ಒಹ್ ಸಮೀರ್ ಆಚಾರ್ ಅಂದ್ರೆ
ಕರ್ನಾಟಕದವರು ಇರಬಹುದಲ್ಲವೇ
! ಅಂದುಕೊಳ್ಳುತ್ತಾ ಮನಸ್ಸಿಗೆ ಒಂಥರಾ
ಖುಷಿ ಆಯಿತು , ಹಾಗೆ
ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತ ಮನೆತನಕ ಬಂದು , ಮನೆಯಲ್ಲೂ
ನಮ್ಮವರಿಗೆ ಈ ಸುದ್ದಿ ಯನ್ನ ಬಿತ್ತರಿಸಿದಾಗ ಅವರೂ ಆಶ್ಚರ್ಯ ,ಖುಷಿ ಒಟ್ಟೆಗೆ ವ್ಯಕ್ತ ಪಡಿಸಿದ್ದರು ! ಈ
ಅರಬರೆ ತುಂಬಿದ ಆಫೀಸಿನಲ್ಲಿ ನಮ್ಮ ಕನ್ನಡವರಿದ್ದರೆ ಎಷ್ಟು ಚೆನ್ನ ಎನ್ನುವ ಸಂತಸದ
ಭಾವನೆಯನ್ನು ನನ್ನೊಳಗೆ
ಅರಳಿ ಹೂವಾಗಿತ್ತು , ಅಂತೂ ನಮ್ಮ ಹೊಸ ಮ್ಯಾನೇಜರ್ ಆಗಮಿಸುವ ಘಳಿಗೆ ಬಂದೆ ಬಿಟ್ಟಿತು ,ನನಗೋ ಅವರನ್ನು ನೋಡುವ ಕೊತೂಹಲ ಬೆಳೆದು ಹೆಮ್ಮರವಾಗಿ ನಿಂತ್ತಿತ್ತು ! ಅಂದು
ಬೆಳಿಗ್ಗೆ ಒಂಬತ್ತರ ಸುಮಾರಿಗೆ
,ಸೂಟು /ಟೈ ನಲ್ಲಿ ಆಗಷ್ಟೇ ಬ್ಯುಸಿನೆಸ್ಸ್
ಮೀಟಿಂಗ್ ನಿಂದ ಬಂದಂತೆ , ಒಬ್ಬ ಎತ್ತರದ ಸುಂದರ ವ್ಯಕ್ತಿ
ಆಫೀಸಿನೊಳಗೆ ಕಾಲಿಟ್ಟರು . ನಮ್ಮ ಸಹದ್ಯೋಗಿಗಳು ಅವರನ್ನು ಸ್ವಾಗತಿಸಿ ಹೂ ಗುಚ್ಚಳನ್ನು ಕೊಟ್ಟ ನಂತರ , ನಮ್ಮ
ಮ್ಯಾನೇಜರ್ ಅವರನ್ನ ಪರಚಯಿಸುತ್ತ
“ ಫ್ರೆಂಡ್ಸ್ ಇವರು
ಸಾಮೇರ್ ಅಚಾಕರ್ “ ( saamer
achaakar “) ಅಂತ ನಮ್ಮ ಹೊಸ ಅಪರೇಷನ್
ಮ್ಯಾನೇಜರ್ , ಲೆಬಿನಾನಿನ
ದೇಶದವರು “ !!!! ಅಂದರು . ನಾನು ಅವರಿಗೆ “ ಹಲೋ ವೆಲ್ಕಂ ಸರ್ “ ಅಂತ ನಕ್ಕು ಹೇಳಿದರೂ ,
ನನ್ನ ಉತ್ಸಾಹ ಜರ್ರನೆ ಇಳಿದು , ಮನದಲ್ಲಿ ನಿಧಾನವಾಗಿ ನಿರಾಶೆಯ ಕಾರ್ಮೋಡಗಳು ಹೆಪ್ಪುಗಟ್ಟಲಿಕ್ಕೆ ಶುರು ಮಾಡಿದ್ದವು ! . ಇನ್ನು ನಾ ಕಟ್ಟಿಕೊಂಡಿದ್ದ
ಊಹೆಯ ಸೌಧ ಗ್ರೌಂಡ್ ಜೇರೊ ಆಗಿ ಮಲಗಿ ಬಿಟ್ಟಿತ್ತು
ಅಂತ ಬೇರೆ ಹೇಳಬೇಕೆ :)
ಆದರೆ ಆ ( ಪೆದ್ದ) ಭಾವನೆಗಳೆಲ್ಲಾ ಆ ಕ್ಷಣಕ್ಕಷ್ಟೇ
ಜಾಮಯಿಸಿಕೊಂಡು ನಿಧಾನವಾಗಿ ಕರಗಿ ನೀರಾಗಿ ಹರಿದು ಹೋಯಿತು ,ಅಷ್ಟೇ ಅಲ್ಲದೆ ನನಗೆ ನನ್ನ
ಊಹಾಪೋಹಕ್ಕೆ ನನ್ನ ಮೇಲೇ
ನನಗೆ ನಗು ಬರದೆ ಇರಲಿಲ್ಲ ! .
