Wednesday, April 18, 2012

ನವ್ಯ

ಓಂ ಗಣೇಶಾಯ ನಮಃ
ನವ್ಯ


ನಿತ್ಯವೂ ಬೀಳುವ ಮಂಜಿನ ಹನಿ ಹುಲ್ಲಿಗೆ ಹಳೆಯದಾದರೂ ...
ಹುಲ್ಲನ್ನೇ ಆಸರೆಯಾಗಿ
ತಬ್ಬಿ ಹಿಡಿದ ಮಂಜಿನ ಹನಿಗೆ
ಇದು ಹೊಸತಲ್ಲವೇ !
ನಿತ್ಯವೂ ಬೆಳದಿಂಗಲಾಟ ನೋಡುವ ಕಡಲಿಗೆ ಅದು ಹಳೆಯದಾದರೂ ;
ಘಳಿಗೊಮ್ಮೆ ಬಂದು
ಸ್ಪರ್ಶಿಸುವ ಬೆಳದಿಂಗಳ ತುಂಟಾಟ
ಅಲೆಗಳಿಗೆ ಹೊಸತಲ್ಲವೇ !

ನಿತ್ಯವೂ ಮುದ್ದಿಸಲು ಬರುವ ಎಳೆಕಿರಣಗಳು ಸೂರ್ಯಕಾಂತಿಗೆ ಹಳೆಯದಾದರೂ ;
ಅಲೆ ಅಲೆಯಾಗಿ ಧರೆಗೆ ಧುಮುಕಿ
ಧಿಗ್ಭ್ರಮೆ ಗೊಳಿಸುವ , ಸೂರ್ಯಕಾಂತಿಯ ಸೌಂದರ್ಯದ ಅನುಭೂತಿ
ಎಳೆಕಿರಣಗಳಿಗೆ ಹೊಸತಲ್ಲವೇ !

ನಿತ್ಯವೂ ಸಾವಿರಾರು ವಲಸೆಹಕ್ಕಿಗಳ ಹಾರಾಟ ಆಗಸಕ್ಕೆ ಹಳೆದಾದರೂ ;
ದೇಶ ದೇಶ ಸುತ್ತುತ್ತ ಮೋಡಗಳನ್ನು
ಶಬ್ಧವೆಧಿಯಂತೆ ಭೇದಿಸುತ್ತಾ ದಿಕ್ಕು ಬದಲಿಸುವ
ಹಕ್ಕಿಗೆ ಇದು ಹೊಸತಲ್ಲವೇ !

ನಿತ್ಯವೂ ಮನಸ್ಸಿನ ಕದ ತಟ್ಟುವ ಕನಸುಗಳು, ಮನಕ್ಕೆ ಹಳೆಯದಾದರೂ ;
ಮನದಿಂದ ಮನಕ್ಕೆ
ಸುಂದರ ಚಿತ್ರಗಳನ್ನು ಬಿಡಿಸಿ ಬಣ್ಣಹಚ್ಚುವ
ಕನಸುಗಳಿಗೆ ಇದು ಹೊಸತಲ್ಲವೇ !

                                                                      ( ವಿಶ್ವ ಕನ್ನಡ ಪತ್ರಿಕೆಯಲ್ಲಿ ಬಂದ ಕವನ )

No comments :

Post a Comment