Friday, April 27, 2012

ಅನುಭವದ ಹಾಡು

ಅನುಭವದ ಹಾಡು
ಣು ಅಣುವಾಗಿ ಆವರಿಸುತ್ತ
ನಡೆದಂತೆಲ್ಲ  ನೆರಳಾಗುವ 
ಅಲೆಮಾರಿ ಹಕ್ಕಿಯಂತೆ
ಬಾಳಿನುದ್ದಕ್ಕೋ ಕಟ್ಟಿಕೊಳ್ಳುತ್ತಾ
ನೋವು ನಲಿವುಗಳ ಕಂತೆ .

ಅನುಭವದ ಬಸಿರಿನಲ್ಲಿ
ಹುಟ್ಟುವ, ದಿನಕ್ಕೊಂದು
ಬಾಳಿನರ್ಥ .
ಕ್ಷಣ ಕ್ಷಣವೂ ದುಡಿದು
ಬೆವರಿ , ತೇರನ್ನೆಳೆದು
ನೆನಪಿನ ಖಜಾನೆ ತುಂಬುವ ಪರಿ
ಹೇಗಾದೀತು ವ್ಯರ್ಥ .

ಇದಕ್ಕಿಲ್ಲ ಕಾಲದ ಚಿಂತೆ
ವಯಸ್ಸಾಗಿ ಬಾಗಿದರೂ
ಬದುಕಿನ ಸಂತೆಯೊಳಗೆ
ಬಿಮ್ಮನೆ ಬೀಗುವುದು
ಮೈ ಮನವನ್ನೆಲ್ಲ ಹಿಗ್ಗಿಸಿ ನಗುವುದು
ಬೆನ್ತಟ್ಟಿ ಏರಿಸಿದ ಕಿರೀಟಕ್ಕೆ ,

ಕಚಗುಳಿಯನಿಕ್ಕುತ್ತ ಹುಸಿ ನಗೆ
ತರಿಸುವ ಮರೀಚಿಕೆಗೆ
ಮೊಳಗೀತೆ ಎಚ್ಚರಿಕೆಯಾ ಗಂಟೆ
ಒಂದೊಂದು ಕಥೆಯೂ ಹಣತೆಯಾಗುತ್ತ
ಬಾಳ ಹಾದಿಯಸುತ್ತಾ ಬೆಳಗಲಿ ,
ಅನುಭವದ ಹಾಡಾಗಲಿ ಕಾಲಚಕ್ರದ ಕೋಟೆ !

No comments :

Post a Comment