ಆದರೆ ಆಸೆ
ಪಡುವುದರಲ್ಲಿ ತಪ್ಪೇನು
ಇಲ್ಲ ಅಲ್ವೇನ್ರಿ :) ?
ಇರಲಿ , ಈ ನಮ್ಮ ಹೊಸ Operation manager ಮಾತ್ರ ನಮ್ಮ ಕಚೇರಿಗೆ ಕಾಲಿಟ್ಟಾ ಗಿನಿಂದ ಎಲ್ಲರ ಜೊತೆ ಸೌಹಾರ್ದ ತೆಯೇನ್ನೇ ಮೆರೆದಿದ್ದರು , ಎಂದೂ ಬಾಸ್ ಗಿರಿ ತೋರದೆ ತಮ್ಮ ಕಾರ್ಯ ಕ್ಷಮತೆ ,ಸ್ನೇಹ ಸ್ವಭಾವದಿಂದ ನಮೆಲ್ಲರ ಮನಸನ್ನ ಬಹಳ ಶೀಘ್ರದಲ್ಲೇ ಗೆದ್ದು ಬಿಟ್ಟಿರು .
ಇರಲಿ , ಈ ನಮ್ಮ ಹೊಸ Operation manager ಮಾತ್ರ ನಮ್ಮ ಕಚೇರಿಗೆ ಕಾಲಿಟ್ಟಾ ಗಿನಿಂದ ಎಲ್ಲರ ಜೊತೆ ಸೌಹಾರ್ದ ತೆಯೇನ್ನೇ ಮೆರೆದಿದ್ದರು , ಎಂದೂ ಬಾಸ್ ಗಿರಿ ತೋರದೆ ತಮ್ಮ ಕಾರ್ಯ ಕ್ಷಮತೆ ,ಸ್ನೇಹ ಸ್ವಭಾವದಿಂದ ನಮೆಲ್ಲರ ಮನಸನ್ನ ಬಹಳ ಶೀಘ್ರದಲ್ಲೇ ಗೆದ್ದು ಬಿಟ್ಟಿರು .
ನನ್ನ ದಿನಚರಿಗಳು ಏರು
ಪೇರಿಲ್ಲದೆ ಸಾಗಿತ್ತು .
