Thursday, April 26, 2012

ಅವ್ಯಕ್ತ


 ಮನದ ಗೆಳತಿಯೊಂದಿಗೆ ಕನಸಿನ ಹುಡುಗನ ಬಗ್ಗೆ ಹಂಚಿಕೊಂಡ ಭಾವನೆಗಳು

ಅವ್ಯಕ್ತ

ಮೊಗ್ಗಿನ ಮನಸು , ಹರಯದಾ ಕನಸು ,
ಮೂಡಣದ ಕೆಂಪಿನಲ್ಲೂ ಜಗವ
ತೋರಿಸುವನೇನೆ ?

ಅಂತರಂಗವನ್ನೇ ಅರಸಿ
ಕಾಣದ ಸೌಂದರ್ಯಕ್ಕೂ ನಮಿಸಿ ,
ಒಲವಿನ ದೀಪ ಹಚ್ಚುವನೇನೆ ?

ತುಟಿಯಂಚಿನ ನಗುವನ್ನೇ
ಮೂರ್ತಿಯಾಗಿಸಿ ,
ಗೋಪುರದ ಗುಡಿ ಕಟ್ಟುವನೇನೆ?

ನೋವಿನಂಚೆ ತೆರವ ಮುಂಚೆ
ಬಚ್ಚಿಟ್ಟ ಮೌನರಾಗಕ್ಕೂ ,
ಸ್ಪಂಧಿಸುವನೇನೆ?

ದ್ವಂದ್ವಗಳ ಬಿಸಿಯುಸಿರಿಗೆ
ಬೇಗುದಿಗಳ ಬೆಂಕಿಗೆ ,
ಚಂದಿರನ ತಂಪು
ತರುವನೇನೆ?

ಆದರ್ಶಗಳ ಪದರು ಬಿಡಿಸದೆ
ಭಾವಗಳ ಬಿಂಬ ಕಲಕದೆ ,
ನನ್ನನ್ನು ನಾನಾಗಿಯೇ
ಉಳಿಸುವನೇನೆ?

ಬಾಳಚಕ್ರ ದಾರಿ ವಕ್ರ
ಕೊನೆಯುಸಿರಿನಲ್ಲೂ
ಚೇತನಾಮೂರ್ತಿ
ಆಗುವನೇನೆ?


2 comments :