Saturday, September 14, 2013

ಅಂತರಾಳದ ದನಿಗಳು









ಉಸಿರನೊತ್ತಿ ಗೋಡೆಗೆ ಮೆಲ್ಲನೆ
ಪಿಸುನುಡಿಗಳ ಕಾಡುವ ದಂಡು
ಅಲ್ಲೇ ಕಾರ್ಗತ್ತಲ ಕಿರು ಓಣಿ
ಬೆಳಕ ಚೆಲ್ಲುತ್ತಾ , ಆವರಿಸುತ್ತಾ
ದೂರದೂರಕೂ ಚದುರಿದ ದ್ವನಿಗಳು

ಮನದ ನಿಲ್ಲದ ಹಾವು –ಏಣಿ ಆಟಕೆ
ಅಳಕ್ಕೂ ಬಗೆದು ಕೊರೆವ ಕೀಟಗಳು
ಬೇಗುದಿಗಳ ಮಂಥನದ ಸೀಳು ನೋಟಕೆ
ಎದೆಯಾಗಸದ ಅಹಮಿನ ಹಾರಾಟಕೆ
ತಿದ್ದಿ ತೀಡಿ ಮೆರವ ಒಲ್ಲದ ಪಾಠಗಳು .

ಪ್ರತಿದ್ವನಿಗಳ ಅಲೆ , ಎಡವುತ್ತಲೇ ಅಪ್ಪಳಸಿ
ಅರಿವಿಲ್ಲದ ಹೊಸ ರಾಗ , ಹೃದಯ ತೀರಕೆ.
ನಿಂತಲ್ಲೇ ಚಿಗುರಿ , ಹಬ್ಬಿದ ಎತ್ತರ ಬಳ್ಳಿಗಳು
ಬಣ್ಣವಿಲ್ಲದ ಮುಖಗಳ ನೂರಾರು ಕೂಗು , ಕೇಕೆ
ಮುಚ್ಚುಮರೆಯಿಲ್ಲದ ಆಪ್ತ ದನಿಗಳು ,ಅಂತರಾಳಕೆ

3 comments :

  1. ಒಳ ದನಿಗಳಿಗೆ ಹಲವು ಭಾಷೆ! ಅದು ಅತ್ತಾಗ ತಟ್ಟನೆ ಮಾತೃ ಭಾಷೆ!!
    ಒಳ ದನಿಯಲೊಂದು ಸ್ವರ ಹೊಮ್ಮಿ - ಗಂಟಲಿಂದ ಹೊಮ್ಮುವಾಗಲೂ ಬೇರೆ ಸ್ವರ ಸೃಷ್ಟಿ.

    ನಿಜವಾಗಲೂ ಹತ್ತರಾಚೆ ನಿಲ್ಲುವ ಹೂರಣದ ಕಾವ್ಯ.

    ReplyDelete
  2. ಸುಂದರವಾಗಿದೆ ಕವಿತೆ ಸಾಲುಗಳು ..

    ReplyDelete
  3. ಸುಂದರವಾಗಿದೆ ಕವಿತೆ ಸಾಲುಗಳು

    ReplyDelete