ಆಗ ಜುಲೈ ತಿಂಗಳು , ಆ ವರ್ಷ ಕಾರಣಾಂತರಗಳಿಂದ
ನಾವು ನಮ್ಮ
ವಾರ್ಷಿಕ ರಜೆಗೆ ಭಾರತಕ್ಕೆ ಹೋಗಲಾಗಲಿಲ್ಲ . ಆಗ ಶ್ರಾವಣ ಮಾಸ ಶುರುವಾಗಿತ್ತು
, ಅಂದು ನಾಗರ ಪಂಚಮಿ ಹಬ್ಬ . ಬೆಂಗಳೂರಿನಲ್ಲಿದ್ದಾಗ ಈ
ಹಬ್ಬಕ್ಕೆ ನನಗೆ ತವರಿಗೆ ಹೋಗುವ ರೂಡಿ . ಹೀಗಾಗಿ ಅಮ್ಮನ ನೆನಪಾಗಿ ಯಾಕೋ ಮನಸ್ಸಿಗೆ ಬೇಸರವಾಯಿತು . ಬೆಂಗಳೂರಿನಲ್ಲಿ ನಾವುಗಳು
ಎಷ್ಟು ಶೃದ್ಧಾ ಭಕ್ತಿಯಿಂದ ಹಾಗು ಉತ್ಸಾಹದಿಂದ
ಈ ಎಲ್ಲ ಪಾರಂಪರಿಕ ಹಬ್ಬಗಳನ್ನು ಆಚರಿಸ್ತಾ ಇದ್ದದ್ದು
ನೆನಪಿಸಿಕೊಂಡು ತಾಯಿನಾಡಿನ ಸೆಳೆತ
ತೀವ್ರವಾಗಿ ಕಾಡಿತು. ಆದರೆ ನಾನು
ಇಲ್ಲಿ ಬಂದ ಮೇಲೂ ಇವುಗಳನ್ನೆಲ್ಲಾ ಯಥಾಶಕ್ತಿಯಾಗಿ
ಆಚರಿಸಿಕೊಂಡು ಬಂದಿದ್ದೆ.
ಹಾಗೇನೆ ಇದಕ್ಕೆ ನನ್ನ ಸ್ವಯಂ ಪ್ರೇರಿತ ಆಸಕ್ತಿ ,ಬೆಳದುಬಂದ ಬಂದ ಸಂಸ್ಕೃತಿಯೂ
ಕಾರಣ ವೆನ್ನಬಹುದು . ಇನ್ನೊಂದೆಂದರೆ ಇಲ್ಲಿ ಎಲ್ಲಾ ರೀತಿಯ
ಹಬ್ಬದ ಸಾಮಗ್ರಿಗಳು / ಹೂವು
.ಹಣ್ಣುಗಳು ಯಥೇಚ್ಚವಾಗಿ ಸಿಕ್ಕು ಹಬ್ಬವನ್ನ ಆಚರಿಸಲು ಅನುಕೂಲವಾಗಿತ್ತು. ಇನ್ನು ನಮ್ಮ ಅಕ್ಕ ಪಕ್ಕ ಇದ್ದ
ಕನ್ನಡ ಬಳಗದವರ
ಜೊತೆ ಸೇರಿ ಸಾಂಪ್ರದಾಯಕವಾಗಿ ಕೆಲವು ಆಚರಣೆಗಳನ್ನ
ಅವರೊಂದಿಗೆ ಸೇರಿ ಸಂಭ್ರಮಿಸುವ ಸದವಕಾಶ ,ಸುಯೋಗ ಕೂಡ ನನಗೆ ಒದಗಿ ಬಂದಿತ್ತು .
ಸರಿ ಅಂದು ನಾಗರ ಪಂಚಮಿಯಾದ್ದರಿಂದ
ನಾನೂ ಸಹ ಭಕ್ತಿಯಿಂದ ನಾಗಪ್ಪನಿಗೆ
ಹಾಲೆರೆದು , ತಂಬಿಟ್ಟು ಉಂಡೆಗಳನ್ನು
ಅರ್ಪಿಸಿ , ಪೂಜೇ
ಮುಗಿಸಿ ಆಫೀಸಿಗೆ ಸೀರೆ ಉಟ್ಟುಕೊಂಡು ಹೊರಟೆ . ಆಗ ನನ್ನ
ಲೆಬನೀಸ್ ಮಿತ್ರರು
( ಅದೇ ನಮ್ಮ ಪ್ರಾಜೆಕ್ಟ್ ಮ್ಯಾನೇಜರು ! ನನ್ನು
ಕುರಿತು “ ಒಹ್ ಅರ್ರಾ ....ತೀ ,ಏನು ಇವತ್ತು ಭಾರತೀಯ
ಉಡುಗೆಯಲ್ಲಿ ಬಂದು ಬಿಟ್ಟಿದ್ದೀರಾ ! ತುಂಬಾ ಚನ್ನಾಗಿದೆ
,! ಇದು ನಿಮಗೆ ಯಾವ ಈದ್ ? ಅಂತ ತಮಾಷೆ ಮಾಡಿದಾಗ , ನನಗೂ ಇವರಿಗೆ ಸ್ವಲ್ಪ
ತಮಾಷೆ ಮಾಡಿನೋಡೋಣಾ ಅಂತ
ಅನಿಸಿತು . ನಾನು “ ಸರ್ ಇವತ್ತು
snake god “ (ನಾಗಪ್ಪನ) ಹಬ್ಬ ! ಅಂದಾಗ ಅವರಿಗೆ ಒಂಥರಾ ಶಾಕ್ ! ಆಗ ಅವರು
“ ಏನು ! ನಿಮಗೆ ಹಾವೂ ಕೊಡಾ ದೇವರೇ “ ? ಅಂತ ಭಯ ಮಿಶ್ರಿತ
ಆಶ್ಚರ್ಯದ ಕಣ್ಣುಗಳನ್ನು ದೊಡ್ಡದಾಗಿ ಹಿಗ್ಗಿಸಿ
ಕೇಳಿದರು. ! ನಾನು “ ಹೌ ದು ಸರ್
ನಮ್ಮ ಸಂಪ್ರದಾಯದಲ್ಲಿ ಕೆಲವು ಪ್ರಾಣಿಗಳು
ವಿಶೇಷವಾದವು , ಅವುಗಳು
ನಮಗೆ ದೇವರ ಸ್ವರೂಪ
“ ಅಂದೆ . ಅವರು ಸುಮ್ನೆ ಇರದೇ , ಗೊತ್ತೇ ಇದ್ಯಲ್ಲ ಅವರಿಗೆ ಇನ್ನಷ್ಟು
ತಿಳಿಯುವ ಕೂತೂಹಲ ಎಂದಿನಂತೆ
! “ ಸರಿ
ಈ ಹಬ್ಬಾನಾ ಹೇಗೆ ಆಚರಸ್ತೀರಾ
? “ ಅಂತ ಆಸಕ್ತಿಯಿಂದ ಕೇಳಿದ್ರು . ನಾನಾಗ “ ಸರ್ ನಾವು ಸ್ನೇಕ ಗಾಡ್ನನನ್ನು ಭಕ್ತಿಯಿಂದ ಪೂಜಿಸಿ , ಹಾಲೆರದು
, ಸ್ವೀಟ್ಟ್ಗಳನ್ನು ಅರ್ಪಿಸ್ತೇವೆ
ಅಂದೆ !” ಅವರು ಆಗ
ಜೀವಂತ ಹಾವನ್ನೇ ಕಲ್ಪಿಸಿಕೊಂಡು , ನನ್ನನ್ನು ಕಾಡಿನಲ್ಲಿ ಬೇಟೆಗಾರನ
ರೊಪದಲ್ಲಿ ಚಿತ್ರಿಸಿಕೊಂಡರೇನೂ ಅನ್ಸತ್ತೆ ! ,ಅವರಿಗೇಕೂ
ನಾನು ಹೇಳುತ್ತಿರುವುದು ಮನದಟ್ಟಾಗಲಿಲ್ಲ . ! ಅದರ ಬದಲು ಅವರ ಮನವೇ
ದಟ್ಟ ಕಾಡಾಗಿ ಅಲ್ಲಲ್ಲಿ
ಆಶ್ಚರ್ಯದ ಮುಳ್ಳುಗಳೇ ಎದ್ದು ನಿಂತ
ಹಾಗೆ ನನಗೆ ಕಂಡಿತು , ನಾನು ಒಳಗೊಳಗೇ ನಗು ತಡೆದು ಕೊಂಡು ಮುಂದುವರಿಸುತ್ತಾ “ ಸರ್ ಪೂಜೆ ಎಲ್ಲಾ
ಮುಗಿಸಿ ನ್ಯೈವೇದ್ಯಾ
( ಈ ಶಬ್ದ ಅವರಿಗೆ ವೇದ್ಯ ವಾಗುವ ಹಾಗೆ ವಿವರಿಸಿ ) ವಾದ ನಂತರ ನಾವೂ ಸ್ವೀಕರಸ್ತೀವಿ .” ಅಂದೆ . ಅವರು
ಸೀಟಿನಿಂದ ಚಂಗನೆ ಮೇಲೆದ್ದು “ you u mean the snake ?
“ ಅಂತ
ಘಾಬರಿಯಾಗಿ ಕೇಳಿದ್ರು :)
( ಅವರಿಗೆ ಚೀನಾ ದೇಶಾ
ನೆನಪಾಗಿರಬೇಕು, ) ಆಗಾ ನನಗೆ
ನಗು ತಡೆಯಲು ಆಗಲೇ ಇಲ್ಲ “ ಸರ್ ಅಲ್ಲ ! ದೇವರಿಗೆ ಅರ್ಪಿತವಾಗಿರುವ ಸ್ವೀಟ್ಸ್ ತಿಂತೀವಿ
“ ಅಂದೇ (ನನ್ನ ತಮಾಷೆ ಹೀಗೆ
ಕ್ಲಾಮಾಕ್ಸ್ ( climax ) ಹಂತಕ್ಕ
ತಲುಪಿದ್ದು ಕಂಡು ನನಗೆ ಆಶ್ಚರ್ಯ ಒಂದು ಕಡೆ ಯಾದರೆ
ಉಕ್ಕಿ ಬರುತ್ತಿರುವ ನಗು ಇನ್ನೊಂದು ಕಡೆ
! ಆಗ
ಅವರೂ ಜೋರಾಗಿ ನಗುತ್ತಾ “ ಓಹೋ ಅರ್ರಾ ....ತಿ ನನಗೆ ತಮಾಷೆ ಮಾಡ್ತಾ ಇದ್ದೀರಾ ! ಪರವಾಗಿಲ್ಲಾ ನೀವು
! ಆದರೆ ನೀವು ಎಲ್ಲಾ
ದೇವರಗಳನ್ನು ಮೂರ್ತಿಗಳ
ರೂಪದಲ್ಲಿ
ಪೂಜಿಸ್ತೀರಾ ಅಲ್ವಾ , ? ನನಗೆ ಗೊತ್ತು ಬಿಡಿ ,
ನೀವು ಮೊದಲೇ ನನಗೆ ಇದರ ಬಗ್ಗೆ ಹೇಳಿದ್ದೀರಾ ಅಲ್ವಾ ? ನಾನೂ ನಿಮಗೆ ಸ್ವಲ್ಪ ತಮಾಷೆ ಮಾಡಿ ನೋಡ್ತಾ ಇದ್ದೆ ಅಷ್ಟೇ “ :) ಅಂತ ಕಿಚಾಯಿಸಿದಾಗ
ಇಬ್ಬರೂ ಮನಸಾರೆ ನಕ್ಕು
ಬಿಟ್ಟೆವು !
ಹೀಗೇ ಮನದ
ಖಜಾನೆಯಿಂದ ನೆನಪುಗಳನ್ನ ಕೆದಕುತ್ತಾ ಹೋದಾಗ , ಅವುಗಳ ಜೊತೆಯಲ್ಲೇ ಈ ಸ್ವಾರಸ್ಯ ಕರ ಅನುಭವಗಳೂ ಮುತ್ತುಗಳಂತೆ
ಒಂದೊಂದೇ ಹೊಳೆಯುತ್ತಾ ನನ್ನ ಕೆಣಕಲು , ನನ್ನ
ತುಟಿಯ ಮೇಲೆ ಮಂದಹಾಸ, ಮೂಡಿ ,ಮನಸ್ಸಿಗೆ
ಮಾತ್ರ ಕಚಗುಳಿ ಇಟ್ಟ ಅನುಭವವಾಯಿತು !
ಆರತಿ ಘಟಿಕಾರ್
ದುಬೈ
ಅವರಿಗೆ ನಮ್ಮ ಕೆಲವು ಧಾರ್ಮಿಕ ಆಚರಣೆ/ಪದ್ಧತಿಗಳನ್ನು ಕೇಳಿ ತಿಳಿಯುವ ಕೂತುಹಲ ಅಷ್ಟೇ, ಆದರೆ ನಮಗೇ ಅವುಗಲ ಪೂರ್ಣ ಅರಿವೆಲ್ಲಿದೆಯಂತೀರ?
ReplyDelete